ಅಸಾನಿ ಹೊತ್ತು ತಂದ ಚಿನ್ನದ ರಥ| ಆಂದ್ರದ ಕಡಲ ಕಿನಾರೆಯಲ್ಲಿ‌ ಅಚ್ಚರಿ

ಸಮಗ್ರ ನ್ಯೂಸ್: ಬಂಗಾಳಕೊಲ್ಲಿಯಲ್ಲಿ ಅಸಾನಿ ಚಂಡಮಾರುತ ಅವಾಂತರ ಸೃಷ್ಟಿಸುತ್ತಿದೆ. ಕರಾವಳಿ ಪ್ರದೇಶದಲ್ಲಿ ಸಮುದ್ರದ ಅಲೆಗಳು ರಕ್ಕಸ ರೂಪದಲ್ಲಿ ದಡಕ್ಕೆ ಅಪ್ಪಳಿಸುತ್ತಿವೆ. ಚಂಡಮಾರುತದ ರಭಸಕ್ಕೆ ಸಂತಬೊಮ್ಮಲಿ ಸುನ್ನಪಲ್ಲಿ ಬಂದರಿಗೆ ರಥವೊಂದು ತೇಲಿಬಂದಿದೆ.

Ad Widget ... ..

ಚಿನ್ನದ ಬಣ್ಣದಿಂದ ಕೂಡಿದ ರಥ ಹೊಂಬಣ್ಣದಿಂದ ಮಿನುಗುತ್ತಿದೆ. ತೇಲಿಬಂದ ರಥ ನೋಡಲು ಸ್ಥಳೀಯರು ಸಾಲು ಸಾಲಾಗಿ ಸಮುದ್ರ ತೀರಕ್ಕೆ ಬಂದಿದ್ದಾರೆ.

Ad Widget

ಕೊಚ್ಚಿ ಬಂದ ರಥದ ಮೇಲೆ 16-1-2022 ಎಂದು ಅನ್ಯ ಭಾಷೆಯಲ್ಲಿ ಬರೆಯಲಾಗಿದೆ. ಮಲೇಷ್ಯಾ, ಥಾಯ್ಲೆಂಡ್ ಅಥವಾ ಜಪಾನ್ ದೇಶಕ್ಕೆ ಸೇರಿದ್ದಿರಬಹುದು ಎಂದು ಸ್ಥಳೀಯ ಮೀನುಗಾರರು ಹೇಳಿದ್ದಾರೆ. ದಡಕ್ಕೆ ಬಂದ ಚಿನ್ನದ ರಥವನ್ನು ಮೆರೈನ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಥ ಎಲ್ಲಿಂದ ಬಂತು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

Leave a Comment

Your email address will not be published. Required fields are marked *