ಸಮಗ್ರ ನ್ಯೂಸ್: ಮಂಗಳೂರಿನ ಮಳಲಿ ಬಳಿ ಮಸೀದಿ ನವೀಕರಣ ವೇಳೆ ದೇವಸ್ಥಾನ ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಇಂದು ತಾಂಬೂಲ ಪ್ರಶ್ನೆಗೆ ಮುಂದಾಗಿತ್ತು. ಈ ವೇಳೆ ಮಳಲಿಯ ಮಸೀದಿ ಸ್ಥಳದಲ್ಲಿ ದೇವರು ಇರುವುದು ನಿಜ ಎಂದು ಕೇರಳದ ಪ್ರಖ್ಯಾತ ಜ್ಯೋತಿಷಿ ಜಿ.ವಿ. ಗೋಪಾಲಕೃಷ್ಣ ಪಣಿಕ್ಕರ್ ಹೇಳಿದ್ದಾರೆ.
ಇಂದು ಮಳಲಿ ಮಸೀದಿಯ ಸಮೀಪದ ರಾಮಾಂಜನೇಯ ಭಜನೆ ಮಂದಿರದಲ್ಲಿ ತಾಂಬೂಲ ಪ್ರಶ್ನೆ ಹಾಕಲಾಗಿದ್ದು, ಈ ವೇಳೆ ಮಸೀದಿ ಇರುವು ಜಾಗದಲ್ಲಿ ದೇವಸ್ಥಾನ ಇದ್ದದ್ದು ನಿಜ. ಸಾಮಾನ್ಯ ತಾಂಬೂಲ ಪ್ರಶ್ನೆ ಪೂರ್ಣವಾಗಿ ಚೈತ್ಯನ್ಯದಿಂದ ಕೂಡಿದೆ. ನಾವು ಪ್ರಾರ್ಥಿಸಿದ ರಾಶಿಯಲ್ಲಿ ದೇವರು ಇರುವುದು ನಿಜ. ಪೂರ್ವದಲ್ಲಿ ಇದೊಂದು ಮಠದ ರೂಪದಲ್ಲಿತ್ತು ಎಂದು ತಿಳಿಯುತ್ತದೆ ಎಂದು ಜ್ಯೋತಿಷಿ ಜಿ.ವಿ. ಗೋಪಾಲಕೃಷ್ಣ ಹೇಳಿದ್ದಾರೆ.
ಇದು ದೈವ ಸಾನಿಧ್ಯ ಇದ್ದಂತಹ ಸ್ಥಳ, ತಾಂಬೂಲ ಪ್ರಶ್ನೆಯಲ್ಲಿ ಹಿಂದೂ ಧಾರ್ಮಿಕ ಸ್ಥಳ ಎಂದು ಉತ್ತರ ಬಂದಿದೆ. ಇಲ್ಲಿ ಗುರುಪೀಠ ಇತ್ತು. ಯಾವುದೋ ಒಂದು ಕಾಲದಲ್ಲಿ ದೇವಸ್ಥಾನ ಇತ್ತೆಂದು ತಿಳಿಯುತ್ತಿದೆ. ಈಗ ಮೇಲೆದ್ದು ಬಂದಿದೆ. ವಿವಾದದಿಂದ ದೇವಸ್ಥಾನ ನಾಶವಾಗಿದೆಯೆಂದು ತಿಳಿದುಬಂದಿದೆ ಎಂದು ಹೇಳಿದ್ದಾರೆ.