Ad Widget .

ನ್ಯಾಯಕೊಡಿ; ಇಲ್ಲದಿದ್ದರೆ ಉಗ್ರರ ಜೊತೆ ಸೇರಿಕೊಳ್ತೇವೆ| ರಕ್ತದಲ್ಲಿ ಪತ್ರ ಬರೆದು ಪ್ರಧಾನಿಗೆ ಕಳುಹಿಸಿದ ಪಿಎಸ್ಐ ಅಭ್ಯರ್ಥಿಗಳು

ಸಮಗ್ರ ನ್ಯೂಸ್: ಪಿಎಸ್‌ಐ ಅಕ್ರಮದಲ್ಲಿ ಸಿಐಡಿ ಅಧಿಕಾರಿಗಳು ಈ ಪ್ರಕರಣದಲ್ಲಿ ಭಾಗಿಯಾದ ಹಲವರನ್ನು ಬಂಧಿಸಿದ್ದಾರೆ. ಆದರೆ ಈ ಮಧ್ಯೆ ಕಷ್ಟಪಟ್ಟು ಓದಿ ಬರೆದ ವಿದ್ಯಾರ್ಥಿಗಳು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಯಾರೋ ಮಾಡಿದ ಕೆಲಸಕ್ಕೆ ಇಷ್ಟು ವರ್ಷದ ಶ್ರಮ, ನಮ್ಮ ಮುಂದಿನ ಭವಿಷ್ಯ ಹಾಳಾಗಿದೆ ಎಂದು ಗೋಳಾಡುತ್ತಿದ್ದು, ಇದೀಗ ಒಂದೆಜ್ಜೆ ಮುಂದೆ ಹೋಗಿ ನೊಂದ ಅಭ್ಯರ್ಥಿಗಳು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

Ad Widget . Ad Widget . Ad Widget .

ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆದಿದ್ದು, ಪ್ರಧಾನಿ ಮೋದಿಯವರ ಬಗ್ಗೆ ನಮಗೆ ಅಪಾರ ಗೌರವವಿದೆ, ನ್ಯಾಯ ಕೊಡಿಸುತ್ತಾರೆ ಎಂದು ನಂಬಿದ್ದೇವೆ. ಒಂದು ವೇಳೆ ನ್ಯಾಯ ಕೊಡಿಸದೆ ಹೋದರೆ ನಾವೂ ಮುಂದೆ ಟೆರರಿಸ್ಟ್ ಗಳ ಜೊತೆ ಕೈಜೋಡಿಸುತ್ತೇವೆ. ಕರ್ನಾಟಕ ಸರ್ಕಾರದ ಹುದ್ದೆಗಳು ಹಣ ಇದ್ದವರಿಗೆ ಎಂಬಂತಾಗಿದೆ. ಸರ್ಕಾರದ ಈ ವ್ಯವಸ್ಥೆಯಿಂದ ನಾವೂ ಮಾನಸಿಕವಾಗಿ ಸತ್ತು ಹೋಗಿದ್ದೇವೆ.

ಇನ್ನು ಮುಂದೆ ಸರ್ಕಾರಿ ಹುದ್ದೆಗಳಿಗೆ ಪರೀಕ್ಷೆ ಬರೆಯುವುದಿಲ್ಲ. ಟೆರರಿಸ್ಟ್ ಗಳು, ನಕ್ಸಲರ ಜೊತೆ ಸೇರಲು ಇಚ್ಛಿಸುತ್ತೇವೆ. ಅವರ ಜೊತೆ ಸೇರಿ, ಹಣ ಪಡೆದು ಬಡ ಕುಟುಂಬಕ್ಕೆ ಸಹಾಯ ಮಾಡಲಿದ್ದೇವೆ. ಪಿಎಸ್‌ಐ ಪರೀಕ್ಷೆಯಲ್ಲಿ ಮೋಸ ಹೋದವರಿಗೆ ನ್ಯಾಯ ಸಿಗಬೇಕು. ಅನ್ಯಾಯ ಮಾಡಿದವರಿಗೆ ಶಿಕ್ಷೆಯಾಗಬೇಕು. 2021ರಲ್ಲಿ ನಡೆದ ಎಪ್ ಡಿಎ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ. ಅದು ಕೂಡ ತನಿಖೆಯಾಗಬೇಕು ಎಂದು ಪ್ರಧಾನಿ ಮೋದಿ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.

Leave a Comment

Your email address will not be published. Required fields are marked *