Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವಾರ ಸಾಕಷ್ಟು ಗ್ರಹಗಳ ಬದಲಾವಣೆಗಳು ಉಂಟಾಗುವುದು ಅವುಗಳ ಪ್ರಭಾವ ರಾಶಿಚಕ್ರಗಳ ಮೇಲೆ ಗಣನೀಯವಾಗಿರುತ್ತವೆ. ಆ ಬದಲಾವಣೆಗಳು ನಿಮ್ಮ ಜೀವನದಲ್ಲಿ ಹೇಗಿರುತ್ತದೆ, ಯಾವ ರಾಶಿಯವರ ಭವಿಷ್ಯ ಉತ್ತಮವಾಗಿದೆ, ಯಾವ ರಾಶಿಯವರು ದೋಷ ಪರಿಹಾರ ಮಾಡಿಕೊಳ್ಳಬೇಕು? ತಿಳಿಯೋಣ ಬನ್ನಿ…

Ad Widget . Ad Widget .

ಮೇಷ ರಾಶಿ:
ನಿಮ್ಮ ಸಂಬಂಧಗಳ ಗಟ್ಟಿತನವನ್ನು ಕಾಣಬಹುದು. ಮಕ್ಕಳ ಬಗ್ಗೆ ಚಿಂತೆ ಹೆಚ್ಚಾಗುತ್ತದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಗಮನ ಕೊಡಬೇಕಾದ ಸಂದರ್ಭವಿದೆ. ಆರೋಗ್ಯದಲ್ಲಿ ಹೆಚ್ಚು ಚೇತರಿಕೆಯನ್ನು ಕಾಣಬಹುದು. ಸ್ತ್ರೀಯರು ಅವರ ಖರ್ಚಿನ ಮೇಲೆ ಸ್ವಯಂ ನಿಯಂತ್ರಣ ಮಾಡಿಕೊಳ್ಳುವುದು ಅಗತ್ಯ. ನಿವೃತ್ತರಾದವರಿಗೆ ಬದಲಿ ಕೆಲಸಗಳು ದೊರೆಯುವ ಸಾಧ್ಯತೆಗಳಿವೆ. ದೊಡ್ಡವರ ಮಾತನ್ನು ಧಿಕ್ಕರಿಸದೆ ಸರಿಯಾದ ಗೌರವ ಕೊಡುವುದು ನಿಮಗೆ ಒಳಿತು. ಅತಿಯಾದ ಆತ್ಮಗೌರವ ನಿಮ್ಮ ಗೌರವವನ್ನು ಕಳೆಯಬಹುದು. ಹಣದ ಒಳಹರಿವು ನಿರೀಕ್ಷೆಯಷ್ಟು ಇರುತ್ತದೆ. ಆದಾಯದಷ್ಟೇ ಖರ್ಚು ಇರುತ್ತದೆ. ಎಚ್ಚರಿಕೆಯಿಂದ ಹಣ ನಿರ್ವಹಣೆ ಮಾಡಿರಿ. ಆಸ್ತಿ ವಿಚಾರದಲ್ಲಿ ನಿಮಗೆ ಒಳಿತಾಗುತ್ತದೆ.

Ad Widget . Ad Widget .

ವೃಷಭ ರಾಶಿ: ನಿತ್ಯ ವ್ಯವಹಾರಗಳಲ್ಲಿ ಮುನ್ನಡೆಯನ್ನು ಕಾಣಬಹುದು. ಬಹಳ ಶ್ರಮವಹಿಸಿ ಮಾಡಿದ್ದ ಕೆಲಸಗಳಿಗೆ ಈಗ ಪ್ರತಿಫಲ ಬರುತ್ತದೆ. ಹಿರಿಯ ಅಧಿಕಾರಿಗಳ ಸಹಾಯದಿಂದ ಉದ್ಯೋಗದಲ್ಲಿ ಪ್ರಗತಿಯನ್ನು ಕಾಣಬಹುದು. ಕೆಲವರು ನಿಮ್ಮ ಬಗ್ಗೆ ವಿಶೇಷ ಮಮಕಾರವನ್ನು ತೋರಿಸಿ ಸಾಕಷ್ಟು ಸಹಾಯ ಮಾಡುವರು. ನಿಸರ್ಗ ಪ್ರೇಮಿಗಳಿಗೆ ಸರ್ಕಾರದಿಂದ ಮನ್ನಣೆ ದೊರೆತು ಗೌರವಾದರಗಳು ಹರಿದುಬರುತ್ತವೆ. ವಿದ್ಯಾರ್ಥಿಗಳಿಗೆ ಸ್ವಲ್ಪ ಹಿನ್ನಡೆ ಎನಿಸಿದರೂ ಫಲಿತಾಂಶಕ್ಕೆ ತೊಂದರೆ ಇಲ್ಲ. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ನಿಧಾನಗತಿಯನ್ನು ಕಾಣಬಹುದು. ವಿದೇಶಿ ಸರ್ಕಾರಿ ಸಂಸ್ಥೆಗಳಿಗೆ ಕಚ್ಚಾವಸ್ತುಗಳನ್ನು ಪೂರೈಕೆ ಮಾಡುವವರಿಗೆ ವ್ಯವಹಾರ ವಿಸ್ತರಿಸುತ್ತದೆ. ಹಣದ ಒಳಹರಿವು ನಿರೀಕ್ಷೆಯ ಮಟ್ಟದಲ್ಲಿ ಇರುತ್ತದೆ.

