Ad Widget .

ಮೂರು ವರ್ಷದ ಮಕ್ಕಳಿಗೆ ಕೆಎಸ್ಆರ್ ಟಿಸಿಯಲ್ಲಿ ಹಾಫ್ ಟಿಕೆಟ್| ಸ್ಪಷ್ಟನೆ ನೀಡಿದ ಸಾರಿಗೆ ಸಂಸ್ಥೆ

ಸಮಗ್ರ ನ್ಯೂಸ್ : ಕೆಎಸ್​ಆರ್​​ಟಿಸಿ ಬಸ್​​ನಲ್ಲಿ ಮಕ್ಕಳ ಪ್ರಯಾಣ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಕೆಲ ವದಂತಿಗಳು ಹರಿದಾಡುತ್ತಿದ್ದ ಹಿನ್ನೆಲೆ ಈ ಸಂಬಂಧ ಪ್ರಕಟಣೆ ಹೊರಡಿಸಿದೆ.‌

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಮಕ್ಕಳಿಗೆ ಪ್ರಯಾಣ ದರ ವಿಧಿಸುವಾಗ 6 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರಯಾಣ. 6-12 ವರುಷದೊಳಗಿನ‌ ಮಕ್ಕಳಿಗೆ ಆಫ್ ಟಿಕೆಟ್, 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಪುಲ್ ಟಿಕೆಟ್ ದರವನ್ನು ವಿಧಿಸಲಾಗುತ್ತಿದೆ. ಕೆಲ ಸಂದರ್ಭಗಳಲ್ಲಿ ಮಕ್ಕಳು 4-5 ವರುಷ ಆಗಿದ್ದಾಗ, 6 ವರುಷವಾಗಿರುವ ಮಕ್ಕಳಂತೆ, ಅದೇ ರೀತಿ 11-12 ವರುಷದ ಮಕ್ಕಳು 13 ವರುಷದ ಮಕ್ಕಳಂತೆ ಕಾಣುವ ಸಂದರ್ಭಗಳಿವೆ.

Ad Widget . Ad Widget . Ad Widget .

ಈ ವೇಳೆ ಮಕ್ಕಳ ಪಾಲಕರು/ಪೋಷಕರು ಹಾಗೂ ಬಸ್​​ ಚಾಲನಾ ಸಿಬ್ಬಂದಿ ನಡುವೆ ಟಿಕೆಟ್ ಪಡೆಯುವಂತೆ ಗಲಾಟೆಗಳು ವರದಿಯಾಗುತ್ತಿವೆ. ಇದನ್ನ ಮನಗಂಡು ಅಕ್ಟೋಬರ್ 2021ರಲ್ಲಿ ಸ್ಪಷ್ಟ ಸುತ್ತೋಲೆಯನ್ನು ಸಹ ಹೊರಡಿಸಲಾಗಿತ್ತು.‌ ಈ‌ ಬಗ್ಗೆ ಚಾಲನಾ ಸಿಬ್ಬಂದಿಗೂ ತಿಳುವಳಿಕೆ ನೀಡಲಾಗಿದೆ. ಹೀಗಾಗಿ, ಮಕ್ಕಳ ಟಿಕೆಟ್ ವಿತರಣೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಂಸ್ಥೆ ತಿಳಿಸಿದೆ. ‌

ಮಕ್ಕಳ ಎತ್ತರ ಗಮನಿಸಿ ಟಿಕೆಟ್ ನೀಡಲಾಗುತ್ತದೆ ಎಂದು ಕೆಲ ಮಾಧ್ಯಮಗಳಲ್ಲಿ ಹಾಗೂ ಜಾಲತಾಣಗಳಲ್ಲಿ ವರದಿಯಾಗಿತ್ತು.

Leave a Comment

Your email address will not be published. Required fields are marked *