ಸಮಗ್ರ ನ್ಯೂಸ್: ವಿವಾದಿತ ಕಾಶಿ ಜ್ಞಾನವ್ಯಾಪಿ ಮಸೀದಿಯಲ್ಲಿ 12 ಅಡಿ ಶಿವಲಿಂಗ ಪತ್ತೆಯಾಗಿದ್ದು, ಶಿವಲಿಂಗ ಪತ್ತೆಯಾದ ಸ್ಥಳಕ್ಕೆ ಸಂಪೂರ್ಣ ಭದ್ರತೆ ಒದಗಿಸಲಾಗಿದೆಯಲ್ಲದೆ, ಅದರ 100 ಅಡಿ ವ್ಯಾಪ್ತಿ ಪ್ರದೇಶವನ್ನು ಸೀಲ್ ಮಾಡಲಾಗಿದೆ.
ಜಿಲ್ಲಾಡಳಿತ ಪೊಲೀಸ್ ಇಲಾಖೆ ಹಾಗೂ ಸಿಆರ್ ಪಿಎಫ್ ಕಮಾಂಡೆಟ್ ಗೆ ಶಿವಲಿಂಗ ಸ್ಥಳದ ರಕ್ಷಣೆ ಜವಾಬ್ದಾರಿ ನೀಡಲಾಗಿದೆ. ಯಾವುದೇ ವ್ಯಕ್ತಿ ಅಲ್ಲಿ ಪ್ರವೇಶಿಸುವಂತಿಲ್ಲ ಎಂದು ಆದೇಶಿಸಲಾಗಿದೆ.
ಕೋರ್ಟ್ ಆದೇಶದಂತೆ ಜ್ಞಾನವ್ಯಾಪಿ ಮಸೀದಿಯ ಸಮೀಕ್ಷೆ ಹಾಗೂ ವಿಡಿಯೋ ಚಿತ್ರಿಕರಣ ನಡೆಸಲಾಗಿದ್ದು , ಇಂದು ಸಮೀಕ್ಷೆ ಬಹುತೇಕ ಮುಕ್ತಾಯಗೊಂಡಿದೆ. ಶ್ರೀಘ್ರದಲ್ಲಿಯೇ ಸಮೀಕ್ಷೆ ವಿಡಿಯೋ ಇರುವ ಚಿಪ್ ನ್ನು ನ್ಯಾಯಾಧೀಶರಿಗೆ ನೀಡಲಾಗುವುದೆಂದು ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ.
ಮಸೀದಿ ಹೊರಗೆ ಭಾರಿ ಸಂಖ್ಯೆಯಲ್ಲಿ ಭಕ್ತಾದಿಗಳು ಸೇರಿದ್ದರಿಂದ ಪೊಲೀಸ್ ಸರ್ಪಗಾವಲು ಏರ್ಪಡಿಸಲಾಗಿತ್ತು. ಪ್ರತಿದಿನ ಸಮೀಕ್ಷೆ ನಡೆಯತ್ತಿರವ ಸಂದರ್ಭದಲ್ಲಿ ನೆರೆದಿದ್ದ ಭಕ್ತರಿಂದ ಹರ್ ಹರ್ ಮಹಾದೇವ್ ಘೋಷಣೆ ಕೇಳಿ ಬರುತ್ತಿತ್ತು.
ಮಸೀದಿ ಒಳಭಾಗದಲ್ಲಿ ಶಿವಲಿಂಗ್ ಪತ್ತೆಯಾಗಿದ್ದರಿಂದ ಸಂತುಷ್ಟಗೊಂಡ ಭಕ್ತರು, ಇಂದು ಸೋಮವಾರ ಸ್ವತಃ ಶಿವನೇ ಪ್ರತ್ಯಕ್ಷವಾದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.