Ad Widget .

ರಾಜ್ಯದಲ್ಲಿ ಇನ್ಮುಂದೆ ಮುಂಜಾನೆ 6ಕ್ಕೆ ಆಜಾನ್ | ಮುಸ್ಲಿಂ ಮುಖಂಡರ ಸಭೆಯಲ್ಲಿ ನಿರ್ಧಾರ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಎದ್ದಿದ್ದ ಆಜಾನ್ ವರ್ಸಸ್ ಸುಪ್ರಭಾತದ ಸಮರ ಕೊಂಚ ತಣ್ಣಗಾಗುವ ನಿಟ್ಟಿನಲ್ಲಿ ಮುಂದುವರೆದಿದೆ. ಬೆಳಿಗ್ಗೆ 5 ಗಂಟೆಗೆ ಕೂಗಲಾಗುತ್ತಿದ್ದ ಆಜಾನ್, ಇನ್ಮುಂದೆ ರಾಜ್ಯಾಧ್ಯಂತ ಬೆಳಿಗ್ಗೆ 6 ಗಂಟೆಗೆ ಕೂಗಲು ಮುಸ್ಲಿಂ ಮುಖಂಡರ ಸಭೆಯಲ್ಲಿ ನಿರ್ಧರಿಸಲಾಗಿದೆ.

Ad Widget . Ad Widget .

ಈ ಸಂಬಂಧ ಮುಸ್ಲಿಂ ಧರ್ಮಗುರುಗಳು, ಮೌಲ್ವಿಗಳು ಮತ್ತು ಮುಖಂಡರ ಮಹತ್ವದ ಸಭೆ ನಡೆಯಿತು. ಅಮೀರ್ ಎ ಷರಿಯತ್ ಆಗಿರುವ ಮೌಲಾನ ಸಗೀರ್ ಅಹಮದ್ ಅಧ್ಯಕ್ಷತೆಯಲ್ಲಿ ಷರಿಯತ್ ಎ ಹಿಂದ್ ಸಂಘಟನೆ ಈ ಸಭೆಯನ್ನು ಏರ್ಪಡಿಸಿತ್ತು. ಈ ಸಭೆಯಲ್ಲಿ ಬೆಳಿಗ್ಗೆ 5 ಗಂಟೆಗೆ ಕೂಗಲಾಗುತ್ತಿದ್ದಂತ ಆಜಾನ್ ಬದಲಾಗಿ, ಬೆಳಿಗ್ಗೆ 6 ಗಂಟೆಗೆ ಆಜಾನ್ ಕೂಗಲು ಒಮ್ಮತದ ನಿರ್ಧರವನ್ನು ಕೈಗೊಳ್ಳಲಾಗಿದೆ.

Ad Widget . Ad Widget .

ಈ ಸಭೆಯ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದಂತ ಸಂಘಟನೆಯ ಉಮರ್ ಶರೀಫ್ ಅವರು, ಮುಸ್ಲೀಮರು ದೇಶದ ಕಾನೂನಿಗೆ ಬಲೆ ಕೊಡುತ್ತಿದ್ದೇವೆ. ಭಾರತದ ಕಾನೂನು ಪಾಲಿಸಲಿದ್ದೇವೆ. ನಾವು ಕಾನೂನು ಪಾಲಿಸುತ್ತಿಲ್ಲ ಎಂಬುದು ಸುಳ್ಳು. ಕಾನೂನಿಗೆ ಬೆಲೆ ಕೊಟ್ಟು ಬೆಳಗಿನ ಜಾವ 5 ಗಂಟೆಗೆ ಕೂಗಲಾಗುತ್ತಿದ್ದ ಆಜಾನ್ ಬದಲಾಗಿ, ಬೆಳಿಗ್ಗೆ 6 ಗಂಟೆಗೆ ಧ್ವನಿ ವರ್ಧಕ ಮೂಲಕ ಮಸೀದಿಗಳಲ್ಲಿ ಆಜಾನ್ ಕೂಗಲು ನಿರ್ಧರಿಸಲಾಗಿದೆ ಎಂದು ಹೇಳಿದರು.

Leave a Comment

Your email address will not be published. Required fields are marked *