ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಸುಳ್ಯ ತಾಲೂಕು ಮರ್ಕಂಜ ಗ್ರಾಮದ ಅಳವುಪಾರೆ ಎಂಬಲ್ಲಿ ಡೆಲ್ಮಾ ಎಂಟರ್ ಪ್ರೈಸಸ್ ಎಂಬ ಹೆಸರಿನಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಇದಕ್ಕೆ ಸ್ಥಳೀಯ ಪಂಚಾಯತ್ ನಿಂದ ಪರವಾನಿಗೆ ಇಲ್ಲದಿದ್ದರೂ ರಾಜಾರೋಷವಾಗಿ ನಡೆಯುತ್ತಿರುವ ಗಣಿಗಾರಿಕೆ ಬಗ್ಗೆ ಅಧಿಕಾರಿಗಳು ಪ್ರಶ್ನೆ ಮಾಡುತ್ತಿಲ್ಲ. ಇದನ್ನು ತಕ್ಷಣ ನಿಲ್ಲಿಸದಿದ್ದರೆ ಸುಳ್ಯ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಅಂಬೇಡ್ಕರ್ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ ಎಚ್ಚರಿಸಿದ್ದಾರೆ.
ಗಣಿಗಾರಿಕೆಯ ಸ್ಫೋಟಕಗಳನ್ನು ಬಳಸಿ ಬಂಡೆಯನ್ನು ಹೊಡೆಯಲಾಗುತ್ತದೆ. ಇದರಿಂದ ಅಕ್ಕಪಕ್ಕದಲ್ಲಿ ಇರುವ ದಲಿತರ ಮನೆಗಳು ಬಿರುಕು ಬಿಟ್ಟಿದೆ ಮತ್ತು ವೇದಾವತಿ ಕುದನೆ ಕೊಡಿ ಎಂಬವರ ಮನೆ ಸಂಪೂರ್ಣ ಬಿರುಕುಬಿಟ್ಟಿದೆ ಮತ್ತು ಅವರ ಗಂಡ ಅನಾರೋಗ್ಯದಲ್ಲಿ ಇದ್ದಾರೆ ಮತ್ತು ಪಕ್ಕದಲ್ಲಿ ಶಾಲೆ ದೇವಸ್ಥಾನ ದಲಿತ ಕಾಲೋನಿ ನೀರಿನ ಟ್ಯಾಂಕಿ ಇದೆಲ್ಲದಕ್ಕೂ ಅಣಿಯಾಗುತ್ತದೆ ದಿನದಲ್ಲಿ ಮೂರು ಬಾರಿ ಸ್ಪೋಟ ಗೊಳಿಸುತ್ತಾರೆ. ಇದರಿಂದ ಭೂಮಿ ಕಂಪಿಸುತ್ತಿದ್ದು, ಭೂಕುಸಿತ ಆಗುವ ಸಾಧ್ಯತೆ ಇದೆ. ಈ ಮೊದಲು ಹರಿಹರದಲ್ಲಿ ಭೂಕುಸಿತ ಉಂಟಾಗಿದೆ. ಅದೇ ರೀತಿ ಮರ್ಕಂಜದಲ್ಲಿ ಕೂಡ ಭೂಕುಸಿತ ಆಗುವ ಸಾಧ್ಯತೆ ಇದೆ ಮತ್ತು ಈ ಸ್ಪೋಟದಿಂದ ಕಾಡಿನಲ್ಲಿರುವ ಪ್ರಾಣಿಗಳಿಗೆ ಹಾನಿ ಉಂಟಾಗುತ್ತದೆ ಸ್ಪೋಟದಿಂದ ರೋಗಿಗಳಿಗೆ, ಶಾಲಾ ಮಕ್ಕಳಿಗೆ ಮತ್ತು ವೃದ್ಧರಿಗೆ ತೊಂದರೆಯಾಗುತ್ತಿದೆ.
ಆದ್ದರಿಂದ ಮರ್ಕಂಜದ ಅಳವುಪಾರೆಯಲ್ಲಿ ನಡೆಯುತ್ತಿರುವ ಗಣಿಗಾರಿಕೆ ಯನ್ನು ತಕ್ಷಣ ನಿಲ್ಲಿಸಬೇಕು ಎಂದು ಲೋಕಾಯುಕ್ತ ಇಲಾಖೆಗೆ .ಮಾನ್ಯ ಜಿಲ್ಲಾಧಿಕಾರಿ ಯವರಿಗೆ. ಮಾನ್ಯ ಸಹಾಯಕ ಆಯುಕ್ತರಿಗೆ. ಮಾನ್ಯ ತಹಸೀಲ್ದಾರರಿಗೆ. ಮರ್ಕಂಜ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವರಿಗೆ. ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಮನವಿ ಮಾಡಿದ್ದಾರೆ.
ಮನವಿಗೆ ಸ್ಪಂದಿಸಿ ತಕ್ಷಣ ಗಣಿಗಾರಿಕೆಯನ್ನು ನಿಲ್ಲಿಸಬೇಕು, ಇಲ್ಲವಾದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಸುಳ್ಯ ತಾಲೂಕು ಕಚೇರಿಯ ಮುಂಭಾಗದಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಜಿಲ್ಲಾಧ್ಯಕ್ಷರು ಪಿ.ಸುಂದರ ಪಾಟಾಜೆಯವರು ಎಚ್ಚರಿಕೆಯನ್ನು ನೀಡಿದ್ದಾರೆ