Ad Widget .

ಮಂಗಳೂರು: ಅಡ್ಯಾರ್ ನಲ್ಲಿ ಎಸ್ಡಿಪಿಐ ಬೃಹತ್ ಜನಾಧಿಕಾರ ಸಮಾವೇಶ| ಸರ್ಕಾರ, ಹಿಂದೂ ಸಂಘಟನೆಗಳ ಮೇಲೆ ಮುಗಿಬಿದ್ದ ನಾಯಕರು|

ಸಮಗ್ರ ನ್ಯೂಸ್: ರಾಜ್ಯ ಸರಕಾರದ ಆಡಳಿತ ಹಾಗೂ ವಿರೋಧ ಪಕ್ಷದ ವೈಫಲ್ಯದ ವಿರುದ್ಧ SDPI ವತಿಯಿಂದ ಮಂಗಳೂರಿನ ಅಡ್ಯಾರು ಕಣ್ಣೂರು ಮೈದಾನದಲ್ಲಿ ಬೃಹತ್ ಜನಾಧಿಕಾರ ಸಮಾವೇಶ ಕಾರ್ಯಕ್ರಮವು ಶುಕ್ರವಾರ (ಮೇ.27) ನಡೆಯಿತು.

Ad Widget . Ad Widget .

ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಸಂಘಪರಿವಾರದ ಚಡ್ಡಿಗಳೇ ಧಂ ಇದ್ರೆ, ತಾಕತ್ತಿದ್ರೆ ಬಳ್ಳಾರಿಯಲ್ಲಿ ನಿಮ್ಮದೇ ನಾಯಕ ಜನಾರ್ದನ ರೆಡ್ಡಿ 200 ವರ್ಷ ಹಳೆಯದಾದ ದೇವಸ್ಥಾನ ಒಡೆದ ಸ್ಥಳದಲ್ಲಿ ತಾಂಬೂಲ ಪ್ರಶ್ನೆ ಕೇಳಿ. ಇಲ್ಲಿ ವ್ಯಾಪಾರ ಬಹಿಷ್ಕಾರ ಮಾಡಿ, ನಿಮ್ಮ ಗುರು ಬೊಮ್ಮಾಯಿ ಮುಸ್ಲಿಂ ಉದ್ಯಮಿ ಯೂಸಫ್‌ ಅಲಿ ಜೊತೆ 2 ಸಾವಿರ ಕೋಟಿ ಒಪ್ಪಂದ ಮಾಡಿದಾಗ ನಾಚಿಕೆಯಾಗಲ್ವಾ? ಎಂದು ಪ್ರಶ್ನಿಸಿದರು.

Ad Widget . Ad Widget .

‘2006ರ ಸೆ.3.ರಂದು ಬಳ್ಳಾರಿಯ ಸಂಡೂರಿನಲ್ಲಿ 200 ವರ್ಷದ ಹಳೆಯದಾದ ಸುಗ್ಗುಲಮ್ಮ ದೇವಸ್ಥಾನವನ್ನು ಬಾಂಬ್‌ ಇಟ್ಟು ಒಡೆದು ಹಾಕಿ, ದೇವಿಯ ವಿಗ್ರಹ ನಾಶ ಮಾಡಿದ್ದು ನಿಮ್ಮದೇ ಬಿಜೆಪಿ ನಾಯಕ ಜನಾರ್ದನ ರೆಡ್ಡಿ. ಈಗ ನಿಮಗೆ ತಾಕತ್ತಿದ್ದರೆ ತಾಂಬೂಲ ಪ್ರಶ್ನೆ ಕೇಳಿ, ರೆಡ್ಡಿ ಮನೆಗೆ ಪಾದಯಾತ್ರೆ ಮಾಡಿ. ಈ ಬಗ್ಗೆ ಬಿಜೆಪಿ ಸಂಸದ ಪ್ರತಾಪ್‌ ಸಿಂಹ ತಮ್ಮ ಬೆತ್ತಲೆ ಪ್ರಪಂಚ ಪುಸ್ತಕದಲ್ಲಿ ಬರೆದಿದ್ದಾರೆ.

