Ad Widget .

ಕಾರು ಅಪಘಾತ: ಕ್ರಿಕೆಟ್ ದಂತಕತೆ ಆಂಡ್ರೂ ಸೈಮಂಡ್ಸ್ ಇನ್ನಿಲ್ಲ

ಸಮಗ್ರ ನ್ಯೂಸ್: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗಷ್ಟೇ ಥಾಯ್ಲೆಂಡ್‌ನಲ್ಲಿ ಹೃದಯಾಘಾತದಿಂದ ಸಾರ್ವಕಾಲಿಕ ಶ್ರೇಷ್ಠ ಲೆಗ್‌ ಸ್ಪಿನ್ನರ್, ಕ್ರಿಕೆಟ್‌ ದಂತಕತೆ ಶೇನ್‌ ವಾರ್ನ್‌ ಹಠಾತ್‌ ನಿಧನರಾಗಿದ್ದರು.

Ad Widget . Ad Widget .

ಇದೀಗ ಆಂಡ್ರ್ಯೂ ಸೈಮಂಡ್ಸ್ ಕೂಡ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದು, ಕಾಂಗರೋ ನಾಡಿಗೆ ಬರಸಿಡಿಲು ಬಡಿದಂತಾಗಿದೆ. ಮಾಜಿ ಲೆಜೆಂಡರಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ಶನಿವಾರ ತಡರಾತ್ರಿ ಸಾವನ್ನಪ್ಪಿದ್ದಾರೆ.

Ad Widget . Ad Widget .

ಕ್ವೀನ್ಸ್‌ಲ್ಯಾಂಡ್‍ನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಸೈಮಂಡ್ಸ್ ಕೊನೆಯುಸಿರೆಳೆದಿದ್ದಾರೆ. ಸೈಮಂಡ್ಸ್ ನಿಧನದ ನಂತರ ಕ್ರಿಕೆಟ್ ಲೋಕ ಹಾಗೂ ಅವರ ಕೋಟ್ಯಂತರ ಅಭಿಮಾನಿಗಳಲ್ಲಿ ಶೋಕದ ಅಲೆ ಎದ್ದಿದೆ.

Leave a Comment

Your email address will not be published. Required fields are marked *