Ad Widget .

ಪುತ್ತೂರು:‌ ಬಾಲಕಿಯನ್ನು ಶೌಚಾಲಯಕ್ಕೆ ಕರೆದೊಯ್ದು ಅನ್ಯಕೋಮಿನ ಯುವಕನಿಂದ ಅಸಭ್ಯ ವರ್ತನೆ

ಸಮಗ್ರ ನ್ಯೂಸ್: ಗದಗ ಮೂಲದ ಬಾಲಕಿಯನ್ನು ಬಾಲಕಿಯನ್ನು ಶೌಚಾಲಯ ಕ್ಕೆ ಕರೆದುಕೊಂಡು ಹೋಗಿ ಅಸಭ್ಯವಾಗಿ ವರ್ತಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.

Ad Widget . Ad Widget .

ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರುಗಡೆ ಟವರ್ ಬಿಲ್ಡಿಂಗ್ ನ ಸ್ವಚ್ಛತೆ ಕೆಲಸ ಮಾಡುತ್ತಿದ್ದ ಗದಗ ಮೂಲದ ಮಹಿಳೆಯೊಬ್ಬರ 10 ವರ್ಷದ ಮಗಳನ್ನು ನೌಫಲ್ ಸರಲಿಕಟ್ಟೆ ಎಂಬ ಮುಸ್ಲಿಂ ಕಾಮುಕ ಶೌಚಾಲಯಕ್ಕೆ ಬಾಲಕಿಯನ್ನು ಕರೆದುಕೊಂಡು ಹೋಗಿ, ಹಣ ಕೊಡುವುದಾಗಿ ನಂಬಿಸಿ ಅಸಭ್ಯವಾಗಿ ವರ್ತಿಸಿದ್ದಾನೆ.

Ad Widget . Ad Widget .

ಈ ಬಗ್ಗೆ ತಾಯಿ ಆ ಯುವಕನನ್ನು ವಿಚಾರಿಸಿದಾಗ ಅಸಭ್ಯವಾಗಿ ಬೈದು ಕಳುಹಿಸಿದ್ದಾನೆ ಎಂಬುದಾಗಿ ಹುಡುಗಿಯ ತಾಯಿ ಪೊಲೀಸರಲ್ಲಿ ಹೇಳಿಕೊಂಡಿದ್ದಾರೆ. ಹಿಂದೂ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ಪುತ್ತೂರು ಠಾಣಾ ಪೊಲೀಸರಿಗೆ ಒಪ್ಪಿಸಿದ್ದಾರೆ.

Leave a Comment

Your email address will not be published. Required fields are marked *