Ad Widget .

ಮಂಡ್ಯದ ಹೈಕ್ಳಿಗೆ ಥ್ಯಾಂಕ್ಸ್ ಹೇಳಿದ ಸನ್ನಿ ಲಿಯೋನ್

ಸಮಗ್ರ ನ್ಯೂಸ್: ಮಂಡ್ಯದಲ್ಲಿ ತಮ್ಮ ಅಭಿಮಾನಿಗಳಿಗೆ ನಟಿ ಸನ್ನಿಲಿಯೋನ್ ಧನ್ಯವಾದ ಅರ್ಪಿಸಿದ್ದಾರೆ. ಇತ್ತೀಚಿಗಷ್ಟೇ ಮಂಡ್ಯದ ಯುವಕರು ಸನ್ನಿ ಲಿಯೋನ್ ಬರ್ತ್ ಡೇ ಆಚರಿಸಿದ್ದರು. ಅದು ಮಾಧ್ಯಮಗಳಲ್ಲೂ ವರದಿಯಾಗಿತ್ತು. ಆ ವರದಿಯ ಪೇಪರ್‌ ಕಟಿಂಗ್‌ಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿರುವ ಸೇಸಮ್ಮ, ಅಭಿಮಾನಿಗಳಿಗೆ ಥ್ಯಾಂಕ್ಸ್ ಎಂದಿದ್ದಾರೆ.

Ad Widget . Ad Widget .

ಮೇ 13ರಂದು ಸನ್ನಿ ಲಿಯೋನ್ ಅವರ 41ನೇ ವರ್ಷದ ಹುಟ್ಟುಹಬ್ಬವಿತ್ತು. ಅಂದು ಮಂಡ್ಯದ ಹಳ್ಳಿಯೊಂದರಲ್ಲಿ ಸ್ಪೆಷಲ್ ಆಗಿ ಸನ್ನಿ ಬರ್ತ್ ಡೇ ಆಚರಿಸಲಾಗಿತ್ತು. ಯುವಕರು ರಕ್ತದಾನ ಶಿಬಿರವನ್ನು ಆಯೋಜಿಸಿದ್ದರು. ಕೊಮ್ಮೇರಹಳ್ಳಿ ಗ್ರಾಮದಲ್ಲಿ ಅವರ ಅಭಿಮಾನಿಗಳು ಸನ್ನಿ ಲಿಯೋನ್ ಅವರ ದೊಡ್ಡ ಕಟೌಟ್‌ಗಳನ್ನು ನಿರ್ಮಿಸಿ, ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ, ಆಹಾರ ವಿತರಿಸಿದ್ದರು. ಶಿಬಿರದಲ್ಲಿ 39 ಯೂನಿಟ್‌ ರಕ್ತ ಸಂಗ್ರಹಿಸಲಾಗಿತ್ತು.

Ad Widget . Ad Widget .

ಪತ್ರಿಕೆಯಲ್ಲಿ ಪ್ರಕಟವಾದ ಈ ಸುದ್ದಿಯ ತುಣುಕನ್ನು ಸನ್ನಿ ಲಿಯೋನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಓಹ್ ಇದು ನಂಬಲು ಅಸಾಧ್ಯವಾಗಿದೆ. ನಿಮ್ಮ ಪ್ರೀತಿ, ಅಭಿಮಾನಗ ಗೌರವಾರ್ಥ ನಾನೂ ಬಂದು ರಕ್ತದಾನ ಮಾಡುತ್ತೇನೆ. ತುಂಬಾ ಧನ್ಯವಾದಗಳು! ನೀವೆಲ್ಲರೂ ನಿಜವಾಗಿಯೂ ನನಗೆ ತುಂಬಾ ವಿಶೇಷವಾದ ಭಾವನೆ ಮೂಡಿಸುತ್ತೀರಿ! ನಿನ್ನನ್ನು ಪ್ರೀತಿಸುತ್ತೇನೆ” ಅಂತ ಬರೆದುಕೊಂಡಿದ್ದಾರೆ.

ಈ ಕುರಿತಂತೆ ಟ್ರಸ್ಟ್‌ ಅಧ್ಯಕ್ಷ ನಟರಾಜು ಮಾತನಾಡಿ, ಸನ್ನಿ ಲಿಯೋನ್‌ ಅವರ ಹುಟ್ಟುಹಬ್ಬದ ಆಚರಣೆಗೆ ಗ್ರಾಮದ ಯುವಕರು ರಕ್ತದಾನ ಮಾಡಿರುವುದು ನಮಗೆ ಸಂತಸ ತಂದಿದೆ ಎಂದಿದ್ದಾರೆ. ಇನ್ನು “ಯುವಕರು ದತ್ತಿ ಕಾರ್ಯಕ್ರಮಗಳನ್ನು ನಡೆಸಲು ಅವರ ಹೆಸರಿನಲ್ಲಿ ಸಂಘವನ್ನು ರಚಿಸಿದ್ದೇವೆ ಎಂದು ಹೇಳಿದರು. ಅನಾಥ ಮಕ್ಕಳಿಗೆ ಸಹಾಯ ಮಾಡುವಲ್ಲಿ ಲಿಯೋನ್ ಅವರ ಕೆಲಸವನ್ನು ಗೌರವಿಸಬೇಕು ಎಂದು ಅವರು ಹೇಳಿದರು.

Leave a Comment

Your email address will not be published. Required fields are marked *