ಗಂಡುಮಗುವಿಗೆ ಜನ್ಮನೀಡಿದ ನಟಿ ಸಂಜನಾ ಗಲ್ರಾನಿ

ಸಮಗ್ರ ನ್ಯೂಸ್: ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ತಾಯಿಯಾಗಿದ್ದಾರೆ. ಇಂದು (ಮೇ 19) ಸಂಜನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ವಿಶೇಷ ಎಂದರೆ ಸಂಜನಾ ಸಹೋದರಿ ನಿಕ್ಕಿ ಗಲ್ರಾನಿ ಮದುವೆ ಇಂದೇ ನೆರವೇರಿದೆ.

Ad Widget ... ..

ಮೇ ತಿಂಗಳಲ್ಲಿ ಮಗುವಿನ ಆಗಮನ ಆಗಲಿದೆ ಎಂದು ಸಂಜನಾ ಈ ಮೊದಲೇ ಹೇಳಿದ್ದರು. ಅವರು 7ನೇ ತಿಂಗಳಿಗೆ ಕಾಲಿಟ್ಟಾಗ ಸೋಶಿಯಲ್ ಮೀಡಿಯಾದಲ್ಲಿ ಮಗು ಯಾವಾಗ ಜನಿಸಬಹುದು ಎಂದು ಅಭಿಮಾನಿಯೊಬ್ಬರು ಕಮೆಂಟ್​ ಮೂಲಕ ಪ್ರಶ್ನಿಸಿದ್ದರು. ‘ಪ್ರಾಯಶಃ ಮೇ ತಿಂಗಳ ಅಂತ್ಯದಲ್ಲಿ’ ಎಂದು ಸಂಜನಾ ಉತ್ತರ ನೀಡಿದ್ದರು. ಅಂತೆಯೇ ಮೇ ತಿಂಗಳ ಮುಗಿಯುವುದರೊಳಗೆ ಖುಷಿ ಸುದ್ದಿ ಸಿಕ್ಕಿದೆ.

Ad Widget

ತಮ್ಮ ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಆದರೆ, ಯಾವುದಕ್ಕೂ ಅವರು ಅಂಜಿಲ್ಲ. ಎಷ್ಟೇ ಕಷ್ಟ ಬಂದರೂ ಅದನ್ನು ಮೆಟ್ಟಿ ನಿಂತಿದ್ದಾರೆ. ಈಗ ಅವರ ಬಾಳಲ್ಲಿ ಸಾಕಷ್ಟು ಒಳ್ಳೆಯ ವಿಚಾರಗಳು ನಡೆಯುತ್ತಿವೆ. ಸಂಜನಾ ಈ ಬಗ್ಗೆ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಹಂಚಿಕೊಂಡು ಸಂಭ್ರಮಿಸಿದ್ದಾರೆ

Leave a Comment

Your email address will not be published. Required fields are marked *