Ad Widget .

ಮಹಿಳೆಯೊಂದಿಗೆ ಲಾಡ್ಜ್ ನಲ್ಲಿ ಮಂಚವೇರಿದ ವೃದ್ಧ ಸಾವು!!

ಸಮಗ್ರ ನ್ಯೂಸ್: ಸಾವು ಯಾರೊಬ್ಬನಿಗೂ ಹೇಳಿಕೇಳಿ ಬರಲಾರದು. ಆದರೆ ಇಲ್ಲೊಬ್ಬ ವೃದ್ಧನಿಗೆ ಸಾವು ಪಲ್ಲಂಗ ಸುಖಃದಲ್ಲಿದ್ದಾಗ ಬಂದಿದ್ದು ದುರಂತ.

Ad Widget . Ad Widget .

ಮೇ 23ರ ಬೆಳಗ್ಗೆ 10 ಗಂಟೆಯ ಸುಮಾರಿಗೆ 60 ವರ್ಷದ ವ್ಯಕ್ತಿ ಮತ್ತು 40 ವರ್ಷದ ಮಹಿಳೆ ಕುರ್ಲಾದ ಹೋಟೆಲ್‌ಗೆ ಆಗಮಿಸಿದ್ದರು. ಮೊದಲೇ ಬುಕ್​ ಮಾಡಿರುವ ಕೊಠಡಿಗೆ ಖುಷಿಯಿಂದಲೇ ತೆರಳಿದ್ದಾರೆ. ಸ್ವಲ್ಪ ಸಮಯದ ನಂತರ ನನ್ನ ಗೆಳೆಯ ಪ್ರಜ್ಞಾಹೀನನಾಗಿ ಬಿದ್ದಿದ್ದಾನೆ ಎಂದು ರೂಮ್​ನಿಂದ ಮಹಿಳೆ ರಿಸೆಪ್ಶನ್‌ಗೆ ಕರೆ ಮಾಡಿದ್ದಾರೆ.

Ad Widget . Ad Widget .

ಹೋಟೆಲ್ ಸಿಬ್ಬಂದಿ ಕೊಠಡಿಗೆ ಧಾವಿಸಿ ನೋಡಿದಾಗ ವ್ಯಕ್ತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ. ತಕ್ಷಣ ಸ್ಥಳೀಯ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ವಯಸ್ಸಾದ ವ್ಯಕ್ತಿಯನ್ನು ಸಿಯಾನ್‌ನ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಷ್ಟರಲ್ಲಿ ವೈದ್ಯರು ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಘೋಷಿಸಿದ್ದಾರೆ. ಈ ಘಟನೆಯ ಬಳಿಕ ಮಹಿಳೆಯನ್ನು ಕುರ್ಲಾ ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರ ಬಂದಿದೆ.

ಮೃತಪಟ್ಟ ವ್ಯಕ್ತಿ ವರ್ಲಿ ನಿವಾಸಿ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ನಾವಿಬ್ಬರು ಲೈಂಗಿಕ ಕ್ರಿಯೆಯಲ್ಲಿದ್ದೆವು. ಈ ಸಮಯದಲ್ಲಿ ಅವರು ಮದ್ಯ ಸೇವಿಸಲು ಪ್ರಯತ್ನಿಸಿದರು. ಆದರೆ ಹಠಾತ್​ ಆಗಿ ಕುಸಿದು ಬಿದ್ದು ಪ್ರಜ್ಞಾಹೀನರಾದರು ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಾಥಮಿಕ ಮಾಹಿತಿ ಮೇರೆಗೆ ಕುರ್ಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಾವಿನ ನಿಖರ ಕಾರಣವನ್ನು ತಿಳಿಯಲು ಮರಣೋತ್ತರ ವರದಿಗಾಗಿ ಪೊಲೀಸ್​ ತಂಡ ಕಾಯುತ್ತಿದೆ ಎಂದು ಮೂಲಗಳು ತಿಳಿಸಿವೆ.

Leave a Comment

Your email address will not be published. Required fields are marked *