Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ದೈನಂದಿನ ಜೀವನದಲ್ಲಿ ನಮ್ಮ ಎಲ್ಲಾ ವ್ಯವಹಾರಗಳ ಹಿಂದೆ, ನಕ್ಷತ್ರ, ರಾಶಿಗಳು ಪ್ರಭಾವ ಬೀರುತ್ತವೆ. ನಮ್ಮ ನಡವಳಿಕೆಗಳು ಇವುಗಳ ಪ್ರಭಾವದಿಂದಾಗಿ ನಡೆಯುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇವುಗಳ ಪ್ರಭಾವದಿಂದಾಗಿ ನಾವು ನಮ್ಮ ಕಾರ್ಯಗಳಲ್ಲಿ ಶುಭ ಮತ್ತು ಅಶುಭ ಫಲಗಳನ್ನು ಕಾಣುತ್ತೇವೆ. ಈ ವಾರದಲ್ಲಿ ಯಾವ ರಾಶಿಯವರಿಗೆ ಏನು ಫಲ ಲಭಿಸುತ್ತದೆ, ರಾಶಿಗಳ ಗೋಚಾರಫಲ ಮತ್ತು ಪರಿಹಾರವೇನು ಎಂಬ ಮಾಹಿತಿ ಇಲ್ಲಿದೆ.

Ad Widget . Ad Widget .

ಮೇಷ ರಾಶಿ:
ಪಾರಂಪರಿಕವಾಗಿ ನಡೆದು ಬಂದ ವ್ಯವಹಾರಗಳನ್ನು ಬಿಡುವುದು ಬೇಡ.ಸಿನಿಮಾ ರಂಗದವರಿಗೆ ಉತ್ತಮ ಅವಕಾಶಗಳು ದೊರೆತು ಹೆಚ್ಚು ಸಂಪಾದನೆ ಹಾಗೂ ಹೆಸರು ಬರುತ್ತದೆ. ಪಶುಪಕ್ಷಿಗಳಿಗೆ ಆಹಾರ ನೀಡಬೇಕೆಂಬ ಹಂಬಲ ಉಂಟಾಗಿ ಅದನ್ನು ಕಾರ್ಯಗತ ಮಾಡುವಿರಿ. ಆದಾಯದಲ್ಲಿ ಸಾಕಷ್ಟು ಏರಿಕೆಯನ್ನು ಕಾಣಬಹುದು. ನಿಮ್ಮ ಸ್ವಂತ ಕುಟುಂಬದ ಸಾಮರಸ್ಯವನ್ನು ಕಾಪಾಡಲು ಹೆಚ್ಚು ಶ್ರಮವಹಿಸುವಿರಿ. ಆದಾಯಕ್ಕೆ ಮೀರಿದ ಖರ್ಚು ಇರುವುದರಿಂದ ಹಣದ ನಿರ್ವಹಣೆಯನ್ನು ಸರಿಯಾಗಿ ಮಾಡಿರಿ. ನಿಮ್ಮ ಆಶೋತ್ತರಗಳನ್ನು ಸಮಾಧಾನದಿಂದ ಈಡೇರಿಸಿಕೊಳ್ಳುವುದು ಒಳ್ಳೆಯದು. ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದರೂ ಆತಂಕವೇನಿಲ್ಲ. ರಾಶಿಯಲ್ಲಿ ರಾಹು ಇರುವುದರಿಂದ ಹಮ್ಮಿನ ಮಾತುಗಳು ಬರುತ್ತವೆ. ಈ ಬಗ್ಗೆ ಎಚ್ಚರ ವಹಿಸಿರಿ.

Ad Widget . Ad Widget .

