ಸಮಗ್ರ ನ್ಯೂಸ್: ಬೆಂಗಳೂರಿನ ಯುವತಿಯನ್ನು ಬೆಳ್ತಂಗಡಿಯ ಆಟೋ ಡ್ರೈವರ್ ಲವ್ ಜಿಹಾದ್ ನಿಂದ ಬಲೆಗೆ ಕೆಡವಿ ಮದುವೆಯಾದ ಘಟನೆ ನಡೆದಿದ್ದು, ಇದೀಗ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಕಾರಣವಾಗಿದೆ.
ಬೆಂಗಳೂರಿನ ಬಸಮ್ಮ ಬೆಳ್ತಂಗಡಿ ತಾಲೂಕಿನ ಸೌತಡ್ಕ ದೇವಸ್ಥಾನಕ್ಕೆ ಆಗಮಿಸಿದ್ದ ವೇಳೆ ಕೊಕ್ಕಡದಲ್ಲಿ ಆಟೋ ಓಡಿಸುತ್ತಿದ್ದ ಮುಸ್ಲಿಂ ಯುವಕ ಸಮೀರ್ ನ ರಿಕ್ಷಾವನ್ನು ಬಾಡಿಗೆಗೆ ಪಡೆದಿದ್ದಳು ಎನ್ನಲಾಗಿದೆ. ನಂತರದ ದಿನಗಳಲ್ಲಿ ಇವರಿಬ್ಬರ ಪರಿಚಯ ಪ್ರೇಮವಾಗಿ ತಿರುಗಿದೆ. ಪ್ರೇಮ ಮದುವೆಯವರೆಗೆ ತಲುಪಿ ಇದೇ ತಿಂಗಳು ಮದುವೆಯಾಗಿದ್ದಾರೆ. ಇದರ ಪ್ರತಿಯೊಂದು ದಾಖಲೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದೀಗ ಅನ್ಯಕೋಮಿನ ಯುವಕ ಹಿಂದೂ ಯುವತಿಯ ಜೊತೆ ಪ್ರೀತಿಯ ನಾಟಕವಾಡಿ ಆಕೆಯನ್ನು ವಿವಾಹವಾಗಿ ಮತಾಂತರ ಮಾಡುವ ಮೂಲಕ ಲವ್ ಜಿಹಾದ್ ಕೃತ್ಯವನ್ನೆಸಗುತ್ತಿದ್ದಾರೆ ಎಂದು ಹಿಂದು ಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.