Ad Widget .

“ಲಂಕಾ ದಹನ”: ಆರ್ಥಿಕ ದಳ್ಳುರಿಗೆ ಹೊತ್ತಿ ಉರಿಯುತ್ತಿರುವ ಸಿಂಹಳ| ಜನಪ್ರತಿನಿಧಿಗಳೇ ಜನರ ಟಾರ್ಗೆಟ್

ಸಮಗ್ರ ನ್ಯೂಸ್: ಆರ್ಥಿಕ ದುಸ್ಥಿತಿಯಿಂದ ಕಂಗಾಲಾಗಿರುವ ಶ್ರೀಲಂಕಾದಲ್ಲಿ ಜನರ ಪ್ರತಿಭಟನೆ ಎಡಬಿಡದೆ ನಡೆಯುತ್ತಿದ್ದು ನಿನ್ನೆ ಹಲವೆಡೆ ಹಿಂಸಾಚಾರ ಘಟನೆಗಳು ನಡೆದಿವೆ. ಈ ದುರಂತದಲ್ಲಿ ಒಬ್ಬ ಸಂಸದ ಸೇರಿ ಮೂವರು ಸಾವನ್ನಪ್ಪಿದ್ದಾರೆ. 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದು ತಿಳಿದುಬಂದಿದೆ.

Ad Widget . Ad Widget .

ಕೆಲ ಗಂಟೆಗಳ ಮೊದಲು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮಹಿಂದ ರಾಜಪಕ್ಸೆಗೆ ಸೇರಿದ ಮನೆಯೊಂದನ್ನೂ ದುಷ್ಕರ್ಮಿಗಳು ಸುಟ್ಟುಹಾಕಿರುವ ಘಟನೆ ನಡೆದಿದೆ. ರಾಜಪಕ್ಸೆ ಮಾತ್ರವಲ್ಲ ಇನ್ನೂ ಹಲವು ರಾಜಕಾರಣಿಗಳ ಮನೆಗಳನ್ನ ಪ್ರತಿಭಟನಾಕಾರರು ಬೆಂಕಿ ಇಟ್ಟ ಘಟನೆ ನಿನ್ನೆ ರಾತ್ರಿ ನಡೆದಿರುವುದು ಬೆಳಕಿಗೆ ಬಂದಿದೆ. ಹಿಂಸಾಚಾರವನ್ನು ನಿಗ್ರಹಿಸಲು ಲಂಕಾ ಸೇನೆ ಪ್ರಯತ್ನಿಸುತ್ತಿದೆ.

Ad Widget . Ad Widget .

ಶ್ರೀಲಂಕಾದಲ್ಲಿ ಸರಕಾರಿ ವಿರೋಧಿ ಪ್ರತಿಭಟನೆ ಒಂದೆಡೆಯಾದರೆ, ಇದನ್ನು ವಿರೋಧಿಸಿ ಮತ್ತೊಂದು ಗುಂಪು ಸರಕಾರದ ಪರವಾಗಿ ಪ್ರತಿಭಟನೆ ನಡೆಸುತ್ತಿದೆ. ನಿನ್ನೆ ಸರಕಾರದ ಪರ ಇರುವವರು ಮತ್ತು ಸರಕಾರ ವಿರುದ್ಧವಾಗಿ ಪ್ರತಿಭಟನೆ ನಡೆಸುತ್ತಿರುವವರ ಮಧ್ಯೆ ಘರ್ಷಣೆಯಾಗಿ ಹಿಂಸಾಚಾರಕ್ಕೆ ತಿರುಗಿದೆ. ಈ ದುರಂತ ಘಟನೆಯಲ್ಲಿ ಶ್ರೀಲಂಕಾದ ಆಡಳಿತಾರೂಢ ಎಸ್‌ಎಲ್‌ಪಿಪಿ ಪಕ್ಷದ ಸಂಸದ ಅಮರಕೀರ್ತಿ ಅಥುಕೋರಾಲ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ೧೫೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಶ್ರೀಲಂಕಾದ ವಿವಿಧೆಡೆ ಪ್ರತಿಭಟನಾಕಾರರು ಸಂಸದರ ಮನೆಗಳ ಮೇಲೆ ದಾಳಿ ಮಾಡಿದ ಘಟನೆ ತಲ್ಲಣಗೊಳಿಸಿದೆ. ಹಂಬನ್‌ತೋಟಾ ಜಿಲ್ಲೆಯಲ್ಲಿರುವ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಕುಟುಂಬದಕ್ಕೆ ಸೇರಿದ ಪೂರ್ವಿಕರ ಮನೆಗೆ ಜನರು ಬೆಂಕಿ ಇಟ್ಟಿದ್ಧಾರೆ. ರಾಜಪಕ್ಸೆ ವಸ್ತುಸಂಗ್ರಹಾಲಯವನ್ನೂ ದುಷ್ಕರ್ಮಿಗಳು ಬಿಟ್ಟಿಲ್ಲ.

ರಾಜಪಕ್ಸೆ ಮಾತ್ರವಲ್ಲ ಅನೇಕ ಸಂಸದರ ಮನೆಗಳ ಮೇಲೂ ಜನರ ದಾಳಿಯಾಗಿದೆ. ಸನತ್ ನಿಶಾಂತ, ರಮೇಶ್ ಪದಿರಾನ, ಮಹಿಪಾಲ ಹೇರಾತ್, ತಿಸ್ಸಾ ಕುಟ್ಟಿಯಾರಾಚ್ಚಿ, ನಿಮಲ್ ಲಂಜಾ, ಬಂಡುಲ ಗುಣವರ್ದನ, ಪ್ರಸನ್ನ ರಣತುಂಗ, ಚನ್ನ ಜಯಸುಮನ, ಕೋಕಿಲ ಗುಣವರ್ದನ, ಅರುಂದಿಕಾ ಫರ್ನಾಂಡೋ, ಪವಿತ್ರ ವಣ್ಣಿಯಾರಚಿ ಮೊದಲಾದ ಸಂಸದರ ಮನೆಗಳನ್ನು ಪ್ರತಿಭಟನಾಕಾರರು ಗುರಿಯಾಗಿಸಿ ಬೆಂಕಿ ಇಟ್ಟರೆನ್ನಲಾಗಿದೆ.

ವಿದ್ಯಾರ್ಥಿ ಸಂಘಟನೆಯಾದ ಅಂತರ್ ವಿಶ್ವವಿದ್ಯಾಲಯ ವಿದ್ಯಾರ್ಥಿ ಒಕ್ಕೂಟ (ಐಯುಎಸ್‌ಎಫ್)ಕ್ಕೆ ಸೇರಿದ ಹಲವು ಮಂದಿ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದು ತಿಳಿದುಬಂದಿದೆ. ಆಡಳಿತಾರೂಢ ಎಸ್‌ಎಲ್‌ಪಿಪಿ ಪಕ್ಷದ ಕಚೇರಿಗಳ ಮೇಲೂ ಜನರು ದಾಳಿ ಮಾಡಿದ್ಧಾರೆ.

Leave a Comment

Your email address will not be published. Required fields are marked *