ವೃಷಭರಾಶಿ:
ಕುಟುಂಬದ ಸದಸ್ಯರೊಡನೆ ಆರ್ಥಿಕ ವಿಚಾರಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಅತಿಯಾದ ಆತ್ಮಗೌರವ ನಿಮ್ಮನ್ನು ಕಾಡಬಹುದು. ಯಾವುದೇ ರೀತಿಯ ಮಾತುಕತೆಯಲ್ಲಿ ನಿಧಾನವಾಗಿ ವ್ಯವಹರಿಸಿದಲ್ಲಿ ನಿಮ್ಮ ಕಾರ್ಯಗಳು ಆಗುವವು. ಹಣದ ಒಳಹರಿವು ನಿಮ್ಮ ನಿರೀಕ್ಷೆಯ ಮಟ್ಟದಲ್ಲಿ ಇರುತ್ತದೆ. ನಿಮ್ಮ ಕೆಲಸಕಾರ್ಯಗಳಲ್ಲಿ ಸ್ನೇಹಿತರ ಸಹಕಾರ ಸಿಗುತ್ತದೆ. ಹಿಡಿದ ಕೆಲಸವನ್ನು ಸಾಧಿಸಿ ಜನಮನ್ನಣೆಯನ್ನು ಪಡೆಯುವಿರಿ. ಹೊಸ ಕಾರ್ಯರೂಪಿಸುವಲ್ಲಿ ನಿಮ್ಮ ಆಲೋಚನೆ ಹೆಚ್ಚು ಫಲವನ್ನು ಕೊಡುತ್ತದೆ. ವಿವಾಹ ಆಕಾಂಕ್ಷಿಗಳಿಗೆ ಸಂಬಂಧ ಕೂಡಿಬರಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಅಧ್ಯಯನ ಮಾಡುವ ಅವಕಾಶ ದೊರೆಯುತ್ತದೆ. ಆಭರಣ ವ್ಯಾಪಾರಿಗಳಿಗೆ ಉತ್ತಮ ವ್ಯಾಪಾರ ನಡೆದು ಲಾಭವಿರುತ್ತದೆ.

ಮಿಥುನ ರಾಶಿ:
ಕುಟುಂಬದ ಸದಸ್ಯರಿಂದಲೇ ಸಣ್ಣಪುಟ್ಟ ವಿರೋಧಗಳನ್ನು ಕಾಣಬಹುದು. ಎಲ್ಲರೊಂದಿಗೂ ಸೌಹಾರ್ದಯುತವಾಗಿ ಮಾತನಾಡಿದಲ್ಲಿ ಸಮಸ್ಯೆ ಬಗೆಹರಿಯುತ್ತದೆ. ನಿಮ್ಮೆಲ್ಲಾ ಕೆಲಸಗಳಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಕಾಣಬಹುದು. ಅನೇಕ ದಿನಗಳಿಂದ ವೃತ್ತಿಯಲ್ಲಿ ಕಾಡುತ್ತಿದ್ದ ಸಮಸ್ಯೆಗಳನ್ನು ಹಿರಿಯ ಅಧಿಕಾರಿಗಳ ಬಳಿ ಚರ್ಚೆ ಮಾಡಿ ಪರಿಹರಿಸಿಕೊಳ್ಳುವಿರಿ. ಆರ್ಥಿಕ ಸ್ಥಿತಿಯು ಸಾಮಾನ್ಯವಾಗಿರುತ್ತದೆ. ಆದ್ದರಿಂದ ಖರ್ಚಿಗೆ ಕಡಿವಾಣವನ್ನು ಹಾಕಿರಿ. ನಿಮ್ಮ ಒಡಹುಟ್ಟಿದವರಿಂದ ಅನಿರೀಕ್ಷಿತ ಸಹಾಯ ದೊರೆತು ಸಂತಸಪಡುವಿರಿ. ವಿದ್ಯಾರ್ಥಿಗಳಿಗೆ ಅವರ ಶ್ರಮಕ್ಕೆ ತಕ್ಕ ಫಲ ಇರುತ್ತದೆ. ಹಿರಿಯರಿಂದ ಬರಬೇಕಾಗಿದ್ದ ಆಸ್ತಿ ಬರುವ ಸಾಧ್ಯತೆ ಇದೆ. ವೃತ್ತಿಯಲ್ಲಿ ಏಳಿಗೆಯನ್ನು ಕಾಣಬಹುದು.

ಕಟಕ ರಾಶಿ:
ಬೇರೆಯವರ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ. ಆರ್ಥಿಕ ಸ್ಥಿತಿಯು ಪ್ರಗತಿಯನ್ನು ಕಾಣುತ್ತದೆ. ಹಿತಶತ್ರುಗಳ ಬಗ್ಗೆ ಹೆಚ್ಚು ಜಾಗರೂಕತೆಯಿಂದ ಇರುವುದು ಒಳ್ಳೆಯದು. ನಿಮ್ಮ ಉಪಕಾರಿ ಗುಣವನ್ನು ಕೆಲವರು ದುರುಪಯೋಗ ಮಾಡಿಕೊಳ್ಳಬಹುದು. ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇದ್ದೇ ಇರುತ್ತದೆ. ಹೊಸ ಸ್ಫೂರ್ತಿಯೊಂದಿಗೆ ಕೆಲಸವನ್ನು ಮಾಡುವಿರಿ. ವ್ಯವಹಾರದಲ್ಲಿ ಎದುರಾಳಿಗಳ ಕಾಟ ಕಾಡಬಹುದು, ಎಚ್ಚರದಿಂದ ಮುನ್ನಡೆಯಿರಿ. ಉಪಕಾರ ಗುಣದಿಂದ ಅಕ್ಕಪಕ್ಕದವರ ನೆರವಿಗೆ ಧಾವಿಸುವಿರಿ. ಆಹಾರದ ವಿಷಯದಲ್ಲಿ ಎಚ್ಚರವಾಗಿರಿ. ಇಲ್ಲವಾದಲ್ಲಿ ಅನಾರೋಗ್ಯ ಉಂಟಾಗಬಹುದು. ವಿದೇಶದಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ಅಭಿವೃದ್ಧಿ ಇರುತ್ತದೆ.

ಸಿಂಹ ರಾಶಿ:
ನಿಮ್ಮ ಪ್ರಾಮಾಣಿಕತೆಯ ಫಲವು ನಿಮ್ಮನ್ನು ಅರಸಿ ಬರುತ್ತದೆ. ಉದ್ಯೋಗದಲ್ಲಿ ಮೇಲೇರುವ ಸಾಧ್ಯತೆ ಇದೆ. ಕರಕುಶಲ ವಸ್ತುಗಳನ್ನು ತಯಾರಿಸುವವರಿಗೆ ಬೇಡಿಕೆ ಹೆಚ್ಚುತ್ತದೆ. ಸರ್ಕಾರದಿಂದ ಬರಬೇಕಾಗಿದ್ದ ಸಹಾಯಧನ ಬರುತ್ತದೆ. ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತದೆ. ಖರ್ಚು ಅತಿಯಾಗಿರುತ್ತದೆ. ವೃತ್ತಿಯಲ್ಲಿ ಭರವಸೆ ಮೂಡುವ ಸಂತೋಷದ ವಿಚಾರಗಳು ಕೇಳಿಬರುತ್ತದೆ. ಮನಸ್ಸಿನಲ್ಲಿದ್ದ ದುಗುಡ ದುಮ್ಮಾನಗಳು ದೂರವಾಗಿ ಸಂತೋಷವಾಗುತ್ತದೆ. ನಿಮ್ಮ ಯಶಸ್ಸಿನ ಹಾದಿಯಲ್ಲಿ ಸಾಕಷ್ಟು ಜನ ಅಡ್ಡಿ ಮಾಡಲೆತ್ನಿಸುವರು. ನಿಮ್ಮ ಎಚ್ಚರಿಕೆಯ ನಡೆಯಿಂದ ಎದುರಾಗಬಹುದಾದ ತೊಂದರೆಗಳನ್ನು ತಪ್ಪಿಸಿಕೊಳ್ಳುವಿರಿ, ನಿಧಾನವಾಗಿ ಉನ್ನತಿಯತ್ತ ಸಾಗುವಿರಿ.

ಕನ್ಯಾ ರಾಶಿ:
ವೃತ್ತಿಯಲ್ಲಿ ಅತಿಯಾದ ಒತ್ತಡ ಕಾಣಿಸಿದರೂ ಸ್ನೇಹಿತರ ಸಹಕಾರದಿಂದ ನಿರಾಳವಾಗುತ್ತದೆ. ಚಿಕ್ಕಮಕ್ಕಳ ಯೋಗಕ್ಷೇಮದ ಬಗ್ಗೆ ಹೆಚ್ಚು ಗಮನವಿರಲಿ. ಅನಿವಾರ್ಯ ಬದಲಾವಣೆಗೆ ಒಳಗಾಗಿ ಇದ್ದದ್ದನ್ನು ಕಳೆದುಕೊಳ್ಳುವುದರ ಜೊತೆಗೆ ನಿಮ್ಮತನವನ್ನು ಕಳೆದುಕೊಳ್ಳಬೇಡಿ. ವೈದ್ಯರಿಗೆ ಅತಿಯಾದ ಕಾರ್ಯದೊತ್ತಡ ಬರಬಹುದು, ಇದನ್ನು ಸಮಾಧಾನದಿಂದ ನಿಭಾಯಿಸಿರಿ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಸ್ತ್ರೀಯರು ನಡೆಸುವ ವ್ಯವಹಾರಗಳಲ್ಲಿ ಮುನ್ನಡೆ ಇರುತ್ತದೆ. ಅನ್ಯರೊಡನೆ ವ್ಯವಹಾರ ನಡೆಸುವಾಗ ಎಚ್ಚರವಿರಲಿ, ವಿನಾಕಾರಣ ಟೀಕೆಗೆ ಗುರಿಯಾಗಬೇಕಾದೀತು. ಸ್ಥಿರಾಸ್ತಿ ವಿಷಯದಲ್ಲಿ ಪ್ರಗತಿಯನ್ನು ಕಾಣುವಿರಿ. ವಿದ್ಯಾರ್ಥಿಗಳಿಗೆ ಸ್ವಲ್ಪಮಟ್ಟಿನ ಹಿನ್ನಡೆ ಇರುತ್ತದೆ. ಮಕ್ಕಳ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಇರುತ್ತವೆ.

