ಸಮಗ್ರ ನ್ಯೂಸ್: ಅಖಿಲ ಭಾರತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯದ ನೌಕರರ ಒಕ್ಕೂಟ (ಬಿಎಎಂಸಿಇಎಫ್) ಮೇ 25ರಂದು ಭಾರತ್ ಬಂದ್ ನಡೆಸಬೇಕು ಎಂದು ಕರೆ ನೀಡಿದೆ. ಕೇಂದ್ರ ಸರ್ಕಾರದ ಕ್ರಮವೊಂದನ್ನು ವಿರೋಧಿಸಿ ಈ ಸಂಘಟನೆ ಭಾರತ್ ಬಂದ್ಗೆ ಕರೆ ನೀಡಿದೆ.
ಕೇಂದ್ರ ಸರ್ಕಾರ ಇತರ ಹಿಂದುಳಿದ ವರ್ಗಗಳಿಗಾಗಿ ಜಾತಿ ಆಧಾರಿತ ಜನಗಣತಿ ನಡೆಸದೇ ಇರುವುದನ್ನು ವಿರೋಧಿಸಿ ಈ ಸಂಘಟನೆಯವರು ಭಾರತ್ ಬಂದ್ಗೆ ಕರೆ ನೀಡಿದ್ದಾರೆ. ಇದರೊಂದಿಗೆ ಇನ್ನೂ ಕೆಲವು ಬೇಡಿಕೆಗಳನ್ನು ಸಂಘಟನೆ ಮುಂದಿಟ್ಟಿದೆ.
ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರ ಬಳಕೆ ಸ್ಥಗಿತಗೊಳಿಸುವುದು. ಹಳೇ ಪಿಂಚಣಿ ಪದ್ಧತಿಯನ್ನು ಮರುಜಾರಿಗೆ ತರುವುದು. ಲಸಿಕೀಕರಣ ಕಡ್ಡಾಯ ತೆಗೆದುಹಾಕುವುದು ಸೇರಿದಂತೆ ಇತರ ಕೆಲವು ಬೇಡಿಕೆಗಳನ್ನೂ ಇವರು ಪ್ರಸ್ತಾಪಿಸಿ ಭಾರತ್ ಬಂದ್ಗೆ ಕರೆ ನೀಡಿದ್ದಾರೆ.