Ad Widget .

70ನೇ ವಯಸ್ಸಿಗೆ ತಂದೆಯಾಗ್ತಿದಾರೆ ರಷ್ಯಾ ಅಧ್ಯಕ್ಷ| ಯುದ್ಧ ಸಮಯದಲ್ಲಿ ಗುಡ್ ನ್ಯೂಸ್ ನೀಡಿದ ಪ್ರೇಯಸಿ ಜೊತೆ ಗರಂ ಆದ ಪುಟಿನ್!

ಸಮಗ್ರ ನ್ಯೂಸ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್ ಅವರ​ ರಾಜಕೀಯ ಹಾಗೂ ವೈಯಕ್ತಿಕ ಜೀವನ ಸದಾ ಸುದ್ದಿಯಲ್ಲಿ ಇರುತ್ತದೆ. ಅವರ ಜೀವನದ ಕೆಲವು ರಹಸ್ಯಗಳು ಕುತೂಹಲದಿಂದ ಕೂಡಿರುವ ಪುಟಿನ್ ಜೀವನದ ಮತ್ತೊಂದು ಅಚ್ಚರಿ ಸುದ್ದಿ ಹೊರಬಿದ್ದಿದೆ.

Ad Widget . Ad Widget .

ಇತ್ತೀಚೆಗೆ ಕಣ್ಮರೆಯಾಗಿದ್ದ ಪುಟಿನ್ ಪ್ರೇಯಸಿ ಜಿಮ್ನಾಸ್ಟಿಕ್​​ ಅಲಿನಾ ಕಬೀವಾ ಇದೀಗ ಗರ್ಭಿಣಿಯಾಗಿರುವ ಮೂಲಕ ಮತ್ತೆ ಕಾಣಿಸಿಕೊಂಡಿದ್ದಾರೆ. 69 ವರ್ಷದ ಪುಟಿನ್​ ಈ ವರ್ಷ ಅಕ್ಟೋಬರ್​ನಲ್ಲಿ 70ನೇ ಜನ್ಮದಿನವನ್ನು ಆಚರಿಸಲಿದ್ದಾರೆ. ಈ ನಡುವೆ ಅವರ ಪ್ರೇಯಸಿ ಮೂರನೇ ಮಗುವಿನ ತಾಯಿಯಾಗುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

Ad Widget . Ad Widget .

ಈ ಸುದ್ದಿ ಈಗ ಸ್ವತಃ ತಂದೆಯಾಗುತ್ತಿರುವ ಪುಟಿನ್​ಗೆ ಕೋಪ ತರಿಸಿದೆಯಂತೆ! ಇದಕ್ಕೆ ಕಾರಣವೂ ಇದೆ. ಇತ್ತ ಯೂಕ್ರೇನ್​ ನಡುವಿನ ಯುದ್ಧ ಮುಂದುವರಿದಿದ್ದು, ಸದ್ಯ ಯುದ್ಧ ತಂತ್ರಗಾರಿಕೆಯಲ್ಲೇ ಹೆಚ್ಚು ಬಿಜಿಯಾಗಿರುವಾಗಲೇ ಪ್ರೇಯಸಿ ನೀಡಿರುವ ಸುದ್ದಿ ಕೋಪಕ್ಕೆ ಕಾರಣವಾಗಿದೆ. ಈ ಸಮಯದಲ್ಲಿ ನಾನು ನಿರೀಕ್ಷೆ ಮಾಡಿರಲಿಲ್ಲ ಎಂದು ಪುಟಿನ್ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಿಮ್ನಾಸ್ಟಿಕ್​ ಜತೆಗಿನ ಪುಟಿನ್​ ಪ್ರೀತಿ ಎಂದೋ ಜಗಜ್ಜಾಹೀರಾಗಿದೆ. ಇಬ್ಬರಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ. ಪುಟಿನ್​ ಮಾತ್ರ ಈವರೆಗೂ ಈ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ಹೇಳಿಲ್ಲ. ಆದರೂ ಇಬ್ಬರ ಸಂಬಂಧದ ಬಗ್ಗೆ ಆಗ್ಗಾಗ್ಗೆ ಚರ್ಚೆಗೆ ಬರುವುದು ಸಾಮಾನ್ಯವಾಗಿದೆ.

Leave a Comment

Your email address will not be published. Required fields are marked *