Ad Widget .

ಕೊಲ್ಲೂರಿಗೆ ಹೊರಟವರು ತಲುಪಿದ್ದು ಗೋವಾಕ್ಕೆ..!; ದೇವಿ ದರ್ಶನದ ಬದಲು ಕಂಡಿದ್ದು ಬಿಕಿನಿ ಸುಂದರಿಯರು!!

ಕಾಸರಗೋಡು: ಕೇರಳದ ರಾಜಧಾನಿ ತಿರುವನಂತಪುರದಿಂದ ಕೊಲ್ಲೂರು ದೇವಸ್ಥಾನ ದರ್ಶನ ಮಾಡಲು ಹೊರಟಿದ್ದ ಯಾತ್ರಾರ್ಥಿಗಳು ಗೋವಾ ತಲುಪಿ ಚಾಲಕನೊಂದಿಗೆ ಪ್ರಯಾಣಿಕರು ವಾಗ್ವಾದ ನಡೆಸಿದ ಘಟನೆ ನಡೆದಿದೆ.

Ad Widget . Ad Widget .

ಮೇ 15ರ ಸಂಜೆ ತಿರುವನಂತಪುರದಿಂದ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಕೆ-ಸ್ವಿಫ್ಟ್‌ ಬಸ್‌ ಕೊಲ್ಲೂರಿಗೆ ಹೊರಟಿತ್ತು. ಎರ್ನಾಕುಳಂ ವರೆಗೆ ಓರ್ವ ಚಾಲಕನಿದ್ದು, ಅಲ್ಲಿಂದ ಇನ್ನೋರ್ವ ಚಾಲಕ ಬಸ್ಸನ್ನೇರಿ ಕರ್ತವ್ಯ ಆರಂಭಿಸಿದ. ಬಸ್‌ ಮಂಗಳೂರು ಮೂಲಕ ಕುಂದಾಪುರಕ್ಕೆ ತಲುಪಿತು. ಅಲ್ಲಿಂದ ಕೊಲ್ಲೂರಿಗೆ ತೆರಳಲು ಬಲಕ್ಕೆ ತಿರುವು ಪಡೆದುಕೊಳ್ಳಬೇಕು. ಆದರೆ ಕೊಲ್ಲೂರು ಬಗೆಗೆ ಯಾವುದೇ ಮಾಹಿತಿ ಇಲ್ಲದ ಚಾಲಕ ನೇರವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲೇ ಬಸ್ಸನ್ನು ಚಲಾಯಿಸಿದ.

Ad Widget . Ad Widget .

ಸೋಮವಾರ ಬೆಳಗ್ಗೆ ಬಸ್‌ನಲ್ಲಿದ್ದವರು ಎಚ್ಚೆತ್ತು ನೋಡಿದಾಗ ಬಸ್‌ ಸಮುದ್ರ ಕಿನಾರೆಯಲ್ಲಿತ್ತು. ಅರೆನಗ್ನ ವಿದೇಶೀಯರು ಓಡಾಡುತ್ತಿದ್ದರು. ಮೂಕಾಂಬಿಕೆಯ ದರ್ಶನಕ್ಕೆಂದು ಹೊರಟ ತಾವು ಗೋವೆಗೆ ತಲುಪಿದ್ದೇವೆ ಎಂಬುದು ತಿಳಿಯಿತು.

ಚಾಲಕನೊಂದಿಗೆ ಪ್ರಯಾಣಿಕರು ವಾಗ್ವಾದ ನಡೆಸಿದರು. ಗೂಗಲ್‌ ಮ್ಯಾಪ್‌ ದಾರಿ ತಪ್ಪಿಸಿದೆ ಎಂದು ಹೇಳಿ ಚಾಲಕ ಪಾರಾಗಲು ಯತ್ನಿಸಿದ. ಬಳಿಕ ಪ್ರಯಾಣಿಕರನ್ನು ಕೊಲ್ಲೂರಿಗೆ ಕರೆದೊಯ್ದ. ದೇವರ ದರ್ಶನ ಪಡೆದ ಪ್ರಯಾಣಿಕರು ಊರಿಗೆ ವಾಪಸಾಗಿದ್ದಾರೆ.

Leave a Comment

Your email address will not be published. Required fields are marked *