“ಹರೀಶ್ ಪೂಂಜಾ ಗೋಣಿಯಲ್ಲಿ‌ ದುಡ್ಡು ತುಂಬಿ ಹಂಚುತ್ತಾರೆ!” | ಕಾರ್ಯಕರ್ತನ ಹೊಗಳಿಕೆ ಬೆಳ್ತಂಗಡಿ ಶಾಸಕರಿಗೆ ಮುಳುವಾಗುತ್ತಾ?

ಸಮಗ್ರ ನ್ಯೂಸ್: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರನ್ನು ಕಾರ್ಯಕರ್ತರೊಬ್ಬರು ಹೊಗಳುವ ಭರದಲ್ಲಿ ಆಡಿದ ಮಾತು ಈಗ ಶಾಸಕರಿಗೆ ಮುಳುವಾಗುವ ಲಕ್ಷಣಗಳು ಕಂಡುಬರುತ್ತಿದೆ.

Ad Widget ... ..

ಬೆಳ್ತಂಗಡಿಯ ಬಳಂಜದಲ್ಲಿ ನಡೆದ ಭಜನೋತ್ಸವ ಕಾರ್ಯಕ್ರಮದ ಸಮಾರೋಪದಲ್ಲಿ ಶಾಸಕ ಹರೀಶ್ ಪೂಂಜಾ ಭಾಗವಹಿಸಿದ್ದರು. ಈ ವೇಳೆ ಅಲ್ಲಿನ ಬಿಜೆಪಿ ಕಾರ್ಯಕರ್ತ ಹರೀಶ್ ವೈ ಚಂದ್ರಮ ಎಂಬವರು ಶಾಸಕರನ್ನು ಹೊಗಳಿದ್ದಾರೆ.

Ad Widget

ಅವರು ಭಾಷಣ ಮಾಡುವ ಸಂದರ್ಭದಲ್ಲಿ ”ಹರೀಶ್ ಪೂಂಜಾರವರು ಶಾಸಕರ ಮನೆಗೆ ಹೋದವರನ್ನು ಅವರು ಯಾವತ್ತೂ ಬರಿಗೈಲಿ ಕಳಿಸಿಲ್ಲ. ಐದು, ಹತ್ತು ಸಾವಿರದಂತೆ ಕಷ್ಟದಲ್ಲಿರುವವರಿಗೆ ನೀಡುತ್ತಾರೆ. ಚೀಲದಲ್ಲಿ ಹಣ ತಂದು ನೀಡುತ್ತಾರೆ. ಹಿಂದೆ ಯಾವ ಶಾಸಕರೂ ಈ ರೀತಿಯ ಉದಾರಿತನ ತೋರಿಸಿಲ್ಲ” ಎಂದು ಹೇಳಿದ್ದಾರೆ.

ಈ ಭಾಷಣದ ವಿಡಿಯೋ ಆಧರಿಸಿ ಇದೀಗ ಬೆಳ್ತಂಗಡಿಯ ಕಮ್ಯುನಿಸ್ಟ್ ಕಾರ್ಯಕರ್ತ ಶೇಖರ ಲಾಯ್ಲ ಎಂಬವರು ಪ್ರಿವೆನ್ಷನ್ ಆಫ್ ಮನಿ ಲ್ಯಾಂಡ್ರಿಂಗ್ ಕಾಯ್ದೆಯಡಿ ದೂರು ದಾಖಲಿಸಬೇಕೆಂದು ಎಸಿಬಿಗೆ ಕೋರಿದ್ದಾರೆ.

ಜನಪ್ರತಿನಿಧಿಯೊಬ್ಬ ಜನರಿಗೆ ಹೀಗೆ ಹಣ ಹಂಚುತ್ತಿರುವುದರ ಹಿಂದಿನ ಸತ್ಯ ಗೊತ್ತಾಗಬೇಕು. ಸ್ವತಃ ಪಕ್ಷದ ಕಾರ್ಯಕರ್ತನೇ ಈ ರೀತಿ ಹೇಳಿಕೆ ನೀಡುವುದರ ಹಿಂದೆ ಇರುವ ಸತ್ಯ ಬಹುರಂಗವಾಗಬೇಕು ಎಂದು ಆಗ್ರಹಿಸಿದ್ದಾರೆ.

ಕಾರ್ಯಕರ್ತನ ಹೊಗಳಿಕೆಯ ಮಾತುಗಳು ಈಗ ಶಾಸಕರಿಗೆ ಮುಳ್ಳಾಗುವ ಲಕ್ಷಣಗಳು ಕಾಣುತ್ತಿದ್ದು ಮುಂದೆ ಏನು ಪರಿಣಾಮವಾಗಲಿದೆ ಎಂಬುದನ್ನು ಕಾದುನೊಡಬೇಕಿದೆ.

Leave a Comment

Your email address will not be published. Required fields are marked *