ಸಮಗ್ರ ನ್ಯೂಸ್: ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರ ಸಂಖ್ಯೆ ಹೆಚ್ಚು. ಜೊತೆಗೆ ಸದಾ ಮೊಬೈಲ್ ನಲ್ಲಿಯೇ ಸಮಯ ಕಳೆಯುವವರ ಸಂಖ್ಯೆ ಬಹಳ ದೊಡ್ಡದಿದೆ. ಪ್ರತಿದಿನ ತಲೆ ನೋವು ಎನ್ನುವವರನ್ನು ನೋಡಬಹುದು, ತಲೆನೋವು ಬಂದ ತಕ್ಷಣ ಮೆಡಿಕಲ್ ಶಾಪ್ ಗೆ ಹೋಗಿ ಮಾತ್ರೆ ನುಂಗ್ತಾರೆ. ಆದ್ರೆ ಮಾತ್ರೆಗಿಂತ ಮನೆಮದ್ದು ಒಳ್ಳೆಯದು.
ಆಲೂಗಡ್ಡೆ ತಲೆನೋವನ್ನು ಕೆಲವೇ ಕ್ಷಣಗಳಲ್ಲಿ ದೂರ ಮಾಡಿ ನೆಮ್ಮದಿ ನೀಡುತ್ತದೆ. ಒಂದು ಆಲೂಗಡ್ಡೆಯನ್ನು ಸ್ಲೈಸ್ ಮಾಡಿ. ನಂತ್ರ ಶಾಂತವಾದ ಜಾಗದಲ್ಲಿ ಕುಳಿತುಕೊಂಡು ಹಣೆಯ ಮೇಲಿಟ್ಟುಕೊಂಡು, ಬಿಗಿಯಾಗಿ ಬಟ್ಟೆ ಬಿಗಿದುಕೊಳ್ಳಿ. ಕಣ್ಣು ಮುಚ್ಚಿ ಸ್ವಲ್ಪ ಹೊತ್ತು ಶಾಂತವಾಗಿ ಕುಳಿತುಕೊಂಡ್ರೆ ನಿಮ್ಮ ತಲೆನೋವು ಮಾಯವಾಗುತ್ತೆ. ಆಲೂಗಡ್ಡೆ ರಸ ಕೂಡ ನಿಮ್ಮ ತಲೆನೋವನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ.
ಬಿಸಿಬಿಸಿ ನೀರು ಕುಡಿಯುವುದರಿಂದ ಒತ್ತಡದಿಂದ ಉಂಟಾಗುವ ತಲೆನೋವು ನಿವಾರಣೆಯಾಗುತ್ತದೆ.
ಕಾಳುಮೆಣಸು ಹುಡಿ, ಈರುಳ್ಳಿ ರಸವನ್ನು ಬೆರೆಸಿ ಹಣೆಗೆ ಮಾಲಿಶ್ ಮಾಡುವುದರಿಂದ ತಲೆನೋವು ನಿವಾರಿಸಿಕೊಳ್ಳಬಹುದು.
ಕಾಳುಮೆಣಸನ್ನು ಸಣ್ಣನೆಯ ಬೆಂಕಿಗೆ ಹಿಡಿದು, ಅದರ ಹೊಗೆಯನ್ನು ಮೂಗಿನಲ್ಲಿ ಸೇವಿಸುವುದರಿಂದ ಮೈಗ್ರೇನ್ ತಲೆನೋವು ಕಡಿಮೆಯಾಗುತ್ತದೆ.
ಇವುಗಳು ಪಾರಂಪರಿಕ ಔಷಧೋಪಚಾರಗಳಾಗಿದ್ದು ಇವು ಅಂತಿಮವಲ್ಲ. ನಿರಂತರ ತಲೆನೋವು ಮುಂದುವರಿದರೆ ತಜ್ಞವೈದ್ಯರನ್ನು ಸಂಪರ್ಕಿಸುವುದು ಉತ್ತಮ.