ಭಾರೀ ಕುಸಿತ ಕಂಡ ಷೇರು ಮಾರುಕಟ್ಟೆ| ಪಾತಾಳಕ್ಕೆ ಕುಸಿದ ರೂಪಾಯಿ ಮೌಲ್ಯ|

ಸಮಗ್ರ ನ್ಯೂಸ್: ಒಂದೆಡೆ ಭಾರತೀಯ ರೂಪಾಯಿ ಮೌಲ್ಯ ಯುಎಸ್ ಡಾಲರ್ ಎದುರು ಗುರುವಾರ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡರೆ, ಇನ್ನೊಂದೆಡೆ ಭಾರತೀಯ ಷೇರು ಮಾರುಕಟ್ಟೆಗಳ ಸಂವೇದಿ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಶೇ.2ಕ್ಕಿಂತಲೂ ಹೆಚ್ಚು ಇಳಿಕೆ ದಾಖಲಿಸಿವೆ.

Ad Widget ... ..

ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ 50 ಇಂಡೆಕ್ಸ್ ಶೇ.2.22 ಅಥವಾ 359.10 ಅಂಶ ಕಡಿಮೆಯಾಗಿ 15,808 ಅಂಶಗಳಲ್ಲಿ ವಹಿವಾಟು ಮುಗಿಸಿದೆ. ಇನ್ನು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಶೇ.2.14ರಷ್ಟು ಅಥವಾ 1,158.08ರಿಂದ 52,930.31 ಮಟ್ಟಕ್ಕೆ ಇಳಿಕೆಯಾಗಿದೆ. ಈ ಎರಡೂ ಸೂಚ್ಯಂಕಗಳು ಸತತ 5ನೇ ಬಾರಿ ನಷ್ಟ ದಾಖಲಿಸಿದ್ದು, ಎರಡು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿವೆ.

Ad Widget

ಭಾರತೀಯ ರೂಪಾಯಿ ಮೌಲ್ಯ ಈ ವಾರದಲ್ಲಿ ಎರಡನೇ ಬಾರಿ ದಾಖಲೆಯ ಕುಸಿತ ಕಂಡಿದ್ದು, ಅಮೆರಿಕದ ಡಾಲರ್ ಎದುರು 77.63ರ ಕನಿಷ್ಠ ಮಟ್ಟಕ್ಕೆ ತಲುಪಿದೆ. ಮೇ.9ರಂದು ರೂಪಾಯಿ ಮೌಲ್ಯವು 51 ಪೈಸೆಗಳಷ್ಟು ಕುಸಿದು ಯುಎಸ್ ಡಾಲರ್ ಎದುರು 77.49ರ ದಾಖಲೆಯ ಕನಿಷ್ಠ ಮಟ್ಟಕ್ಕೆ ತಲುಪಿತ್ತು.

Leave a Comment

Your email address will not be published. Required fields are marked *