Ad Widget .

ರಾಯಚೂರು: ಉಪನ್ಯಾಸಕನ ಬರ್ಬರ ಹತ್ಯೆ

ಸಮಗ್ರ‌ ನ್ಯೂಸ್: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಉಪನ್ಯಾಸಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ಸಮೀಪ ನಡೆದಿದೆ. ಇಲ್ಲಿನ ಪಿಯು ಕಾಲೇಜು ಉಪನ್ಯಾಸಕ ಮಾನಪ್ಪ ಗೋಪಾಳಾಪುರ(59) ನನ್ನು ಹತ್ಯೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

Ad Widget . Ad Widget .

ಉಪನ್ಯಾಸಕ ಮಾನಪ್ಪ ಎಂಬವರು ಪರೀಕ್ಷಾ ಕಾರ್ಯ ಮುಗಿಸಿಕೊಂಡು ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಐಯಾಳಕ್ಕೆ ತೆರಳುತ್ತಿದ್ದ ವೇಳೆಯಲ್ಲಿ ಅಡ್ಡಗಟ್ಟಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *