ಕಲ್ಲಡ್ಕ: ಮಹಡಿಯಿಂದ ಬಿದ್ದು ಬಾಲಕ ಸಾವು

ಸಮಗ್ರ ನ್ಯೂಸ್: ಆಡುತ್ತಿದ್ದಾಗ 6 ನೇ ಕ್ಲಾಸಿನ ವಿದ್ಯಾರ್ಥಿಯೋರ್ವ ಆಯತಪ್ಪಿ ಮೂರನೇ ಮಹಡಿ ಮೇಲಿನಿಂದ ಬಿದ್ದು ಮೃತಪಟ್ಟ ಘಟನೆ ನಿನ್ನೆ ಕಲ್ಲಡ್ಕದಲ್ಲಿ ನಡೆದಿದೆ.

Ad Widget ... ..

ಕಲ್ಲಡ್ಕ ನಿವಾಸಿ ಅಹಮ್ಮದ್ ಅವರ ಪುತ್ರ ಮಹಮ್ಮದ್ ಸಾಹಿಲ್ (10) ಮೃತಪಟ್ಟ ಬಾಲಕ. ಕಲ್ಲಡ್ಕ ಸಮೀಪದ ಗೊಳ್ತಮಜಲು ಎಂಬಲ್ಲಿರುವ ಸಿಟಿಪ್ಲಾಜಾ ರೆಸಿಡೆನ್ಸಿಯ ಮೂರನೇ ಮಹಡಿಯ ಸೀಟ್ ಹೌಸ್ ನಲ್ಲಿ ಸಾಹಿಲ್ ಗೆಳೆಯರ ಜೊತೆ ಆಟ ಆಡುತ್ತಿದ್ದ.

Ad Widget

ಆ ವೇಳೆ ಆಯತಪ್ಪಿ ಮೂರನೇ ಮಹಡಿಯ ಮೇಲಿನಿಂದ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮುಂಜಾನೆ ವೇಳೆ ಸಾವನ್ನಪ್ಪಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *