Ad Widget .

ಎಸ್ಎಸ್ಎಲ್ಸಿ ರಿಸಲ್ಟ್; ವಾಚ್ ಮನ್ ಮಗಳು ರಾಜ್ಯಕ್ಕೆ ಪ್ರಥಮ

ಸಮಗ್ರ ನ್ಯೂಸ್: ಹಾವೇರಿ ನಗರದ ಜಿಲ್ಲಾ ಗುರುಭವನದಲ್ಲಿ ಕಾವಲುಗಾರನಾಗಿ ಕೆಲಸ ಮಾಡುವ ಬಸವರಾಜ ಶೇತಸನದಿ ಅವರ ಮಗಳು ಮಧು ಶೇತಸನದಿ, ಕನ್ನಡ ಮಾಧ್ಯಮದಲ್ಲಿ 625ಕ್ಕೆ 625 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಮೊದಲನೇ ಸ್ಥಾನ ಪಡೆದಿದ್ದಾಳೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

‘ನನ್ನ ಮಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ ಎಂಬುದನ್ನು ಕೇಳಿ ತುಂಬಾ ಸಂತೋಷವಾಗಿದೆ.
ಹಗಲು-ರಾತ್ರಿ ಕಷ್ಟಪಟ್ಟು ಓದಿ ನಮಗೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ಮಗಳು ಡಾಕ್ಟರ್‌ ಆಗಬೇಕು ಎಂದು ಕನಸು ಕಾಣುತ್ತಿದ್ದಾಳೆ. ಆದರೆ ನನ್ನ ಆದಾಯದಲ್ಲಿ ಅವಳನ್ನು ಓದಿಸುವಷ್ಟು ಆರ್ಥಿಕ ಶಕ್ತಿ ನಮಗಿಲ್ಲ’ ಎಂದು ನೋವು ತೋಡಿಕೊಂಡರು.

Ad Widget . Ad Widget . Ad Widget .

‘ನಗರದ ಕಾಳಿದಾಸ ಪ್ರೌಢಶಾಲೆಯಲ್ಲಿ ನಮ್ಮ ಶಿಕ್ಷಕರು ಚೆನ್ನಾಗಿ ಪಾಠ ಮಾಡುತ್ತಿದ್ದರು. ಜತೆಗೆ ಟ್ಯೂಶನ್‌ಗೂ ಹೋಗುತ್ತಿದ್ದೆ. ನಿತ್ಯ 6 ತಾಸು ಓದುತ್ತಿದ್ದೆ. 2-3 ಅಂಕಗಳು ಕೈ ತಪ್ಪಬಹುದು ಎಂದುಕೊಂಡಿದ್ದೆ. ಆದರೆ 625ಕ್ಕೆ 625 ಅಂಕ ಬಂದಿರುವುದು ತುಂಬಾ ಸಂತೋಷ ಕೊಟ್ಟಿದೆ. ನನ್ನ ಸಾಧನೆಯಲ್ಲಿ ಅಪ್ಪ-ಅಮ್ಮ (ಕವಿತಾ) ಪಾತ್ರ ದೊಡ್ಡದಿದೆ. ವೈದ್ಯೆಯಾಗಿ ಸಮಾಜ ಸೇವೆ ಮಾಡಬೇಕು’ ಎಂದು ಗುರಿ ಇಟ್ಟುಕೊಂಡಿರುವುದಾಗಿ ಮಧು ಶೇತಸನದಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *