ಸಮಗ್ರ ನ್ಯೂಸ್: ಬೆಂಗಳೂರು ವಿಭಾಗವು ಇದೇ ಮೊದಲ ಬಾರಿಗೆ ಸರಕು ಸಾಗಣೆ ರೈಲಿನಲ್ಲಿ ಬಸ್‌ಗಳನ್ನು ಸಾಗಣೆ ಮಾಡಿದೆ. ಇಲ್ಲಿನ ದೊಡ್ಡಬಳ್ಳಾಪುರದ ಗೂಡ್ಸ್‌ಶೆಡ್‌ನಿಂದ ಬುಧವಾರ ಚಂಡೀಗಢಕ್ಕೆ 32 ಬಸ್‌ಗಳನ್ನು ರೈಲಿನಲ್ಲಿ ಕಳುಹಿಸಿಕೊಡಲಾಯಿತು.
2,500 ಕಿ.ಮೀ. ದೂರದಲ್ಲಿರುವ ಚಂಡೀಗಢಕ್ಕೆ 5ರಿಂದ 6 ದಿನಗಳಲ್ಲಿ ಈ ಬಸ್‌ಗಳು ರೈಲಿನ ಮೂಲಕ ತಲುಪಲಿವೆ. ಈ ಹಿಂದೆ ಪ್ಯಾಸೆಂಜರ್ ಬಸ್‌ಗಳನ್ನು ದೊಡ್ಡ ದೊಡ್ಡ ಟ್ರಕ್‌ಗಳ ಮೂಲಕ ಸಾಗಣೆ ಮಾಡಲಾಗುತ್ತಿತ್ತು. ಇದರಿಂದ ಸಮಯದ ಜತೆಗೆ ಭಾರಿ ಪ್ರಮಾಣದ ಡೀಸೆಲ್ ಖರ್ಚಾಗುತ್ತಿತ್ತು. ವಾಯುಮಾಲಿನ್ಯ ಮತ್ತು ಸಂಚಾರದಟ್ಟಣೆ ಹೆಚ್ಚಿತ್ತು.
ವಿವಿಧ ಹಂತಗಳಲ್ಲಿ 64 ಬಸ್ ರವಾನೆ 32 ರ್ಯಾಕ್‌ಗಳಲ್ಲಿ ಮೊದಲ ಹಂತದಲ್ಲಿ ಬಿಎಸ್-6 ಮಾದರಿಯ 32 ಪ್ರಯಾಣಿಕರ ಬಸ್‌ಗಳನ್ನು ಚಂಡೀಗಢಕ್ಕೆ ರೈಲಿನಲ್ಲಿ ಸಾಗಣೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ 64 ಬಸ್‌ಗಳನ್ನು ವಿವಿಧ ಹಂತಗಳಲ್ಲಿ ರೈಲಿನಲ್ಲೇ ಸಾಗಿಸಲು ಉದ್ದೇಶಿಸಲಾಗಿದೆ.