ತುಲಾ ರಾಶಿ:
ಯಾವುದೇ ಯೋಜನೆಯನ್ನು ರೂಪಿಸುವ ಮುನ್ನ ಅದರ ಬಗ್ಗೆ ಅವಲೋಕನ ಬಹಳ ಅಗತ್ಯ. ಮಿತ್ರರ ನೇತೃತ್ವದಲ್ಲಿ ವ್ಯವಹಾರ ಸುಗಮವಾಗಿ ನಡೆಯುತ್ತದೆ. ಯಾವುದೋ ಒಂದು ಸ್ಥಾನವನ್ನು ಪಡೆಯಲು ತಂತ್ರಗಾರಿಕೆ ನಡೆಸಿ ಅದರಲ್ಲಿ ಸಫಲತೆಯನ್ನು ಕಾಣುವಿರಿ. ಕಟ್ಟಡ ವಿನ್ಯಾಸಕಾರರಿಗೆ ಹೆಚ್ಚು ಕೆಲಸ ದೊರೆಯುತ್ತದೆ. ಅಚಾತುರ್ಯದಿಂದ ಆಡಿದ ಒಂದು ಮಾತು ನಿಮ್ಮನ್ನು ಸಾಕಷ್ಟು ಮುಜುಗರಕ್ಕೆ ಸಿಲುಕಿಸಬಹುದು. ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಸಾಕಷ್ಟು ಪರಿಶ್ರಮ ಪಡಲೇಬೇಕು. ಹೆಂಗಸರು ನಡೆಸುವ ಹಣಕಾಸಿನ ವ್ಯವಹಾರಗಳಲ್ಲಿ ಹಿನ್ನಡೆ ಆಗಲಿದೆ. ಸಂಗಾತಿಯೊಡನೆ ಸಾಕಷ್ಟು ಕಾವೇರಿದ ಮಾತುಗಳು ಆಗಬಹುದು.

ವೃಶ್ಚಿಕ ರಾಶಿ:
ನೌಕಾಯಾನದಲ್ಲಿ ಕೆಲಸ ಮಾಡುವವರಿಗೆ ಒಳ್ಳೆಯ ಸಮಯ. ಸಮಾಜ ಸೇವಕರು ಸಮಾಜಕ್ಕೆ ಉತ್ತಮ ಸಂದೇಶವನ್ನು ಕೊಡುವ ಕೆಲಸ ಮಾಡುವರು. ಸ್ಥಿರಾಸ್ತಿಯ ವಿಚಾರದಲ್ಲಿ ಹೆಚ್ಚು ತಗಾದೆ ಉಂಟಾಗಬಹುದು. ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ಕುಟುಂಬದವರಿಂದ ಹೆಚ್ಚಿನ ಸಹಕಾರ ದೊರೆತು ಹೆಚ್ಚು ಬೆಳವಣಿಗೆಯನ್ನು ಕಾಣಬಹುದು. ಕೆಲವೊಂದು ವಿಚಾರಗಳಲ್ಲಿ ನಿರ್ಣಯ ಕೈಗೊಳ್ಳುವ ಮುನ್ನ ಹಿರಿಯರೊಡನೆ ಸಮಾಲೋಚನೆ ಮಾಡುವುದು ಒಳಿತು. ಯಾವುದೇ ರೀತಿಯ ಉದ್ವೇಗ ಇದ್ದರೂ ಸಹ ಶಾಂತಚಿತ್ತದಿಂದ ಇರುವುದು ಬಹಳಷ್ಟು ಒಳ್ಳೆಯದು. ಸಂಗಾತಿಯ ಆದಾಯದಲ್ಲಿ ಸಾಕಷ್ಟು ಏರಿಕೆಯನ್ನು ಕಾಣಬಹುದು. ಅನಿರೀಕ್ಷಿತವಾಗಿ ಕೆಲವು ಶತ್ರುಗಳು ಮಿತ್ರರಾಗುವರು.

