Ad Widget .

ಮೈಸೂರು ಹುಡುಗನ ಪ್ರೀತಿಯ ಬಲೆಯಲ್ಲಿ ರಾಖಿ| ಹೊಸ ಗೆಳೆಯನ ಬಗ್ಗೆ ನಟಿಮಣಿ ಹೇಳಿದ್ದೇನು?

ಸಮಗ್ರ ನ್ಯೂಸ್: ಬಾಲಿವುಡ್ ನಟಿ, ಡಾನ್ಸರ್ ರಾಖಿ ಸಾವಂತ್ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಹುಡುಗ ಕರ್ನಾಟಕದ ಮೈಸೂರು ಮೂಲದವರು ಎನ್ನುವುದು ವಿಶೇಷ. ತಮ್ಮ ಗೆಳೆಯನನ್ನು ರಾಖಿಯೇ ಪರಿಚಯ ಮಾಡಿಸಿದ್ದು, ಫೋಟೋಗಳಿಗೆ ಪೋಸ್ ನೀಡಿದ್ದಾರೆ.

Ad Widget . Ad Widget .

ಬಿಗ್​ಬಾಸ್ ಮಾಜಿ ಸ್ಪರ್ಧಿಯಾಗಿರುವ ರಾಖಿ ಸಾವಂತ್, ಆ ಸ್ಪರ್ಧೆಗೆ ತಮ್ಮ ಮಾಜಿ ಪತಿ ರಿತೇಶ್ ಜತೆ ತೆರಳಿದ್ದರು. ಆದರೆ ಆ ಸಂಬಂಧ ದೀರ್ಘ ಕಾಲ ಬಾಳಲಿಲ್ಲ. ಇದೀಗ ರಿತೇಶ್​ ಮತ್ತು ರಾಖಿ ದೂರವಾಗಿದ್ದಾರೆ. ಪ್ರತಿಯೊಬ್ಬರಿಗೂ ಪ್ರೀತಿಸಲ್ಪಡುವ ಅರ್ಹತೆಯಿದೆ ಎಂದಿರುವ ರಾಖಿ ಇದೀಗ ಆದಿಲ್ ಖಾನ್ ದುರ್ರನಿ ಜತೆ ಸುತ್ತಾಡುತ್ತಿದ್ದಾರೆ. ರಾಖಿ ಪಾಪರಾಜಿಗಳಿಗೆ ನೀಡಿದ ವಿಡಿಯೋ ಸಂದರ್ಶನದಲ್ಲಿ ಗೆಳೆಯ ಆದಿಲ್ ಅವರು ಕಾರುಗಳ ಕ್ಷೇತ್ರದ ಉದ್ಯಮಿ ಎಂದು ಪರಿಚಯ ಮಾಡಿಸಿದ್ದರು. ಆದಿಲ್ ಮೈಸೂರಿನ ‘ಯೂಸ್ಡ್​​ ಕಾರ್ಸ್​​’ ಎಂಬ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್​ ಆಗಿದ್ದಾರೆ ಎಂದು ಹೇಳಲಾಗಿದೆ.

Ad Widget . Ad Widget .

ರಾಖಿ ಆದಿಲ್ ಜತೆ ಕಾಣಿಸಿಕೊಂಡ ವಿಡಿಯೋದಲ್ಲಿ ಮುಂದಿನ ಬಿಗ್​ಬಾಸ್ ಸೀಸನ್​ನಲ್ಲಿ ತಾವೀರ್ವರೂ ಜತೆಯಾಗಿ ಸ್ಪರ್ಧೆಗೆ ತೆರಳುವುದಾಗಿ ಹೇಳಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಗೆಳೆಯನಿಗೆ ಪ್ರೀತಿಯ ಚುಂಬನ ನೀಡುವುದು ಕೂಡ ಸೆರೆಯಾಗಿದೆ. ಗೆಳೆಯ ಕಾರು ನೀಡಿದ್ದನ್ನು ಕೂಡ ರಾಖಿ ಹೇಳಿಕೊಂಡಿದ್ದಾರೆ.

Leave a Comment

Your email address will not be published. Required fields are marked *