Ad Widget .

ಮಂಗಳೂರು: ನಗರ ಪ್ರದೇಶದಲ್ಲಿ ಹೆಚ್ಚುತ್ತಿದ್ಯಾ ಕಾನ್ಸರ್!?

ಸಮಗ್ರ ನ್ಯೂಸ್: ನಗರಗಳಲ್ಲಿ ಹೆಚ್ಚುತ್ತಿರುವ ವಿಷಕಾರಿ ತ್ಯಾಜ್ಯವಸ್ತುಗಳ ಜೊತೆಗೆ ಕಾರ್ಖಾನೆಗಳಿಂದ ಹೊರಬರುವ ಹೊಗೆಗಳು ಇಡೀ ಪರಿಸರವನ್ನೇ ಆವರಿಸಿಕೊಂಡಿದ್ದು, ನಗರ ಪ್ರದೇಶದ ಸುತ್ತ-ಮುತ್ತಲಿನ ಜನರಲ್ಲಿ ಮಾರಕ ಕ್ಯಾನ್ಸರ್ ರೋಗ ಹೆಚ್ಚಾಗಿರೋದು ಇದೀಗ ಬೆಳಕಿಗೆ ಬಂದಿದೆ.

Ad Widget . Ad Widget .

ವಾಯುಮಾಲಿನ್ಯ, ಜಲಮಾಲಿನ್ಯ, ಅಂತರ್ಜಲ ಮಾಲಿನ್ಯದ ಪರಿಣಾಮ ನಗರದ ಎಂಆರ್‍ಪಿಎಲ್ ಸುತ್ತಮುತ್ತಲಿನ ಕಾಟಿಪಳ್ಳ, ಸುರತ್ಕಲ್, ಕುಳಾಯಿ ಪ್ರದೇಶಗಳಲ್ಲಿ ಕ್ಯಾನ್ಸರ್ ಪ್ರಮಾಣ ಜಾಸ್ತಿಯಾಗುತ್ತಿದೆ ಎಂದು ಸ್ವತಃ ರಾಜ್ಯ ವಿಧಾನ ಪರಿಷತ್ತಿನ ಭರವಸೆಗಳ ಸಮಿತಿ ಕಳವಳ ವ್ಯಕ್ತಪಡಿಸಿದೆ.

Ad Widget . Ad Widget .

ಪ್ರಾಥಮಿಕ ಆರೋಗ್ಯ ಕೇಂದ್ರ ನೀಡಿರುವ ವರದಿಯ ಪ್ರಕಾರ ಈ ಪ್ರದೇಶಗಳಲ್ಲಿ ಹೆಚ್ಚಿನ ಜನರಿಗೆ ಶ್ವಾಸಕೋಶದ ತೊಂದರೆಗಳು ಅನೇಕರಿಗೆ ಚರ್ಮದ ಕಾಯಿಲೆ, ಮಕ್ಕಳಲ್ಲಿ ಡೈರಿಯಾ ಇನ್ನಿತರ ಕಾಯಿಲೆಗಳು ಕಂಡು ಬರುತ್ತಿದೆ. ಅದಲ್ಲದೆ ನದಿಯ ಮೀನುಗಳನ್ನು ಸೇವನೆ ಮಾಡುವ ಮನುಷ್ಯರ ಆರೋಗ್ಯದ ಮೇಲೆ ಭೀಕರ ಪರಿಣಾಮ ಬೀರುತ್ತಿದೆ. ಜೊತೆಗೆ ಈ ಕಲುಷಿತ ನೀರು ಗುರುಪುರ ನದಿಯನ್ನು ಸೇರುತ್ತಿದ್ದು, ಅಲ್ಲಿಂದ ಕಡಲ ಒಡಲನ್ನು ಈ ತ್ಯಾಜ್ಯ ಸೇರುತ್ತಿದೆ. ಇದಕ್ಕೆ ಕೈಗಾರಿಕಾ ವಲಯದವರು ಇಟಿಪಿ ಪ್ಲ್ಯಾನ್ ಮೂಲಕ ಪ್ರಪೋಸಲ್ ಮಾಡಿದ್ದಾರೆ. ಈ ಮೂಲಕ ಕುಡುಂಬೂರು ನದಿಯ ಶುಚಿತ್ವಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.
ಘಟಕದಿಂದ ಹೊರ ಬರುವ ಧೂಳು ಮಿಶ್ರಿತ ಹೊಗೆಯಿಂದಾಗಿ ಶ್ವಾಸಕೋಶದ ಸಮಸ್ಯೆ ಉಸಿರಾಟದ ಸಮಸ್ಯೆ ಆಗುತ್ತಿರುವ ಬಗ್ಗೆಯೂ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಕೈಗಾರಿಕೆಗಳ ತ್ಯಾಜ್ಯ ನೀರು ಕಡಲು ಸೇರುತ್ತಿರೋದರಿಂದ ನೀರು ಮಲಿನವಾಗಿ ಜೀವಜಲಕ್ಕೂ ಕುತ್ತಾಗಿರುವ ಬಗ್ಗೆಯೂ ಜನ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.

Leave a Comment

Your email address will not be published. Required fields are marked *