Ad Widget .

ಸುಳ್ಯದ ಕಸ ಸಮಸ್ಯೆ‌ ಕುರಿತು ನಟ ಅನಿರುದ್ಧ್ ಕಳಕಳಿ ಜಾಲತಾಣಗಳಲ್ಲಿ ವೈರಲ್| ಆದರೆ…?

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಸುಳ್ಯ ನ.ಪಂ ವ್ಯಾಪ್ತಿಯ ಕಸ ನ.ಪಂ ಆವರಣದಲ್ಲಿ ಬೃಹದಾಕಾರವಾಗಿ ಬೆಳೆಯುತ್ತಾ ಬಂದಿದೆ. ಅದೇಕೋ ಈ ಕಸದ ರಾಶಿ ಮೇಲೆ ನ.ಪಂ ಆಡಳಿತ ಹಾಗೂ ಅಧಿಕಾರಿ ವರ್ಗಕ್ಕೆ ಬಹಳ ಪ್ರೀತಿ! ಆದ್ದರಿಂದ ಇದುವರೆಗೂ ಈ ಕಸದ ವಾಸನೆಯನ್ನೇ ಸವಿಯುತ್ತಾ ನ.ಪಂ ಅಧಿಕಾರಿಗಳು, ಆಡಳಿತ ವರ್ಗ ದಿನಗಳೆಯುತ್ತಿದೆ.

Ad Widget . Ad Widget .

ಇದೀದ ಈ ಕಸದ ಸಮಸ್ಯೆಯ ಕುರಿತು ಬಿಜೆಪಿ ಸಾಮಾಜಿಕ ಜಾಲತಾಣದ ಪ್ರಮುಖರಾದ ಸುಪ್ರೀತ್ ಮೋಂಟಡ್ಕರು ಫೋಟೊಗಳನ್ನು ಕ್ಲಿಕ್ಕಿಸಿ ಚಿತ್ರ ನಟ ಅನಿರುದ್ಧ್ ಗೆ ಕಳುಹಿಸಿದ್ದು, . ಆ ಚಿತ್ರಗಳನ್ನು ನೋಡಿದ ಅವರು, ಸ್ವತಃ ತಾವೇ ವಿಡಿಯೋ ಮಾಡಿಕೊಂಡು, ಕಸದ ತೆರವಿಗೆ ಮನವಿ ಮಾಡಿದ್ದರು.

Ad Widget . Ad Widget .

ಈ ವೀಡಿಯೋ ಕ್ಲಿಪ್ ಅನ್ನು ಸುಪ್ರೀತ್ ಮೋಂಟಡ್ಕರು ಬಿಜೆಪಿಯ ಅಧಿಕೃತ ವಾಟ್ಸಪ್ ಗ್ರೂಪ್ ನಲ್ಲಿ ಹಾಕಿದ್ದರು. ಬಿಜೆಪಿ ಸುಳ್ಯ ಮೀಡಿಯಾ’ ವಾಟ್ಸಾಪ್ ಗ್ರೂಪ್‌ಗೆ ಸುಪ್ರೀತ್ ಈ ವಿಡಿಯೋ ಹಾಕಿದ್ದು, ವೀಡಿಯೋ ಬಂದ ಕೆಲವೇ ನಿಮಿಷದಲ್ಲಿ ಆ ಗ್ರೂಪ್‌ನ ಆಡ್ಮಿನ್ ಆಗಿರುವ ಬಿಜೆಪಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲರು ಸುಪ್ರೀತ್‌ರನ್ನು ಗ್ರೂಪ್ ನಿಂದ ತೆರವು ಮಾಡಿದ್ದಾರೆ.

https://m.facebook.com/story.php?story_fbid=546218636865075&id=100044308305308

ಸುಪ್ರೀತ್ ರವರು ಸಮಾಜದ ಜಾಗೃತಿಗಾಗಿ ಮಾಡಿದ ಈ ಕೆಲಸದಿಂದ ಕೆಲವರಿಗೆ ಸಹಿಸಿಕೊಳ್ಳಲಾಗಿಲ್ಲ ಎಂದು ಮೇಲ್ನೋಟಕ್ಕೆ ಕಂಡುಬಂದರೂ, ಪಕ್ಷದಲ್ಲಿ ಒಂದು ಶಿಸ್ತು ಇದೆ. ಅದಕ್ಕೆ ವಿರುದ್ಧವಾಗಿ ಯಾರೂ ನಡೆದುಕೊಳ್ಳಬಾರದು. ಸುಳ್ಯದ ಕಸ ತೆರವಿಗೆ ಪ್ರಯತ್ನಗಳು ನಡೆಯುತ್ತಿದೆ ಎಂದು ಗ್ರೂಪ್ ಅಡ್ಮಿನ್ ಸುಭೋದ್ ಶೆಟ್ಟಿ ಹೇಳಿದ್ದಾರೆ.

Leave a Comment

Your email address will not be published. Required fields are marked *