ಸಮಗ್ರ ನ್ಯೂಸ್: ಕೆಲವು ದಶಕಗಳ ಹಿಂದೆ ದೇಶದ ಕಾರು ಮಾರು ಕಟ್ಟೆಯನ್ನು ಆಳಿ ಈಗ ತೆರೆಮರೆಗೆ ಸರಿದಿರುವ ಅಂಬಾಸಡರ್ ಕಾರು ಮತ್ತೆ ಹೊಸ ಅವತಾರದೊಂದಿಗೆ ಪ್ರತ್ಯಕ್ಷವಾಗಲಿದೆ. ಅಂದು ತನ್ನ ವಿಭಿನ್ನ ಗೆಟಪ್ ನಿಂದ ಎಲ್ಲರ ಮನಗೆದ್ದಿದ್ದ ಅಂಬಾಸಿಡರ್ ಮತ್ತೆ ಹೊಸ ವರಸೆಯೊಂದಿಗೆ ರಸ್ತೆಗಿಳಿಯಲಿದೆ.
ಹೌದು. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಎರಡು ವರ್ಷಗಳಲ್ಲಿ ಇದು ನಿಜವಾಗಲಿದೆ. ಹಿಂಡ್ ಮೋಟಾರ್ ಫೈನಾನ್ಶಿಯಲ್ ಕಾರ್ಪೊರೇಶನ್ ಆಫ್ ಇಂಡಿಯಾ (ಎಚ್‌ಎಂಎಫ್ಸಿಐ) ಮತ್ತು ಫ್ರೆಂಚ್ ಕಾರು ಕಂಪೆನಿ ಪಝೋಟ್ “ಆ್ಯಂಬಿ’ಯ ಹೊಸ ನೂತನ ವಿನ್ಯಾಸ ಮತ್ತು ಎಂಜಿನ್‌ಗಾಗಿ ಸಹಯೋಗ ಸ್ಥಾಪಿಸಿಕೊಂಡಿದ್ದು, ಹೊಸ ಅವತಾರದಲ್ಲಿ ಅನಾವರಣಗೊಳಿಸಲಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇದನ್ನು ಹಿಂದೂಸ್ತಾನ್ ಮೋಟಾರ್ನ ಚೆನ್ನೈ ಘಟಕದಲ್ಲಿ ಉತ್ಪಾದಿಸಲಾಗುತ್ತದೆ ಎಂದು ವರದಿಯಾಗಿದೆ.
ಹಿಂಡ್ ಮೋಟಾರ್ ಫಿನಾನ್ಶಿಯಲ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಫ್ರಾನ್ಸ್‌ನ ಕಾರು ತಯಾರಕ ಕಂಪನಿ ಪ್ಯೂಗಟ್ ಜಂಟಿಯಾಗಿ “ಆ್ಯಂಬಿ’ ಕಾರುಗಳ ವಿನ್ಯಾಸ ಮತ್ತು ಎಂಜಿನ್ ನಿರ್ಮಾಣದಲ್ಲಿ ತೊಡಗಿವೆ. ಸಿಕೆ ಬಿರ್ಲಾ ಸಮೂಹದ ಅಂಗಸಂಸ್ಥೆಯಾದ ಹಿಂದುಸ್ತಾನ್ ಮೋಟಾರ್ಸ್ ನ ಚೆನ್ನೈ ಘಟಕದಲ್ಲಿ ಹೊಸ ಮಾದರಿಯ ನಿರ್ಮಾಣ ಕಾರ್ಯ ನಡೆಯ ಲಿದೆ. ಈ ಘಟಕವು ಈ ಹಿಂದೆ ಮಿಟ್ಸುಬಿಶಿ ಕಾರುಗಳನ್ನು ತಯಾರಿಸಿ ಯಶಸ್ವಿಯಾಗಿತ್ತು.
ದೇಶದ ಅತ್ಯಂತ ಹಳೆಯ ಕಾರು ತಯಾರಕ ಕಂಪನಿ ಹಿಂದುಸ್ತಾನ್ ಮೋಟಾರ್ಸ್ 2014ರಲ್ಲಿ ಅಂಬಾಸಿಡರ್ ತಯಾರಿಕೆಯನ್ನು ಸ್ಥಗಿತಗೊಳಿಸಿತ್ತು. ಭಾರೀ ಪ್ರಮಾಣದ ಸಾಲ ಹಾಗೂ ಬೇಡಿಕೆಯ ಕೊರತೆಯಿಂದಾಗಿ ಈ ನಿರ್ಧಾರ ಕೈಗೊಂಡಿತ್ತು. ತಂತ್ರಜ್ಞಾನ ಹಾಗೂ ಆರಾಮದಾಯಕತೆಯಲ್ಲಿ ಬೇರೆ ಕಾರುಗಳೊಂದಿಗೆ ಪೈಪೋಟಿ ನೀಡಲು ಸಾಧ್ಯವಾಗದ ಕಾರಣ ಅಂಬಾಸಿಡರ್ ಇತಿಹಾಸದ ಪುಟ ಸೇರಿತ್ತು. 2017ರಲ್ಲಿ ಈ ಕಂಪನಿಯ ಮಾಲೀಕ ಸಿಕೆ ಬಿರ್ಲಾ ಗ್ರೂಪ್, ಈ ಕಾರಿನ ಬ್ರ್ಯಾಂಡ್ ಅನ್ನು ಫ್ರಾನ್ಸ್‌ನ ಕಂಪನಿಗೆ 80 ಕೋಟಿ ರೂ.ಗಳಿಗೆ ಮಾರಾಟ ಮಾಡಿತ್ತು.