Ad Widget .

ಕೇಂದ್ರ, ರಾಜ್ಯದಿಂದ ನಾರಾಯಣ ಗುರುಗಳಿಗೆ ಹೆಜ್ಜೆಹೆಜ್ಜೆಗೂ ಅವಮಾನ – ಜೆ.ಆರ್ ಲೋಬೊ

ಸಮಗ್ರ ನ್ಯೂಸ್: ಹತ್ತನೇ ತರಗತಿ ಪಠ್ಯ ಪುಸ್ತಕದಿಂದ ನಾರಾಯಣ ಗುರುಗಳ ವಿಷಯ ಕೈ ಬಿಟ್ಟು ಬಿಜೆಪಿ ಸರಕಾರ ಅವರಿಗೆ ಅವಮಾನ ಮಾಡುತ್ತಿದೆ. ಇದರ ವಿರುದ್ದ ಚಳವಳಿ ನಡೆಸಲಾಗುವುದು ಎಂದು ಮಾಜಿ ಶಾಸಕ ಜೆ.ಆರ್.ಲೋಬೋ ಎಚ್ಚರಿಕೆ ನೀಡಿದರು.

Ad Widget . Ad Widget .

ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು, ಗಣರಾಜ್ಯೋತ್ಸವದಲ್ಲಿ ನಾರಾಯಣಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಣೆ ಮಾಡಲಾಯಿತು.

Ad Widget . Ad Widget .

ಮಂಗಳೂರು ವಿಮಾನ ನಿಲ್ದಾಣ, ರೈಲು ನಿಲ್ದಾಣಕ್ಕೆ ಅವರ ಹೆಸರಿಡಲು ಒತ್ತಾಯಿಸಿದರೂ ಸರಕಾರ ಸ್ಪಂದಿಸಿಲ್ಲ.‌ ದ.ಕ ದ ಬ್ಯಾಂಕ್ ಗಳ ಹೆಸರು ಕೂಡ ಇಲ್ಲದಂತೆ ಸರಕಾರ ಮಾಡಿದೆ. ಹೆಜ್ಜೆ ಹೆಜ್ಜೆಗೂ ಕೇಂದ್ರ ಮತ್ತು ರಾಜ್ಯ ಸರಕಾರ ಅವಮಾನ ಮಾಡುತ್ತಿದೆ ಎಂದರು.

ಪಠ್ಯದಲ್ಲಿ ಬಸವಣ್ಣ, ಪೆರಿಯಾರ್ ಅವರ ಹೆಸರನ್ನೂ ಕೈ ಬಿಟ್ಟಿದೆ. ವಿದ್ಯಾರ್ಥಿಗಳಿಗೆ ಎಲ್ಲ ಧರ್ಮದ ಸಾಧಕರ ವಿಚಾರವೂ ತಿಳಿಯುವಂತಾಗಬೇಕು ಎಂದು ಅವರು ಹೇಳಿದರು.

Leave a Comment

Your email address will not be published. Required fields are marked *