ಸಮಗ್ರ ನ್ಯೂಸ್: ವಿದ್ಯಾರ್ಥಿಗಳ ಜೀವನಕ್ಕೆ ಬೆಳಕಾಗಬೇಕಿದ್ದ ದೈಹಿಕ ಶಿಕ್ಷಕಿ ಹಾಗೂ ಶಿಕ್ಷಕ ಡ್ರಗ್ಸ್ ಪ್ರಕರಣದಲ್ಲಿ ಬಂಧನವಾಗಿರುವ ಘಟನೆ ಕೇರಳದಲ್ಲಿ ನಡೆದಿದೆ. ಶಿಕ್ಷಕರ ಜತೆಗೆ ಇತರೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ತಿರುವನಂತರಪುರಂನ ಮುತ್ತಥರಾ ಪ್ರದೇಶದ ಶಿವಶಕ್ತಿ ಹೌಸ್ನ ದೈಹಿಕ ಶಿಕ್ಷಕಿ ಅಮೃತಾ (24), ಥಿರುವಳ್ಳ ಮೂಲಕ ದೈಹಿಕ ಶಿಕ್ಷಕ ಅಭಿಮನ್ಯು (27) ಮತ್ತು ಪೆರಿಂತಲಮನ್ನದ ಕಪ್ಪಿಲ್ ಹೌಸ್ನ ಸನಿಲ್ (27) ಎಂದು ಗುರುತಿಸಲಾಗಿದೆ.
ಬುಧವಾರ ರಹಸ್ಯ ಮಾಹಿತಿ ದೊರೆತ ಬೆನ್ನಲ್ಲೇ ಜಿಲ್ಲಾ ಮಾದಕ ದ್ರವ್ಯ ವಿರೋಧಿ ವಿಶೇಷ ಕ್ರಿಯಾ ಪಡೆ (ಡಿಎಎನ್ಎಸ್ಎಎಫ್) ಮತ್ತು ಇನ್ಫೋಪಾರ್ಕ್ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ನಂಬಿಕಾರ್ಹ ವ್ಯಕ್ತಿಗಳಿಗೆ ಮಾತ್ರ ಆರೋಪಿಗಳು ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ವಿದ್ಯಾರ್ಥಿಗಳು ಮತ್ತು ಟೆಕ್ಕಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. 20 ಗ್ರಾಂ ಎಂಡಿಎಂಎ ವಶಕ್ಕೆ ಪಡೆದುಕೊಳ್ಳಲಾಗಿದೆ. ಡ್ರಗ್ಸ್ ಅನ್ನು ಬೆಂಗಳೂರಿನಿಂದ ತರಿಸಿಕೊಳ್ಳಲಾಗಿದೆ ಎಂಬ ಮಾಹಿತಿ ಇದೆ.