Ad Widget .

ಎಸ್ ಎಸ್ ಎಲ್‌ಸಿ ಫಲಿತಾಂಶ ಪ್ರಕಟ ಶೇ.85.63 ಮಂದಿ ಪಾಸ್

ಸಮಗ್ರ ನ್ಯೂಸ್: ಕರ್ನಾಟಕ ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಎಸ್ಎಸ್ಎಲ್ ಸಿ ಪರೀಕ್ಷೆಗಳ ಫಲಿತಾಂಶ ಪ್ರಕಟಗೊಂಡಿದೆ. ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ‌ಮಂತ್ರಿ‌ ಬಿ.ಸಿ ನಾಗೇಶ್ ಇಂದು ಪರೀಕ್ಷಾ ಫಲಿತಾಂಶ ಪ್ರಕಟಿಸಿದ್ದಾರೆ.

Ad Widget . Ad Widget .

ಒಟ್ಟು ವಿದ್ಯಾರ್ಥಿಗಳಲ್ಲಿ ಶೇ.85.63% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 90% ಬಾಲಕಿಯರು, ಹಾಗೂ 81.63% ಬಾಲಕರು ಪಾಸಾಗಿದ್ದಾರೆ. ಸರ್ಕಾರಿ ಶಾಲೆಗಳ 21 ಮಕ್ಕಳು, ಅನುದಾನಿತ ಶಾಲೆಗಳ 8 ಮಕ್ಕಳು, ಅನುದಾನ ರಹಿತ ಶಾಲೆಗಳ 116 ಮಕ್ಕಳು 625ಕ್ಕೆ 625 ಅಂಕ ಗಳಿಸಿದ್ದಾರೆ.

Ad Widget . Ad Widget .

ಸರಕಾರಿ ಶಾಲೆಗಳು 88%, ಅನುದಾನಿತ ಶಾಲೆಗಳು 87% ಹಾಗೂ ಅನುದಾನರಹಿತ ಶಾಲೆಗಳು 92% ಫಲಿತಾಂಶ ದಾಖಲಿಸಿವೆ.

ಮಧ್ಯಾಹ್ನ 1.00 ಗಂಟೆ ನಂತರ ವೆಬ್ ಸೈಟ್ ಗಳಲ್ಲಿ ಫಲಿತಾಂಶ ಲಭ್ಯವಾಗಲಿದ್ದು, ಈ ಲಿಂಕ್ ಬಳಸಿ ರಿಸಲ್ಟ್ ನೋಡಬಹುದು.
http://kseeb.jar.nic.in, http://SSLC.karnataka.gov.in, http://karresults.nic.in, kar.nic.in ವೆಬ್ಸೈಟ್ ಗಳಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ. ಬಳಿಕ ಮೊಬೈಲ್ ಸಂಖ್ಯೆಗಳಿಗೂ ಸಂದೇಶ ಕಳುಹಿಸಲಾಗುತ್ತದೆ.

ಮಾರ್ಚ್ 28 ರಿಂದ ಏಪ್ರಿಲ್ 11 ರವರೆಗೆ ಎಸ್‌ಎಸ್‌ಎಲ್ಸಿ ಪರೀಕ್ಷೆ 3444 ಕೇಂದ್ರಗಳಲ್ಲಿ ನಡೆದಿದ್ದು, 8.73 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಜೂ.26ರಿಂದ ಪೂರಕ‌ ಪರೀಕ್ಷೆ:

ಕರ್ನಾಟಕದಲ್ಲಿ 2022 ನೇ ಸಾಲಿನಲ್ಲಿ ನಡೆದ ಎಸ್‌ಎಸ್‌ಎಲ್ ಸಿ ಪರೀಕ್ಷೆಯಲ್ಲಿ ಅನುತ್ತಿರ್ಣರಾದ ವಿದ್ಯಾರ್ಥಿಗಳ ಮರು ಮೌಲ್ಯಮಾಪನ ಹಾಗೂ ಪೂರಕ ಪರೀಕ್ಷೆಯ ದಿನಾಂಕವನ್ನು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಪ್ರಕಟಿಸಿದ್ದಾರೆ.

2022 ಜೂನ್ 26 ರಿಂದ 2022 ಜುಲೈ 04 ರಿಂದ ಎಸ್‌ಎಸ್‌ಎಲ್ ಸಿ ಪೂರಕ ಪರೀಕ್ಷೆ ನಡೆಯಲಿದೆ.ಎಸ್‌ಎಸ್‌ಎಲ್ ಸಿ ಪರೀಕ್ಷೆಯಲ್ಲಿ ಅನುತ್ತೀರ್ಣವಾದ ವಿದ್ಯಾರ್ಥಿಗಳು ಮೇ. 20 ರಿಂದ ಮೇ. 30 ರೊಳಗೆ ಆನ್‌ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ಸಂಖ್ಯೆ 8,53, 436. ಇದರಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳ ಸಂಖ್ಯೆ 7,30,881. ಶೇ. 15 ರಷ್ಟು ವಿದ್ಯಾರ್ಥಿಗಳು ಅನುತ್ತಿರ್ಣರಾಗಿದ್ದು, ಅವರಿಗೆ ಇದೀಗ ಪೂರಕ ಪರೀಕ್ಷೆ ಅವಕಾಶ ನೀಡಿದ್ದು, ಇದರಲ್ಲಿ ಉತ್ತೀರ್ಣರಾದವರನ್ನೂ ಇದೇ ಶೈಕ್ಷಣಿಕ ವರ್ಷದಲ್ಲಿ ಉತ್ತೀರ್ಣರಾದವರು ಎಂದೇ ಪರಿಗಣಿಸಲಾಗುತ್ತದೆ.

4 thoughts on “ಎಸ್ ಎಸ್ ಎಲ್‌ಸಿ ಫಲಿತಾಂಶ ಪ್ರಕಟ ಶೇ.85.63 ಮಂದಿ ಪಾಸ್”

Leave a Comment

Your email address will not be published. Required fields are marked *