ಮಿಥುನ ರಾಶಿ: ಈ ವಾರ ನಿಮಗೆ ಉತ್ತಮವಾಗಿರುತ್ತದೆ. ದೂರ ಪ್ರಯಾಣದ ಸಾಧ್ಯತೆಗಳು ಇರುತ್ತವೆ. ಹಣದ ಹರಿವು ಉತ್ತಮವಾಗಿರುತ್ತವೆ. ಸರ್ಕಾರಿ ಕೆಲಸ ಕಾರ್ಯಗಳು ಸರಾಗವಾಗಿ ನಡೆಯುತ್ತವೆ. ವಿದ್ಯಾರ್ಥಿಗಳು ಸ್ವಲ್ಪ ಹಿನ್ನಡೆಯನ್ನು ಕಾಣಬಹುದು. ಕೊಂಚ ಅನಾರೋಗ್ಯ ಕಾಡಬಹುದು. ವೃತ್ತಿಯಲ್ಲಿ ಹಿತಶತ್ರುಗಳು ಹೆಚ್ಚಾಗಬಹುದು. ಸಂಗಾತಿಯ ಜೊತೆ ಕಾವೇರಿದ ಮಾತುಗಳು ಆಗಬಹುದು, ತಾಳ್ಮೆಯಿಂದ ಇರಿ. ಅನಿರೀಕ್ಷಿತವಾಗಿ ಧನಸಹಾಯ ಬರುವ ಸಾಧ್ಯತೆಯಿದೆ. ಆಸ್ತಿ ಹಂಚಿಕೆ ವಿಚಾರದಲ್ಲಿ ತಂದೆಯೊಡನೆ ಸ್ವಲ್ಪ ಗಲಾಟೆಯಾಗಬಹುದು. ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುವುದರ ಜೊತೆಗೆ ವಿದೇಶ ಯಾನದ ಸಾಧ್ಯತೆ ಇದೆ. ಯಾವುದೇ ಸಂದರ್ಭದಲ್ಲೂ ಅತಿಯಾದ ಮಾತು ಖಂಡಿತ ಬೇಡ.

ಕಟಕ ರಾಶಿ: ಕೃಷಿ ಕಾರ್ಯದಲ್ಲಿ ಇರುವವರಿಗೆ ಅತ್ಯಂತ ತುರುಸಿನ ಕಾರ್ಯಗಳು ಎದುರಾಗಬಹುದು. ಕೆಲಸದ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಇಷ್ಟ ಮಿತ್ರರ ಆಗಮನದಿಂದ ಮನೆಯಲ್ಲಿ ಸಂತೋಷ ಹೆಚ್ಚುತ್ತದೆ. ಚಿಲ್ಲರೆ ವ್ಯಾಪಾರಿಗಳಿಗೆ ಹೆಚ್ಚು ವ್ಯವಹಾರವಾಗುವ ಸಾಧ್ಯತೆಗಳಿವೆ. ಮನಸ್ಸಿನಲ್ಲಿ ಇಲ್ಲದ ಆಲೋಚನೆಗಳು ಮೂಡಬಹುದು. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ವ್ಯವಹಾರ ಕುದುರುವ ಸಾಧ್ಯತೆಗಳಿವೆ. ಹಿರಿಯರ ಆರೋಗ್ಯದ ಬಗ್ಗೆ ಎಚ್ಚರವಹಿಸಿರಿ. ಹಣದ ಹರಿವು ಉತ್ತಮ. ಖಾದ್ಯತೈಲ ವ್ಯಾಪಾರಿಗಳಿಗೆ ಸಮೃದ್ಧಿಯ ವ್ಯಾಪಾರ ಆಗುತ್ತದೆ. ರಾಸಾಯನಿಕ ವಸ್ತುಗಳನ್ನು ತಯಾರಿಸಿ ಮಾರುವವರಿಗೆ ವ್ಯಾಪಾರ ಹೆಚ್ಚುತ್ತದೆ. ಆಸ್ತಿ ಖರೀದಿ ವಿಚಾರದಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಿರಿ.

