ಸಮಗ್ರ ನ್ಯೂಸ್: ಬೈಕ್ ಮತ್ತು ಕಾರು ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ.
ಮೃತಪಟ್ಟ ಬೈಕ್ ಸವಾರನನ್ನು ಮೇನಾಲದ ವಿಷ್ಣುಪ್ರಸಾದ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ತೀವ್ರ ಜಖಂಗೊಂಡಿದ್ದ ಈತ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮೃತಪಟ್ಟಿದ್ದಾರೆ.
ಎರಡು ವಾರಗಳ ಹಿಂದೆ ರಾತ್ರಿ ಶ್ರೀರಾಂಪೇಟೆಯ ಸರಕಾರಿ ಆಸ್ಪತ್ರೆ ಎದುರುಗಡೆ ಮೇನಾಲಲದ ವಿಷ್ಣುಪ್ರಸಾದ್ ಚಲಾಯಿಸಿಕೊಂಡು ಹೋಗುತ್ತಿದ್ದ ಬೈಕ್ ಮತ್ತು ಬೊಳುಗಲ್ಲಿನ ಯುವಕ ಚಲಾಯಿಸಿಕೊಂಡು ಬರುತ್ತಿದ್ದ ಕಾರು ಮುಖಾಮುಖಿ ಡಿಕ್ಕಿಯಾಯಿತು. ಡಿಕ್ಕಿಯ ರಭಸಕ್ಕೆ ವಿಷ್ಣುಪ್ರಸಾದ್ ಮೇನಾಲರವರ ಕೈಕಾಲು ತಲೆಗೆ ತೀವ್ರ ಜಖಂಗೊಂಡಿತು. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಿಗ್ಗೆ ಮೃತಪಟ್ಟರೆಂದು ತಿಳಿದುಬಂದಿದೆ.