Ad Widget .

ಬೆಂಗಳೂರು ಏರ್‌ಪೋರ್ಟ್‌ ಪ್ರಯಾಣಕ್ಕೆ ಇನ್ಮುಂದೆ ಹೆಲಿಕಾಪ್ಟರ್‌ ಸೇವೆ| ದರ ಎಷ್ಟು? ಪ್ರಯಾಣ ಹೇಗೆ? ಇಲ್ಲಿದೆ ಮಾಹಿತಿ…

ಸಮಗ್ರ ನ್ಯೂಸ್: ಎಲೆಕ್ಟ್ರಾನಿಕ್‌ ಸಿಟಿ, ಹಳೆ ಎಚ್‌ಎಎಲ್‌ ನಿಲ್ದಾಣದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸುಲಭವಾಗಿ ತಲುಪಲು ಬ್ಲೇಡ್‌ ಇಂಡಿಯಾ ಸಂಸ್ಥೆಯು ಹೆಲಿಕಾಪ್ಟರ್‌ ಸೇವೆ ಆರಂಭಿಸಲು ಸಿದ್ಧತೆ ನಡೆಸಿದೆ.

Ad Widget . Ad Widget .

ಅಂದಾಜು 4000 ರೂಪಾಯಿಯಲ್ಲಿ ನಾಗರಿಕರು ಟ್ರಾಫಿಕ್‌ಜಾಮ್‌ ಕಿರಿಕಿರಿ ಇಲ್ಲದೆ, ಕಡಿಮೆ ಅವಧಿಯಲ್ಲಿ ಏರ್‌ಪೋರ್ಟ್‌ ತಲುಪಬಹುದಾಗಿದೆ. ಜುಲೈನಿಂದ ಈ ಸೇವೆ ಆರಂಭವಾಗಲಿದೆ. ತುಂಬಿ ಏವಿಯೇಶನ್‌ ಸಂಸ್ಥೆಯು ಈ ಹಿಂದೆ ಇದೇ ಮಾದರಿಯ ಹೆಲಿಕಾಪ್ಟರ್‌ ಸೇವೆ ಒದಗಿಸುತ್ತಿತ್ತಾದರೂ ಮೂರು ವರ್ಷದ ಹಿಂದೆಯೇ ಸೇವೆ ಸ್ಥಗಿತಗೊಂಡಿದೆ.

Ad Widget . Ad Widget .

ಬ್ಲೇಡ್‌ ಇಂಡಿಯಾ ಸಂಸ್ಥೆಯು ಕೊಡಗಿಗೂ ಹೆಲಿಕಾಪ್ಟರ್‌ ಸೇವೆ ಒದಗಿಸುತ್ತಿದೆ. ”ವಾರದಲ್ಲಿ 6 ಬಾರಿ ಹೆಲಿಕಾಪ್ಟರ್‌ ಕೊಡಗಿಗೆ ತೆರಳುತ್ತಿದೆ. ಬೆಂಗಳೂರಿನಿಂದ ಕೊಡಗಿಗೆ ಟಿಕೆಟ್‌ ದರ 16,000 ರೂ. ಇದೆ. ಮೈಸೂರಿಗೂ ಸೇವೆ ಒದಗಿಸಲು ಸಿದ್ಧತೆ ನಡೆಸಲಾಗಿದೆ. ಮೈಸೂರಿಗೆ ಟಿಕೆಟ್‌ ದರ 12,000 ರೂ. ಇರಲಿದೆ,” ಎಂದು ಕಂಪನಿಯ ವಾಣಿಜ್ಯ ನಿರ್ದೇಶಕ ಪಾಯಲ್‌ ಸತೀಶ್‌ ತಿಳಿಸಿದರು.

”ಏರೋಪ್ಲೇನ್‌ನಲ್ಲಿ ಸೀಟ್‌ ಆಯ್ಕೆ ಮಾಡುವಂತೆ ಹೆಲಿಕಾಪ್ಟರ್‌ನಲ್ಲೂ ಸೀಟ್‌ ಆಯ್ಕೆ ಮಾಡಿಕೊಂಡು ಪ್ರಯಾಣಿಸಬಹುದು. ಸಂಪೂರ್ಣ ಹೆಲಿಕಾಪ್ಟರ್‌ ಕೂಡ ಬುಕ್‌ ಮಾಡಿಕೊಳ್ಳಬಹುದು,” ಎಂದರು.

Leave a Comment

Your email address will not be published. Required fields are marked *