Ad Widget .

ಉಡುಪಿ: ಪೆಟ್ರೋಲ್ ಸುರಿದುಕೊಂಡು ಕಾರೊಳಗೆ ಆತ್ಮಹತ್ಯೆಗೆ ಶರಣಾದ ಯುವಜೋಡಿ!? ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಜೋಡಿ?

ಸಮಗ್ರ ನ್ಯೂಸ್: ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಯುವ ಜೋಡಿಯೊಂದು ಕಾರಿನೊಳಗೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉಡುಪಿಯ ಮಂದಾರ್ತಿ ಸಮೀಪದ ಹೆಗ್ಗುಂಜ್ಜೆಯಲ್ಲಿ ನಡೆದಿದೆ.

Ad Widget . Ad Widget .

ಮೃತರನ್ನು ಬೆಂಗಳೂರು ಆರ್.ಟಿ.ನಗರದ ಯಶವಂತ ಯಾದವ್, ಜ್ಯೋತಿ ಎಂದು ಗುರುತಿಸಲಾಗಿದೆ.ಮುಂಜಾನೆ 3:00 ಗಂಟೆ ಸುಮಾರಿಗೆ ಹೆಗ್ಗುಂಜ್ಜೆಯಲ್ಲಿ ಸುಡುತ್ತಿದ್ದ ಕಾರು ಪತ್ತೆಯಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಕಾರು ಸುಟ್ಟು ಕರಕಲಾಗಿದೆ. ಸ್ಥಳೀರು ಕಾರಿಗೆ ಹತ್ತಿದ್ದ ಬೆಂಕಿಯನ್ನು ನಂದಿಸಿದಾಗ ಕಾರಿನಲ್ಲಿ ಇಬ್ಬರ ಶವ ಪತ್ತೆಯಾಗಿದ್ದು, ಸ್ವಿಫ್ಟ್​ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

Ad Widget . Ad Widget .

ಮೃತರು ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿರೋ ಬಗ್ಗೆ ಮಿಸ್ಸಿಂಗ್ ಕೇಸ್​ ದಾಖಲಾಗಿತ್ತು. ನಿನ್ನೆ ಮಂಗಳೂರಿಗೆ ಬಂದಿದ್ದ ಜೋಡಿ ಹುಸೇನ್ ಎಂಬವರಿಂದ ಕಾರು ಬಾಡಿಗೆ ಪಡೆದುಕೊಂಡು ತೆರಳಿದ್ದರಂತೆ. ಸದ್ಯ ಕಾರಿನೊಳಗೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Comment

Your email address will not be published. Required fields are marked *