Ad Widget .

ಅನ್ಯಧರ್ಮೀಯನೊಂದಿಗೆ ಅನೈತಿಕ ಸಂಬಂಧ| ಪ್ರಿಯಕರನಿಂದಲೇ ಕೊಲೆಯಾದಳಾ ಮಹಿಳೆ?

ಸಮಗ್ರ ನ್ಯೂಸ್: ಗೃಹಿಣಿಯೊಬ್ಬಳು ಮನೆಯ ಮುಂದೆಯೇ ಬರ್ಬರವಾಗಿ ಕೊಲೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ವಡಗೆರೆ ಗ್ರಾಮದಲ್ಲಿ ನಡೆದಿದೆ. ಭಾಗ್ಯಶ್ರೀ(35) ಕೊಲೆಯಾದ ದುರ್ದೈವಿ. ಪತಿ ಚನ್ನಬಸವಪ್ಪ ಮತ್ತು ಇಬ್ಬರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದ ಭಾಗ್ಯಶ್ರೀ ಇಂದು ಬೆಳ್ಳಂಬೆಳಗ್ಗೆ ಕೊಲೆಯಾಗಿದ್ದಾಳೆ.

Ad Widget . Ad Widget .

ಮೃತ ಭಾಗ್ಯಶ್ರೀ ಇದೇ ಗ್ರಾಮದ ಮುಸ್ಲಿಂ ಸಮುದಾಯದ ರಿಯಾಜ್ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಳು ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದೇ ಸಲುಗೆಯಲ್ಲಿ ದುಡ್ಡು ಕಾಸು ಕೊಟ್ಟು ತೆಗೆದುಕೊಳ್ಳುವ ವ್ಯವಹಾರ ನಡೆಸುತ್ತಿದ್ದರು. ಆದರೆ ಇತ್ತೀಚೆಗೆ ಹಣಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ಜಗಳ ನಡೆದಿದ್ದು, ಕಳೆದ 3 ದಿನಗಳ ಹಿಂದೆ ರಿಯಾಜ್ ಸುಖಾಸುಮ್ಮನೆ ದುಡ್ಡು ಕೊಡಬೇಕು ಅಂತ ನನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಭಾಗ್ಯಶ್ರೀ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎನ್ನಲಾಗುತ್ತಿದೆ.

Ad Widget . Ad Widget .

ಇದೇ ಜಿದ್ದಿಗೆ ಭಾಗ್ಯಶ್ರೀಯನ್ನು ರಿಯಾಜ್ ಕೊಲೆ ಮಾಡಿ ಪರಾರಿಯಾಗಿರಬಹುದು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಬೆಳಗ್ಗೆ ಗಂಡ ಸಹ 5 ಗಂಟೆಗೆ ಕಾರ್ಯಕ್ರಮ ಇದೇ ಎಂದು ಮನೆಯಿಂದ ಹೊರಟು ಹೋಗಿದ್ದರು. ಮನೆಯಲ್ಲಿ ಗಂಡನಿಲ್ಲದ ಹೊತ್ತು ನೋಡಿ ರಿಯಾಜ್ ಬಂದು ಕೃತ್ಯ ಎಸಗಿ ಹೋಗಿದ್ದಾನೆ ಎನ್ನುವ ಅನುಮಾನ ಮೂಡಿದೆ.

ಇದೀಗ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪ್ರಾಥಮಿಕ ತನಿಖೆ ನಡೆಸಿ ಮೃತದೇಹವನ್ನ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಘಟನೆ ನಂತರ ರಿಯಾಜ್ ನಾಪತ್ತೆಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *