Ad Widget .

ಪ್ರಿಯಕರನೊಂದಿಗೆ ಸೆಕ್ಸ್ ನಲ್ಲಿ ತೊಡಗಿದ್ದಾಗ ಸಿಕ್ಕಿಬಿದ್ದ ವಿದ್ಯಾರ್ಥಿನಿ| ವಿಡಿಯೋ ಚಿತ್ರೀಕರಿಸಿದ ಪುಂಡರಿಂದ ಲೈಂಗಿಕ ಕಿರುಕುಳ

ಸಮಗ್ರ ನ್ಯೂಸ್: ನರ್ಸಿಂಗ್​​ ವಿದ್ಯಾರ್ಥಿನಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ವಿಡಿಯೋವನ್ನು ಕಿಡಿಗೇಡಿಗಳ ಗುಂಪೊಂದು ಮೊಬೈಲ್​​ನಲ್ಲಿ ಸೆರೆ ಹಿಡಿದಿದೆ. ಅಲ್ಲದೇ ಆಕೆ ನಗ್ನ ಚಿತ್ರಗಳ ವಿಡಿಯೋ ತೋರಿಸಿ ಅದರಂತೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾರೆ.

Ad Widget . Ad Widget .

ಒಂದು ವೇಳೆ ತಮ್ಮೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಸಮ್ಮತಿಸದೇ ಹೋದಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್​​ಲೋಡ್​​ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆ.

Ad Widget . Ad Widget .

ಹೀಗೆ ಒಂದು ದಿನ ಇದೇ ಕಿಡಿಗೇಡಿಗಳ ಗುಂಪು ಆಕೆಯನ್ನು ನ್ಯೂಡ್​​ ಚಾಟ್​ ಮಾಡುವಂತೆ ಬಲವಂತ ಮಾಡಿದೆ. ಇದರಿಂದ ಬೇಸತ್ತ ನರ್ಸಿಂಗ್​​ ವಿದ್ಯಾರ್ಥಿನಿ ಸ್ಥಳೀಯ ಪೊಲೀಸ್​​ ಠಾಣೆಯಲ್ಲಿ ದೂರು ನೀಡಿದ್ದಾಳೆ. ಅಂದೇ ರಾತ್ರಿ ನಿದ್ರೆ ಮಾತ್ರೆ ಸೇವಿಸುವ ಮೂಲಕ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ಘಟನೆ ತಮಿಳುನಾಡಿನ ನಮ್ಮಕ್ಕಳ್​ ಎಂಬ ಜಿಲ್ಲೆಯಲ್ಲಿ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.

ನರ್ಸಿಂಗ್​ ವಿದ್ಯಾರ್ಥಿನಿ ಯುವಕನೋರ್ವನನ್ನು ಪ್ರೀತಿಸುತ್ತಿದ್ದಳು. ಇಬ್ಬರೂ ಸೇರಿ ಆಗಸ್ಟ್​​ ತಿಂಗಳಿನಲ್ಲಿ ಹಾಸ್ಟೆಲ್​ವೊಂದರಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರು. ಈ ಲೈಂಗಿಕ ದೃಶ್ಯ ನೋಡಿದ ವಿಜಯ್​​​ ಕುಮಾರ್​​(23), ಶಂಕರ್​​(27), ವರದರಾಜನ್​​(27) ಎಂಬುವರು ಮೊಬೈಲ್​​ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ನರ್ಸಿಂಗ್​​ ವಿದ್ಯಾರ್ಥಿನಿಗೆ ತೋರಿಸಿ ಬೆದರಿಸಿದ್ದರು ಎಂದು ಪೊಲೀಸ್​​ ಮೂಲಗಳು ತಿಳಿಸಿವೆ. ತನ್ನ ಲೈಂಗಿಕ ವಿಡಿಯೋ ನೋಡಿದ ವಿದ್ಯಾರ್ಥಿನಿ ಕಿಡಿಗೇಡಿಗಳು ಹೇಳಿದಂತೆ ನಡೆದುಕೊಂಡಿದ್ದಾಳೆ.

ಇವರು ಕರೆದ ಕಡೆಯಲ್ಲಾ ಆಂತಕದಿಂದ ಹೋಗುವ ಮೂಲಕ ಈಕೆ ಸತತವಾಗಿ ಅತ್ಯಾಚಾರಕ್ಕೆ ಒಳಗಾಗಿದ್ಧಾಳೆ. ಈ ಕಾಮುಕರು ದಿನೇ ದಿನೇ ಆಕೆಯನ್ನು ಮಾನಸಿಕವಾಗಿ ಹಿಂಸಿಸಲು ಶುರು ಮಾಡಿದ್ದರು. ಈ ಬೆನ್ನಲ್ಲೇ ದಿಕ್ಕು ತೋಚದೆ ಪೊಲೀಸರಿಗೆ ದೂರು ನೀಡಿದ್ದಾಳೆ. ಅಲ್ಲದೇ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸದ್ಯ ಕುಟುಂಬ ಸದಸ್ಯರು ಈಕೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಬಳಿಕ ಯುವತಿ ದೂರಿನ ಆಧಾರದ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ಧಾರೆ.

Leave a Comment

Your email address will not be published. Required fields are marked *