ಧನಸ್ಸು ರಾಶಿ:
ಆದಾಯದಲ್ಲಿ ಸ್ಥಿರತೆಯನ್ನು ಕಾಣಬಹುದು. ಹೊಸ ಆದಾಯ ತರುವ ಮಾರ್ಗದ ಬಗ್ಗೆ ಆಲೋಚನೆ ಮಾಡುವಿರಿ. ಪರಿಸರವಾದಿಗಳಿಗೆ ಹೆಚ್ಚಿನ ಬೆಲೆ ಮತ್ತು ಗೌರವ ದೊರೆಯುತ್ತದೆ. ಸ್ವಯಂ ಉದ್ಯೋಗ ಮಾಡುವವರು ಉತ್ತಮ ಆದಾಯದ ನಿರೀಕ್ಷೆ ಮಾಡಬಹುದು. ಎಲ್ಲಾ ಅಡೆತಡೆಗಳನ್ನು ಮೀರಿ ನಿಮ್ಮ ಕೆಲಸವನ್ನು ಸಾಧಿಸುವಿರಿ. ಸತ್ಪುರುಷರ ದರ್ಶನ ಭಾಗ್ಯವಿರುತ್ತದೆ. ಸ್ಥಿರಾಸ್ತಿ ಖರೀದಿಯತ್ತ ಆಲೋಚನೆ ಮಾಡುವಿರಿ. ಪತ್ರಿಕೋದ್ಯಮದಲ್ಲಿ ದುಡಿಯುತ್ತಿರುವವರಿಗೆ ವಿಪುಲ ಅವಕಾಶಗಳು ಒದಗಿಬರುತ್ತವೆ. ಸರ್ಕಾರಿ ವ್ಯವಹಾರಗಳಿಗೆ ಇದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ಭೂಮಿಗೆ ಸಂಬಂಧಪಟ್ಟ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಅಭಿವೃದ್ಧಿ ಇರುತ್ತದೆ. ಆಸ್ತಿ ವಿಚಾರಗಳಿಗಾಗಿ ಬಂಧುಗಳ ನಡುವೆ ಘರ್ಷಣೆ ಆಗಬಹುದು.

ಮಕರ ರಾಶಿ:
ಆದಾಯದ ಹೊಸ ದಾರಿ ಗೋಚರವಾಗುವ ಸಾಧ್ಯತೆ ಇದೆ. ಖರ್ಚನ್ನು ಸಾಕಷ್ಟು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಯಂತ್ರಾಗಾರಗಳಲ್ಲಿ ಅಗ್ನಿ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಒಳ್ಳೆಯ ಕೆಲಸದ ನಿರೀಕ್ಷೆಯಲ್ಲಿ ಇರುವಿರಿ. ನಿಮ್ಮ ಪ್ರತಿಭೆಗೆ ತಕ್ಕಂತೆ ಪ್ರಬುದ್ಧ ನಡವಳಿಕೆಯನ್ನು ಎಲ್ಲರ ಮುಂದೆ ಪ್ರದರ್ಶಿಸಿ ಗೌರವಕ್ಕೆ ಪಾತ್ರರಾಗುವಿರಿ. ಕಲಾ ಕ್ಷೇತ್ರದಲ್ಲಿರುವವರಿಗೆ ಸಾಕಷ್ಟು ಜನಮನ್ನಣೆ ದೊರೆಯುತ್ತದೆ. ವಿದೇಶದಲ್ಲಿ ಇರುವವರು ಸ್ಥಿರಾಸ್ತಿಯನ್ನು ಈಗ ಮಾಡಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಉತ್ತಮ ಯಶಸ್ಸು ದೊರೆಯುತ್ತದೆ. ಸರ್ಕಾರಿ ವ್ಯವಹಾರಗಳಲ್ಲಿ ಇದ್ದ ಅನಿಶ್ಚಿತತೆ ನಿವಾರಣೆಯಾಗುತ್ತದೆ. ಕೃಷಿಕರಿಗೆ ಉತ್ತಮ ಆದಾಯವಿರುತ್ತದೆ. ಕೃಷಿ ಉಪಕರಣಗಳನ್ನು ತಯಾರು ಮಾಡುವವರಿಗೆ ಬೇಡಿಕೆ ಹೆಚ್ಚಾಗುತ್ತದೆ.