ಒಂದು ನೆನಪಿಡಿ ಮಳಲಿ ಮಸೀದಿಯ ಜಾಗದ ಒಂದು ಹಿಡಿ ಮರಳು ನಿಮಗೆ ಸಿಗಲಿಕ್ಕಿಲ್ಲ. ಆರ್‌ಎಸ್‌ಎಸ್‌ ಆಟಾಟೋಪಕ್ಕೆ ಕಾಂಗ್ರೆಸ್‌-ಜೆಡಿಎಸ್‌ ಬೆದರಬಹುದು ನಿಮ್ಮ ಆಟಕ್ಕೆ ಬೆದರುವ ಮಕ್ಕಳು ನಾವಲ್ಲ. ಬೊಮ್ಮಾಯಿ ಅಧಿಕಾರಕ್ಕೆ ಬಂದ ನಂತರ ನಾಗ್ಪುರದ ಅಜೆಂಡಾವನ್ನು ಜಾರಿಗೆ ತರಲು ಯತ್ನಿಸುತ್ತಿದ್ದಾರೆ.
ಇಲ್ಲಿ ಮುಸ್ಲಿಮರಿಗೆ ವ್ಯಾಪಾರ ಬಹಿಷ್ಕಾರ ಹಾಕುವ ನಿಮ್ಮ ಗುರು ಇದೇ ಬೊಮ್ಮಾಯಿ ಯೂಸಫ್‌ ಅಲಿ ಎಂಬ ಬ್ಯಾರಿಯೊಂದಿಗೆ 2 ಸಾವಿರ ಕೋಟಿಯ ವ್ಯವಹಾರಕ್ಕೆ ಸಹಿ ಹಾಕುತ್ತಾರೆ.
ನಾಚಿಕೆಯಾಗಲ್ವೇ?, ನಿಮ್ಮ ಬಹಿಷ್ಕಾರ ಬಡ ಮುಸ್ಲಿಮನ ಮೇಲಾ, ನಿಮಗೆ ಯೂಸಫ್‌ ಅಲಿ ಪರ್ಸೆಂಟ್‌ ಕೊಡ್ತಾರೆ. ಮಂಗಳೂರು ಎನ್‌ಆರ್‌ಸಿ ಪ್ರತಿಭಟನೆ ವೇಳೆ ಗುಂಡು ಹಾರಿಸಲು ಸಾಧ್ಯವಾ ಗುವುದಾದರೆ, ಶಿವಮೊಗ್ಗದಲ್ಲಿ 144 ಸೆಕ್ಷನ್‌ ವೇಳೆ ಮುಸ್ಲಿಂ ಅಂಗಡಿಗಳ ಮೇಲೆ ಸಂಘ ಪರಿವಾರದ ಗೂಂಡಾಗಳು ದಾಳಿ ನಡೆಸುವಾಗ ಪೊಲೀಸರೇ ನಿಮ್ಮ ಬಂದೂಕಿನಲ್ಲಿ ಗುಂಡುಗಳು ಇರಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

SDPI ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್‌ ಫರಂಗಿಪೇಟೆ ಮಾತನಾಡಿ, ದೇಶದಲ್ಲಿ ನಡೆಯುವ ಕೋಮುವಾದ ಆಟಾಟೋಪಗಳನ್ನು ನೋಡಿ ಪ್ರಧಾನಿ ಮೋದಿ, ಮುಖ್ಯಮಂತ್ರಿ ಬಟ್ಟೆ ಕಟ್ಟಿಕೊಂಡಿದ್ದಾರೆ. ಒಂದಲ್ಲ ಒಂದು ದಿನ ನಿಮ್ಮ ಕಣ್ಣಿನ ಬಟ್ಟೆ ಬಿಚ್ಚಿ ಬೀದಿಯಲ್ಲಿ ಅಟ್ಟಾಡಿಸಿ ಹೊಡೆಯುವ ದಿನಗಳು ದೂರವಿಲ್ಲ.
ಶ್ರೀಲಂಕಾ ಉದಾಹರಣೆಯಾಗಿ ನೋಡಿ ಎಲ್ಲಿ ಅನೀತಿ, ಕೋಮುವಾದ ಹೆಚ್ಚಾದಾಗ ಆಡಳಿತ ವ್ಯವಸ್ಥೆಯ ವಿರುದ್ಧ ದಂಗೆ ಏಳುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಕಾರ್ಯಕ್ರಮದಲ್ಲಿ ಎಸ್ಡಿಪಿಐ ನ ಪ್ರಮುಖ ಮುಖಂಡರು, ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Leave a Comment

Your email address will not be published. Required fields are marked *