Ad Widget .

ಸುಳ್ಯ: ತಾರಕಕ್ಕೇರಿದ ನ.ಪಂ‌ ಕಸ ಜಗಳ| ನಟ ಅನಿರುದ್ಧ್ ಮತ್ತು ನ.ಪಂ ಅಧ್ಯಕ್ಷ‌ ವಿನಯ್ ಕುಮಾರ್ ನಡುವೆ ಕಮೆಂಟ್ಸ್ ವಾರ್|

ಸಮಗ್ರ ನ್ಯೂಸ್: ಕಳೆದ ಹಲವಾರು ವರ್ಷಗಳಿಂದ ಸುಳ್ಯ ನಗರ ಪಂಚಾಯತ್‌ ವ್ಯಾಪ್ತಿಯಲ್ಲಿ ಕಸ ವಿಲೇವಾರಿಯ ಸಮಸ್ಯೆಯಿದ್ದು ಅದಕ್ಕೆ ಮುಕ್ತಿ ಸಿಗುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಇದೀಗ ಈ ಸಮಸ್ಯೆಯ ಬಗ್ಗೆ ಕನ್ನಡದ ಖ್ಯಾತ ನಟ ಅನಿರುದ್ದ್‌ ಧ್ವನಿಯೆತ್ತಿದ್ದು ಸುದ್ದಿಯಾಗುತ್ತಿದೆ. ಸ್ವಚ್ಛ ಭಾರತ್ ಅಭಿಯಾನಕ್ಕೆ ಪೋಸ್ಟ್ ಹಂಚಿಕೊಂಡಿರುವ ನಟ ಅನಿರುದ್ಧ್ ಗೆ ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಉದ್ದಟತನದ ಉತ್ತರ ಕೊಟ್ಟಿದ್ದಾರೆ. ಅದಕ್ಕೆ ನಟ ಅನಿರುದ್ಧ್ ಅಧ್ಯಕ್ಷರಿಗೆ ಮುಟ್ಟಿ ನೋಡಿಕೊಳ್ಳುವಂತ ಉತ್ತರ ಕೊಟ್ಟಿದ್ದು , ಇದೀಗ ನಟ ಕೊಟ್ಟ ಉತ್ತರ ಬಾರಿ ವೈರಲ್ ಆಗ್ತಿದೆ.

Ad Widget . Ad Widget .

“ಅನಿರುದ್ದನಿಗೆ 10 ಲಾರಿ ಕಳಿಸಿಕೊಡ್ಲಿಕ್ಕೆ ಹೇಳಿ. ಲೋಡಿಂಗ್ ನಮ್ಮ ಕಾರ್ಮಿಕರಿಂದ ಮಾಡಿಸ್ತೇವೆ. ಫೇಸ್ಬುಕ್ ವಿಡಿಯೋದಿಂದ ಸಮಸ್ಯೆ ಬಗೆಹರಿಯಲ್ಲ” ಎಂದು ನಗರ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಕಮೆಂಟ್ ಹಾಕಿದ್ದಕ್ಕೆ ಅನಿರುದ್ದ್ “ಯಾವಾಗ ಕಳಿಸಿಕೊಡಬೇಕು ದಯಮಾಡಿ ತಿಳಿಸಿ, ಕಳಿಸಿಕೊಡುವೆ” ಎಂದಿದ್ದಾರೆ.

Ad Widget . Ad Widget .

