ಸಮಗ್ರ ನ್ಯೂಸ್: ವಾಟ್ಸಾಪ್ ಸ್ಟೇಟಸ್‌ನಲ್ಲಿ ಶಿವ ದೇವರನ್ನು ಅವಮಾನಿಸಿ ಬರೆದು ಹಾಕಿದ ಹಿನ್ನಲೆ ಆಕ್ರೋಶಗೊಂಡ ಹಿಂದೂ ಜಾಗರಣ ವೇದಿಕೆ ವಿಟ್ಲ ಪ್ರಖಂಡ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.
ವಿಟ್ಲ ಕಸಬಾದ ಒಕ್ಕೆತ್ತೂರು ಊರುದಂಗಡಿಯ ನಿವಾಸಿ ರಸೀದ್ ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಿಂದೂ ಬಾಂಧವರು ಪೂಜಿಸುವ ಶಿವಲಿಂಗವನ್ನು ಅಸಭ್ಯವಾಗಿ ನಿಂದಿಸಿದ್ದಾನೆ ” ಸಾಬ್ರೆ…. ಒಳ ಉಡುಪುಗಳನ್ನು ಬಿಗಿಯಾಗಿ, ಸರಿಯಾಗಿ ಧರಿಸಿರಿ, ಅಕಸ್ಮಾತ್ “ಅವರ” ಕಣ್ಣಿಗೆ ಆ ಪವಿತ್ರ “ಲಿಂಗ” ನಮ್ಮದೇ ಎಂದು ಧಾಂಧಲೆ ಮಾಡಿಯಾರು!! ಜಾಗ್ರತೆ…..” ಎಂದು ಬರೆದುಕೊಂಡಿದ್ದಾನೆ. ಎಂದು ಹಿಂಜಾವೇ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಕುರಿತಂತೆ ಹಿಂಜಾವೇ ದೂರು ನೀಡಿದ್ದು, ಈ ವೇಳೆ ಹಿಂದೂ ಜಾಗರಣ ವೇದಿಕೆ ವಿಟ್ಲ ಪ್ರಖಂಡದ ಪ್ರಮುಖರು ಉಪಸ್ಥಿತರಿದ್ದರು.