ಗ್ಯಾನವ್ಯಾಪಿ ಮಸೀದಿಯಲ್ಲಿ ಪತ್ತೆಯಾಗಿದ್ದು ಶಿವಲಿಂಗವೇ? ಮಸೀದಿ ಸಮಿತಿ ಹೇಳಿದ್ದೇನು?

ಸಮಗ್ರ ನ್ಯೂಸ್: ಗ್ಯಾನವಾಪಿಯ ಮಸೀದಿಯಲ್ಲಿ ಮೂರುದಿನಗಳ ಸಮೀಕ್ಷೆ ಪೂರ್ಣಗೊಂಡ ನಂತರ ಹಿಂದೂ ಪರ ವಕೀಲರು ಮಸೀದಿ ಸಂಕೀರ್ಣದಲ್ಲಿರುವ ವಝುಖಾನಾ(ಕೊಳ/ಬಾವಿ ಇರುವ ಪ್ರದೇಶ) ದಲ್ಲಿ ಪುರಾತನ ಶಿವಲಿಂಗ ಪತ್ತೆಯಾಗಿದೆ ಎಂದು ಹೇಳಿದ್ದಾರೆ.

Ad Widget ... ..

ಆದರೆ ಮಸೀದಿಯ ಸಮಿತಿ ಇದನ್ನು ತಳ್ಳಿ ಹಾಕಿದ್ದು ಅದು ಶಿಲಿಂಗವಲ್ಲ ಬದಲಾಗಿ ಕಾರಂಜಿ (ಚಿಲುಮೆ) ಎಂದು ಹೇಳಿರುವ ಕುರಿತು ಇಂಡಿಯಾ ಟುಡೇ ವರದಿ ಮಾಡಿದೆ. ಈ ಬಾವಿಯೊಳಗಿನ ವಿಶೇಷ ಚಿತ್ರವು ಪತ್ತೆಯಾಗಿದೆ ಎಂದೂ ಇಂಡಿಯಾ ಟುಡೇಯಲ್ಲಿ ಬಿತ್ತರಿಸಲಾಗಿದೆ.

Ad Widget

ಮೂರು ದಿನಗಳ ಜ್ಞಾನವಾಪಿ ಮಸೀದಿ ಸಮೀಕ್ಷೆ ಸೋಮವಾರ ಮುಕ್ತಾಯಗೊಂಡ ನಂತರ, ಹಿಂದೂ ಪರ ವಕೀಲರು ಮಸೀದಿ ಸಂಕೀರ್ಣದ ವಝುಖಾನಾ ಅಥವಾ ಜಲಾಶಯದಲ್ಲಿ ಶಿವಲಿಂಗ ಕಂಡುಬಂದಿದೆ ಎಂದು ಹೇಳಿದ್ದು ಈ ಕೊಳಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಮಸೀದಿ ಒಳಗಡೆ ಶಿವಲಿಂಗ ಪತ್ತೆಯಾಗಿದೆ ಎಂಬ ವಕೀಲರ ಹೇಳಿಕೆ ದೇಶಾದದ್ಯಾಂತ ಸಂಚಲನಕ್ಕೆ ಕಾರಣವಾಗಿದೆ.

ಬಾಬರಿ ಮಸೀದಿಯ ನಂತರ ಮುಸ್ಲಿಮರು ಮತ್ತೊಂದು ಮಸೀದಿಯನ್ನು ಕಳೆದುಕೊಳ್ಳಲು ಸಿದ್ಧರಿಲ್ಲ ಎಂದು ಓವೈಸಿ ಹೇಳಿದ್ದಾರೆ. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, “ನೀವು ಎಷ್ಟೇ ಸತ್ಯವನ್ನು ಮುಚ್ಚಿಟ್ಟರೂ ಮುಂದೊಂದು ದಿನ ಅದು ಹೊರಬರುತ್ತದೆ, ಸತ್ಯ ಹಿ ಶಿವ ಹೈ” ಎಂದು ಟ್ವೀಟ್ ಮಾಡಿದ್ದಾರೆ.

Leave a Comment

Your email address will not be published. Required fields are marked *