Ad Widget .

ಅಂತರ್ಯುದ್ಧಕ್ಕೆ ಹೊತ್ತಿ‌ ಉರಿಯುತ್ತಿರುವ ಶ್ರೀಲಂಕಾ| ಪ್ರತಿಭಟನಾಕಾರರ ಗುಂಡಿಗೆ ಸಂಸದ ಬಲಿ|

ಸಮಗ್ರ ನ್ಯೂಸ್: ನೆರೆಯ ಶ್ರೀಲಂಕಾದಲ್ಲಿ ನಡೆಯುತ್ತಿರುವ ಆರ್ಥಿಕ ಬಿಕ್ಕಟ್ಟಿನ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿದ್ದು ಆಡಳಿತ ಪಕ್ಷದ ಸಂಸದರೊಬ್ಬರು ಬಲಿಯಾಗಿದ್ದಾರೆ.

Ad Widget . Ad Widget .

ಕಳೆದ ಕೆಲ ವಾರಗಳಿಂದ ಶ್ರೀಲಂಕಾದಾದ್ಯಂತ ನಡೆಯುತ್ತಿರುವ ಈ ಪ್ರತಿಭಟನೆ ಹತ್ತಿಕ್ಕಲು ಅಲ್ಲಿನ ಪೊಲೀಸ್‌ ಹಾಗೂ ಭದ್ರತಾ ಪಡೆಗಳು ಹರಸಾಹಸ ಪಡುತ್ತಿವೆ.

Ad Widget . Ad Widget .

ಈ ನಡುವೆಯೇ ಉದ್ರಿಕ್ತರ ಗುಂಪೊಂದು ರೂಲಿಂಗ್‌ ಪಾರ್ಟಿ ಸಂಸದ ಅಮರ ಕೀರ್ತಿ ಅತುಕೋರಲ ಕಾರನ್ನ ಅಡ್ಡಗಟ್ಟಿದ್ದು ಗುಂಡು ಹಾರಿಸಿ ಹತ್ಯೆ ಮಾಡಿದೆ. ನಿತ್ತಂಬುವ ಅನ್ನೋ ಪಟ್ಟಣದಲ್ಲಿ ಈ ದುರಂತ ಸಂಭವಿಸಿದೆ. ಘರ್ಷಣೆ ವೇಳೆ ಇನ್ನಿಬ್ಬರೂ ಕೂಡ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ.

ಇತ್ತ ಪ್ರತಿಭಟನೆ ಜೋರಾಗುತ್ತಿದ್ದಂತೆ ಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಬಳಿಕ ಮಾತನಾಡಿದ ಅವರು ಪ್ರಸ್ತುತ ಸಂದರ್ಭದಲ್ಲಿ ಸರ್ವಪಕ್ಷಗಳ ಸರ್ಕಾರ ರಚಿಸೋ ಅವಶ್ಯಕತೆ ಇದ್ದು ಅದಕ್ಕಾಗಿ ರಾಜೀನಾಮೆ ನೀಡಿದ್ದೀನಿ ಅಂತ ಹೇಳಿದ್ದಾರೆ.

Leave a Comment

Your email address will not be published. Required fields are marked *