ಮತ್ತೊಂದು ಪೋಸ್ಟ್ ನಲ್ಲಿ ಅಧ್ಯಕ್ಷರು ಕಮೆಂಟ್ ಹಾಕಿದ್ದು, “ಫೇಸ್ಟುಕ್ ನಲ್ಲಿ ಮನವಿ ಮಾಡಿರೋದ್ರಿಂದ ಸಮಸ್ಯೆಗಳು ಬಗೆಹರಿಯೋದಾದ್ರೆ ದೇಶದಲ್ಲಿ ಯಾವ ಸಮಸ್ಯೆಗಳು ಕೂಡ ಇರುತ್ತಿರಲಿಲ್ಲ. ಯಾರೋ ಕೆಲಸ ಇಲ್ಲದವರು ಅಲ್ಲಿಯ ಜನಪ್ರತಿನಿಧಿಗಳ ಪ್ರಾಮಾಣಿಕ ಪ್ರಯತ್ನವನ್ನು ಅವಲೋಕಿಸದೆ ಪ್ರಚಾರಕ್ಕೋಸ್ಕರ ಮೆಸೇಜ್ ಮಾಡಿದರೆ ಯೋಚಿಸದೆ ಶೇರ್ ಮಾಡೋದಲ್ಲ. ಕಾನೂನು ನಿಯಮಗಳ ಎಲ್ಲಾ ಅಗತ್ಯತೆಗಳನ್ನು ಪೂರೈಸಿ ಕಸ ಸಾಗಾಟಕ್ಕೆ ವ್ಯವಸ್ಥೆ ಆಗುತ್ತಿದೆ. ಊಟ ರೆಡಿ ಆದ್ಮಲೆ ಬಡಿಸೋಕೆ ಬಂದಂತಹವರ ಕತೆ ಆಯ್ತು ಇದು. ಕಸ ವಿಲೇವಾರಿಗೆ ಅದರದ್ದೇ ಆದ ಕಾನೂನಾತ್ಮಕ ತೊಡಕುಗಳಿವೆ. ಅದನ್ನೆಲ್ಲಾ ನಿವಾರಿಸಿ ಟೆಂಡರ್ ಪ್ರಕ್ರಿಯೆ ಚಾಲು ಆಗಿದೆ. ಕಸ ಹೋಗಿಯೇ ಹೋಗುತ್ತದೆ. ಯಾರ ಫೇಸ್ಟುಕ್ ಮನವಿಯ ಕಾರಣದಿಂದಲೂ ಅಲ್ಲ” ಎಂದು ಕಮೆಂಟ್ ಹಾಕಿದ್ದಕ್ಕೆ ಅನಿರುದ್ಧ್, ವಿಡಿಯೋದಲ್ಲಿ ಪ್ರತಿ ವಿಷಯಕ್ಕೂ ಪ್ರತ್ಯೇಕ ಪ್ರತ್ಯೇಕವಾಗಿ ಉತ್ತರ ಕೊಟ್ಟಿದ್ದಾರೆ.

ವಿಡಿಯೋಗಳಿಗೆ ಕೆಳಗಿನ‌ ಲಿಂಕ್ ತೆರೆಯಿರಿ

https://m.facebook.com/story.php?story_fbid=546785576808381&id=100044308305308

ಸುಳ್ಯ ನ.ಪಂ ಆವರಣದಲ್ಲಿ ಕಸ ರಾಶಿ ಬಿದ್ದಿದ್ದು ಕೊಳೆತು ನಾರುತ್ತಿದೆ. ನ.ಪಂ ಮುಂಭಾಗ ಲೋಡುಗಟ್ಟಲೆ ಕಸ ಬಿದ್ದಿರುವುದನ್ನು ಸಮರ್ಥಿಸಿಕೊಳ್ಳುವ ನ.ಪಂ ಆಡಳಿತದ ವಿರುದ್ದ ಜನ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತ ಮೊದಲ ವಿಡಿಯೋವನ್ನು ವಾಟ್ಸಪ್ ಗ್ರೂಪ್ ಗಳಲ್ಲಿ ಹರಿಬಿಟ್ಟಿದ್ದ ಸುಪ್ರೀತ್ ಮೋಂಟಡ್ಕ ರವರನ್ನು ಬಿಜೆಪಿ ಮೀಡಿಯಾ ಗ್ರೂಪ್ ನಿಂದ ತೆರವುಗೊಳಿಸಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಮತ್ತೊಂದೆಡೆ ಇರುವ ಸಮಸ್ಯೆಯನ್ನು ಸರಿಪಡಿಸಿಕೊಳ್ಳದೇ ಇತರರ ಬಾಯಿಗೆ ಆಹಾರವಾಗುತ್ತಿರುವ ನ.ಪಂ ಅಧ್ಯಕ್ಷರ ಹೇಳಿಕೆಗಳಿಗೆ ಭರಪೂರ ಕಮೆಂಟ್ಸ್ ಗಳೂ ಬರುತ್ತಿವೆ. ಸಮಸ್ಯೆ ಇದೆ ಎಂಬುದು ಗೊತ್ತಿದ್ದರೂ ಅದನ್ನು ಸಮರ್ಥನೆ ಮಾಡುವ ಅಧ್ಯಕ್ಷರ ಹೇಳಿಕೆಗಳು ಇರಲಾರದೆ ಇರುವೆ ಬಿಟ್ಕೊಂಡಂತೆ ಆಗಿದೆ.

Leave a Comment

Your email address will not be published. Required fields are marked *