ಕಾರ್ಕಳ: ಶಾಲಾ‌ ಮಕ್ಕಳಿದ್ದ ಟೆಂಪೋ ಟ್ರಾವೆಲರ್ ಪಲ್ಟಿ – ಓರ್ವ ವಿದ್ಯಾರ್ಥಿ ಸಾವು

ಸಮಗ್ರ ನ್ಯೂಸ್: ನಿಯಂತ್ರಣ ತಪ್ಪಿದ ಟೆಂಪೋ ಟ್ರಾವೆಲರ್ ಉರುಳಿ ಬಿದ್ದು,‌ ವಿದ್ಯಾರ್ಥಿಯೋರ್ವ ಮೃತ ಪಟ್ಟ ಘಟನೆ ಕುದುರೆಮುಖ-ಮಾಳ ಹೆದ್ದಾರಿ ನಡುವೆ ಘಾಟಿ ರಸ್ತೆಯ ಎಸ್ ಕೆ ಬಾರ್ಡರ್ ಹಾಗೂ ಚೆಕ್ ಪೋಸ್ಟ್ ಬಳಿ ಮೇ.8 ಸಂಜೆ ನಡೆದಿದೆ. ಮೃತರನ್ನು ಹೇಮಂತ್ (23) ಎಂದು ಗುರುತಿಸಲಾಗಿದೆ.

Ad Widget ... ..

ಗಾಯಾಳುಗಳನ್ನು ಪಲ್ಲವಿ ಹುಣಸಿಕಟ್ಟೆ, ಅಖಿಲಾಶ್ರೀ ಲೋಳೇಕರ, ಶ್ರೇಯಾ, ಬಿಂದು ಎಂದು ಗುರುತಿಸಲಾಗಿದೆ.

Ad Widget

ಪ್ರವಾಸ ನಿಮಿತ್ತ ಹೊರನಾಡು ಕಡೆಯಿಂದ ಕಾರ್ಕಳ ಕಡೆಗೆ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದ ಕಾರಣ ದುರ್ಘಟನೆ ಸಂಭವಿಸಿದೆ‌. ಹಲವರಿಗೆ ಗಾಯಗಳಾಗಿದ್ದು, ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

Leave a Comment

Your email address will not be published. Required fields are marked *