ಯುಎಇ ಎರಡನೆಯ ಅಧ್ಯಕ್ಷ ಶೇಖ್ ಖಲೀಫಾ ಇನ್ನಿಲ್ಲ.

ಸಮಗ್ರ ನ್ಯೂಸ್: ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಯುಎಇ ಅಧ್ಯಕ್ಷ ಶೇಖ್​ ಖಲೀಫಾ ಬಿನ್​ ಜಯಾದ್ ಅಲ್​ ನಹ್ಯಾನ್​(73) ಅವರು ಶುಕ್ರವಾರ ನಿಧನ ಹೊಂದಿದರು.

Ad Widget ... ..

ಅನಾರೋಗ್ಯ ಕಾರಣದಿಂದ ಹಾಸಿಗೆ ಹಿಡಿದಿದ್ದ ಅವರು ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ.
ಅವರ ಪರವಾಗಿ ಅವರ ಪುತ್ರ ಮೊಹಮ್ಮದ್​ ಬಿನ್​ ಜಯಾದ್​ ಅವರು ಆಡಳಿತ ನಡೆಸುತ್ತಿದ್ದರು.

Ad Widget

ಅವರ ನಿಧನಕ್ಕೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದು, ಯುಎಇಯಾದ್ಯಂತ 40 ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿರುವ ಜೊತೆಗೆ, ಮೂರು ದಿನ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ.

2004ರಲ್ಲಿ ಅವರ ತಂದೆ ನಿಧನ ಬಳಿಕ 16ನೇ ರಾಜನಾಗಿ ಅಧಿಕಾರಕ್ಕೇರಿದ ಶೇಖ್​ ಖಲಿಫಾ ಅವರು ಅತಿ ಶ್ರೀಮಂತ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು.

Leave a Comment

Your email address will not be published. Required fields are marked *