Ad Widget .

ಬೆಳ್ತಂಗಡಿ: ನನಗೆ ಮುಸ್ಲಿಂ ಮತ ಬೇಡ, ಹಿಂದೂ ಮತಗಳಷ್ಟೇ ಸಾಕು – ಹರೀಶ್ ಪೂಂಜಾ

ಸಮಗ್ರ ನ್ಯೂಸ್: ‘ನನಗೆ ಮುಸ್ಲಿಂ ಮತ ಬೇಡ ಹಿಂದೂಗಳ ಓಟು ಮಾತ್ರವೇ ಸಾಕು’ ಎಂದು ಶಾಸಕ ಹರೀಶ್ ಪೂಂಜಾ ಕಾರ್ಯಕ್ರಮ ಒಂದರಲ್ಲಿ ಹೇಳಿಕೆ ನೀಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

Ad Widget . Ad Widget .

ಸಭಾ ಕಾರ್ಯಕ್ರಮದ ವೇದಿಕೆಯೊಂದರಲ್ಲಿ ಭಾಷಣದ ವೇಳೆ ಮಾತನಾಡಿದ ಶಾಸಕ ಪೂಂಜಾ ಮುಂದಿನ ಚುನಾವಣೆಗೆ ಸಂಘದ ಹಿರಿಯರು ನನ್ನನ್ನು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲು ಸೂಚಿಸಿದರೆ ನಾನು ಧೈರ್ಯದಿಂದ ಹೇಳುತ್ತೇನೆ, ನನಗೆ ಬ್ಯಾರಿ(ಮುಸ್ಲಿಂ)ಗಳ ಓಟು ಬೇಡ ಹಿಂದೂಗಳ ಓಟು ಮಾತ್ರ ಸಾಕು ಯಾಕೆಂದರೆ ಅಯೋಧ್ಯೆಯಲ್ಲಿ ಅಯೋಧ್ಯೆ ರಾಮಮಂದಿರ ನಿರ್ಮಾಣ ಆಗಬೇಕು, ಕಾಶಿಯಲ್ಲಿ ಕಾಶಿ ವಿಶ್ವನಾಥ ದೇವರ ಮಂದಿರ ಆಗಬೇಕು, ದತ್ತಪೀಠದಲ್ಲಿ ದತ್ತಾತ್ರೇಯನ ಮಂದಿರ ನಿರ್ಮಾಣ ಆಗಬೇಕು, ಎಂದು ಹೇಳಿಕೆ ಕೊಟ್ಟಿದ್ದಾರೆ.

Ad Widget . Ad Widget .

ಪ್ರಜಾಪ್ರಭುತ್ವ ದೇಶದಲ್ಲಿ ಎಲ್ಲರಿಂದ ಮತ ಪಡೆದು ಶಾಸಕರಾಗಿ ಆಯ್ಕೆಯಾದ ಜನ ಪ್ರತಿನಿಧಿಯೊಬ್ಬರ ಈ ಹೇಳಿಕೆ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

Leave a Comment

Your email address will not be published. Required fields are marked *