ಕುಂಭ ರಾಶಿ:
ಬಂಧುಗಳು ನಿಮಗೆ ಕಿರಿಕಿರಿ ಮಾಡಿದರೂ ದೈವಕೃಪೆಯಿಂದ ನೀವು ಪಾರಾಗುವಿರಿ. ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ರೀತಿಯ ಅನುಕೂಲ ದೊರೆಯುತ್ತದೆ. ಸರ್ಕಾರಿ ನೌಕರರಿಗೆ ಮೇಲಧಿಕಾರಿಗಳಿಂದ ಸಹಾಯ ದೊರೆಯುತ್ತದೆ. ಪ್ರೀತಿ-ಪ್ರೇಮದಲ್ಲಿ ಅನಿರೀಕ್ಷಿತ ತಲೆನೋವು ಎದುರಾಗಬಹುದು. ಹಿರಿಯರ ಸಲಹೆ ನಿಮ್ಮ ವ್ಯವಹಾರದಲ್ಲಿ ಸಾಕಷ್ಟು ಪ್ರಯೋಜನ ಉಂಟುಮಾಡುತ್ತವೆ. ಯಾರಿಗೂ ಜಾಮೀನು ನೀಡದಿರುವುದು ಬಹಳ ಉತ್ತಮ ಮತ್ತು ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯನ್ನು ವಹಿಸಿರಿ. ಮೀನುಗಾರಿಕೆ ಮಾಡುವವರಿಗೆ ಹೆಚ್ಚು ಲಾಭ ಬರುತ್ತದೆ. ಕೃಷಿ ಸಂಶೋಧಕರಿಗೆ ಉತ್ತಮ ಮಾರ್ಗದರ್ಶನದ ಜೊತೆಗೆ ಉತ್ತಮ ಸೌಲಭ್ಯ ದೊರೆಯುತ್ತದೆ. ಸಾಲದ ಸುಳಿಯಲ್ಲಿ ಸಿಲುಕಿರುವವರಿಗೆ ಕೊಂಚ ನಿರಾಳವಾಗುತ್ತದೆ.

ಮೀನ ರಾಶಿ:
ಬ್ಯಾಂಕಿನಿಂದ ಹಣಕಾಸು ಸಹಾಯದ ನಿರೀಕ್ಷೆಯಲ್ಲಿರುವ ನಿಮಗೆ ಈ ಸಹಾಯ ಒದಗಿಬರುತ್ತದೆ. ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು. ಸಂಗಾತಿಯ ಧೋರಣೆ ಕೆಲವೊಮ್ಮೆ ನಿಮಗೆ ಬೇಸರ ತರಿಸಬಹುದು. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ವಿದೇಶಗಳಿಂದ ಬರುವ ಬಂಧುಗಳಿಂದ ನಿಮಗೆ ಅನುಕೂಲವಾಗುತ್ತದೆ. ಇವರು ನಡೆಸುತ್ತಿರುವ ಉದ್ಯಮಗಳಲ್ಲಿ ಚೇತರಿಕೆಯನ್ನು ಕಾಣಬಹುದು. ಅತಿಯಾದ ಉದ್ವೇಗ ನಿಮ್ಮನ್ನು ಕಾಡಬಹುದು. ಯಾರ ಮೇಲೆಯೂ ಸಲ್ಲದ ಆರೋಪಗಳನ್ನು ಮಾಡಲು ಹೋಗಬೇಡಿ. ತಾಯಿಯೊಡನೆ ವಿನಾಕಾರಣ ವಾಗ್ವಾದ ಉಂಟಾಗಬಹುದು. ಸ್ಥಿರಾಸ್ತಿಗೆ ಸಂಬಂಧಪಟ್ಟ ಕಾನೂನು ತೊಡಕುಗಳು ಎದುರಾಗುವ ಸಾಧ್ಯತೆಗಳಿವೆ. ಸ್ವಂತ ಆರೋಗ್ಯದ ಬಗ್ಗೆ ಹೆಚ್ಚು ಎಚ್ಚರವಹಿಸುವುದು ಅಗತ್ಯ.

Leave a Comment

Your email address will not be published. Required fields are marked *