ಸಮಗ್ರ ನ್ಯೂಸ್: “ಸುಳ್ಯ ನಗರ ಪಂಚಾಯತ್ ಕಚೇರಿ ಮುಂಭಾಗದಲ್ಲಿ ತುಂಬಿಟ್ಟಿರುವ ಕಸದ ರಾಶಿಯನ್ನು ತೆರವು ಮಾಡಲು ನಿಮ್ಮ ಕೈಯಲ್ಲಿ ಆಗದಿದ್ದರೆ ಲಿಖಿತವಾಗಿ ಕೊಡಿ. ಎಷ್ಟೇ ಖರ್ಚಾದರೂ ಎರಡು ದಿನದಲ್ಲಿ ನಾವು ಕ್ಲಿಯರ್ ಮಾಡಿ ಕೊಡುತ್ತೇವೆ” ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಪಾಡ್ ಸುಳ್ಯ ನಗರ ಪಂಚಾಯತ್ ಆಡಳಿತಕ್ಕೆ ಸವಾಲು ಹಾಕಿದ್ದಾರೆ.
ನಗರ ಪಂಚಾಯತ್‌ಗೆ ಭೇಟಿ ನೀಡಿ ಕಸದ ರಾಶಿಯನ್ನು ವೀಕ್ಷಿಸಿದ ಅವರು ಬಳಿಕ ಮಾತನಾಡಿದರು. ಒಂದು ತಿಂಗಳಲ್ಲಿ ಕಚೇರಿ ಆವರಣದಿಂದ ಸಂಪೂರ್ಣ ಕಸವನ್ನು ತೆರವು ಮಾಡದಿದ್ದರೆ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದ
ಅವರು ರಾಜ್ಯ ಮತ್ತು ರಾಷ್ಟ್ರದ ನಾಯಕರು,ರಾಷ್ಟ್ರೀಯ ಮಾಧ್ಯಮಗಳನ್ನು ಕರೆಸಿ ಇದನ್ನು ರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸಲಾಗುವುದು ಎಂದರು.
40 % ಕಮೀಷನ್‌ಗೆ ಕಾಯುತ್ತಾ ಇದ್ದೀರಾ..? ನಲಪಾಡ್ ಪ್ರಶ್ನೆ
ನಗರ ಪಂಚಾಯತ್ ಕಚೇರಿ ಮುಂಭಾದ ಕಸದ ರಾಶಿಯನ್ನು ತುಂಬಿದರೆ ಕಚೇರಿ ಸಿಬ್ಬಂದಿಗಳ ಆರೋಗ್ಯದ ಸ್ಥಿತಿ ಏನಾಗಬಹುದು. ಕಚೇರಿಯ ಸಿಬ್ಬಂದಿಗಳ ಆರೋಗ್ಯ ನೋಡಿಕೊಳ್ಳಲು ಆಗದ ನಗರಾಡಳಿತಕ್ಕೆ ನಗರದ ಜನರ ಆರೋಗ್ಯ ಕಾಪಾಡಲು ಸಾಧ್ಯವೇ?, ಕಸ ಸಾಗಾಟ ಮಾಡಲು ನಗರ ಪಂಚಾಯತ್ ಶೆ.40 ಕಮೀಷನ್‌ಗಾಗಿ ಕಾಯುತ್ತಿದ್ದಾರಾ? ಎಂದು ನಲಪಾಡ್ ಪ್ರಶ್ನಿಸಿದರು.
ಒಂದು ತಿಂಗಳು ಸಮಯ ನೀಡುತ್ತೇವೆ. ಕಸ ಸಾಗಾಟ ಮಾಡದಿದ್ದರೆ ಯುವ ಕಾಂಗ್ರೆಸ್ ಈ ಕಸವನ್ನು ಕ್ಲಿಯರ್ ಮಾಡುತ್ತೇವೆ. ನಮಗೆ ಜನರ ಆರೋಗ್ಯ ಮುಖ್ಯ. ಬಿಜೆಪಿಯವರಂತೆ ನಮಗೆ ನಾಟಕ ಮಾಡಲು ಗೊತ್ತಿಲ್ಲ, ಎಂದು ನಲಪಾಡ್ ಕುಟುಕಿದರು.