ಹುಬ್ಬಳ್ಳಿ: ಭೀಕರ ಅಪಘಾತ; ಎಂಟು ಮಂದಿ ದುರ್ಮರಣ

ಸಮಗ್ರ ನ್ಯೂಸ್: ಹುಬ್ಬಳ್ಳಿ- ಧಾರವಾಡ ಬೈಪಾಸ್ ನ ರೇವಡಿಹಾಳ ಕ್ರಾಸ್ ಬಳಿ ಸೋಮವಾರ ತಡರಾತ್ರಿ ಖಾಸಗಿ ಬಸ್ ಹಾಗೂ ಲಾರಿ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಚಾಲಕರಿಬ್ಬರು ಸೇರಿ ಎಂಟು ಜನರು ಮೃತಪಟ್ಟು, 27 ಜನರು ಗಂಭೀರ ಗಾಯಗೊಂಡಿದ್ದಾರೆ.

Ad Widget ... ..

ಬಸ್ ಮಹಾರಾಷ್ಟ್ರದ ಕೊಲ್ಹಾಪುರದಿಂದ ಬೆಂಗಳೂರು ಕಡೆಗೆ ಹಾಗೂ ಲಾರಿ ಬೆಂಗಳೂರು ಕಡೆಯಿಂದ ಪುಣೆ ಕಡೆ ಹೊರಟಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಪರಿಣಾಮ ಸ್ಥಳದಲ್ಲೇ ಎರಡೂ ವಾಹನಗಳ ಚಾಲಕರು ಸೇರಿ ಆರು ಜನ ಮೃತಪಟ್ಟರೆ, ಇಬ್ಬರು ನಂತರ ಅಸುನೀಗಿದ್ದಾರೆ.

Ad Widget

ಗಾಯಗೊಂಡ ಎಲ್ಲಾ 27 ಜನರು ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಪೊಲೀಸ್ ಮೂಲಗಳು ತಿಳಿಸಿವೆ.

1 thought on “ಹುಬ್ಬಳ್ಳಿ: ಭೀಕರ ಅಪಘಾತ; ಎಂಟು ಮಂದಿ ದುರ್ಮರಣ”

  1. Ramachandr Bagewadi

    ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ೬ನೆಯ ತರಗತಿಯ ಮೊದಲ ಆಯ್ಕೆ ಪಟ್ಟಿ ಪ್ರಕಟವಾಯಿತೇ? ಎಲ್ಲಿಯೂ ಸುದ್ದಿ ಇಲ್ಲ,

Leave a Comment

Your email address will not be published. Required fields are marked *