Ad Widget .

ಮಂಗಳೂರು: ಹೆಚ್ಚುತ್ತಿರುವ ಡೆಂಗ್ಯೂ, ಮಲೇರಿಯಾ| ಮುನ್ನೆಚ್ಚರಿಕೆ ವಹಿಸಲು ಡಿ.ಸಿ ಸೂಚನೆ

ಸಮಗ್ರ ನ್ಯೂಸ್: ಡೆಂಗ್ಯೂ, ಮಲೇರಿಯಾ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರ ಅವರ ಮಾರ್ಗದರ್ಶನದಂತೆ ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಆರೋಗ್ಯ ಇಲಾಖೆ, ಕೆಎಸ್ಸಾರ್ಟಿಸಿ, ಮೆಸ್ಕಾಂ, ಪಿಡಬ್ಲ್ಯುಡಿ, ಆರ್‌ಟಿಓ, ಮಹಾ ನಗರ ಪಾಲಿಕೆ ಕಚೇರಿ ಸೇರಿದಂತೆ ನಾನಾ ಕಚೇರಿಗಳ ಸುತ್ತಮುತ್ತ ಸ್ವಚ್ಛತಾ, ಲಾರ್ವ ತೆರವು ಕಾರ್ಯಾಚರಣೆ ನಡೆಸಲಾಗಿದೆ.

Ad Widget . Ad Widget .

ಮಂಗಳೂರು, ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿಯಲ್ಲಿ ಮಳೆಯಾಗಿದೆ. ಕಳೆದ ಎರಡು ವರ್ಷಗಳಿಂದ ಪುತ್ತೂರು, ಬೆಳ್ತಂಗಡಿಯ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಂಡ ಡೆಂಗ್ಯೂ, ಈ ಬಾರಿ ಮಂಗಳೂರು ನಗರದಲ್ಲೂ ಪತ್ತೆಯಾಗುತ್ತಿದೆ. ಮಳೆ ಬಂದು ನಿಂತರೆ ಮನೆ ತಾರಸಿ, ತೆಂಗು, ಕಂಗು, ರಬ್ಬರ್‌ ತೋಟಗಳಲ್ಲಿ ಶೇಖರಣೆಯಾಗುತ್ತಿರುವ ನೀರು, ಲಾರ್ವ ಉತ್ಪತ್ತಿಗೆ ಕಾರಣವಾಗುತ್ತಿವೆ. ಈ ಲಾರ್ವ ಸೊಳ್ಳೆಯಾಗಿ ಪರಿವರ್ತನೆಗೊಂಡು ಮನುಷ್ಯನಿಗೆ ಚುಚ್ಚಿದಾಗ ಡೆಂಗ್ಯೂ ವೈರಸ್‌ ಬರುವ ಸಾಧ್ಯತೆಯಿದ್ದು, ಇದು ಸಾಂಕ್ರಾಮಿಕ ರೋಗವಾಗಿದೆ. ಈ ಬಗ್ಗೆ ಕಚೇರಿ, ಮನೆ ಮನೆಗಳಲ್ಲಿ, ಸಾರ್ವಜನಿಕವಾಗಿ ಜಾಗೃತಿ ಹುಟ್ಟಿಸಬೇಕಾಗಿದೆ.

Ad Widget . Ad Widget .

2019ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂಗೆ 850ಕ್ಕೂ ಅಧಿಕ ಮಂದಿ ಪೀಡಿತರಾಗಿ, ಒಟ್ಟು 13 ಮಂದಿ ಮೃತಪಟ್ಟಿದ್ದರು. 2020 ಮತ್ತು 2021ರಲ್ಲಿ ಈ ಪ್ರಕರಣ ಇಳಿಕೆಯಾಗಿತ್ತು. ಆದರೆ ಈ ಬಾರಿ ಮತ್ತೆ ನಗರ ಭಾಗದಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಾಗಿದೆ. ಜನವರಿಯಿಂದ ಈವರೆಗೆ ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ 23 ಡೆಂಗ್ಯೂ, ಮಲೇರಿಯಾ 43 ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಎಲ್ಲಾ ಕಡೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

Leave a Comment

Your email address will not be published. Required fields are marked *