ಸಿಂಹ ರಾಶಿ: ಮಹಿಳೆಯರಿಗೆ ಸಂಭ್ರಮಪಡುವ ಅವಕಾಶಗಳು ಹೆಚ್ಚಾಗುತ್ತವೆ. ಒಡ ಹುಟ್ಟಿದವರೊಂದಿಗೆ ಬೆರೆತು ಸಂತೋಷಪಡುವಿರಿ. ಪ್ರತಿಸ್ಪರ್ಧಿಗಳ ಸವಾಲನ್ನು ನೋಡಿ ಕಾರ್ಯವೈಖರಿಯನ್ನು ಬದಲಿಸಿಕೊಳ್ಳಿರಿ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಸಾಕಷ್ಟು ಯಶಸ್ಸು ದೊರೆಯುತ್ತದೆ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಇದ್ದ ಅಪನಂಬಿಕೆಯನ್ನು ದೂರ ಮಾಡಿ ದೃಢತೆಯನ್ನು ಸಾಧಿಸುವಿರಿ. ಬಂಧುಗಳಿಂದ ಕೆಲವು ಕೆಲಸಗಳಿಗೆ ವಿರೋಧ ವ್ಯಕ್ತವಾಗುವ ಸಾಧ್ಯತೆಗಳಿವೆ. ಹೊಟ್ಟೆಯಲ್ಲಿ ಕೆಲವರಿಗೆ ತೊಂದರೆ ಕಾಣಿಸಿಕೊಳ್ಳಬಹುದು. ಸಂಗಾತಿಯ ಕಡೆಯವರಿಂದ ಮುಜುಗರ ಪಡುವ ಸನ್ನಿವೇಶಗಳು ಏರ್ಪಡಬಹುದು. ಪಾಲುದಾರಿಕೆಯ ವ್ಯವಹಾರಗಳಲ್ಲಿ ಹೆಚ್ಚಿನ ಲಾಭವಿರುತ್ತದೆ.

ಕನ್ಯಾ ರಾಶಿ: ಬ್ಯಾಂಕ್ ನೌಕರರಿಗೆ ಅಭಿವೃದ್ಧಿಯ ಪಥ ಇರುತ್ತದೆ. ಹಣಕಾಸಿನ ವ್ಯವಹಾರವನ್ನು ಮಾಡುತ್ತಿರುವವರಿಗೆ ಸಾಮಾನ್ಯ ಮುನ್ನಡೆ ಇರುತ್ತದೆ. ಪತ್ರಿಕಾ ಪ್ರತಿನಿಧಿಗಳಿಗೆ ಉತ್ತಮ ಮಾನ್ಯತೆ ದೊರೆಯುತ್ತದೆ. ಕೃಷಿಕರಿಗೆ ಉತ್ತಮ ಬೆಳೆಯ ಜೊತೆಗೆ ಉತ್ತಮ ಆದಾಯವು ಇರುತ್ತದೆ. ಸ್ಥಿರಾಸ್ತಿ ಖರೀದಿ ಬಗ್ಗೆ ಚಿಂತಿಸಿ ಮುನ್ನಡೆಯಬಹುದು. ವ್ಯವಹಾರದಲ್ಲಿ ಉನ್ನತಿಯನ್ನು ಕಾಣಬಹುದು. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಬಂಧುಗಳಿಂದ ಕಿರಿಕಿರಿ ಉಂಟಾಗಬಹುದು. ಸರ್ಕಾರಿ ಸಂಸ್ಥೆಗಳಿಗೆ ಆಹಾರವಸ್ತುಗಳನ್ನು ಪೂರೈಕೆ ಮಾಡುವವರಿಗೆ ಸಾಕಷ್ಟು ಲಾಭವಿರುತ್ತದೆ. ಕೆಲವರಿಗೆ ಬೆನ್ನುನೋವು ಜಾಸ್ತಿಯಾಗುವ ಸಂದರ್ಭವಿದೆ. ಕುಲದೇವತಾ ದರ್ಶನಕ್ಕೆ ಹೋಗುವ ಸಾಧ್ಯತೆ ಇದೆ.

ತುಲಾ ರಾಶಿ: ರಾಯಭಾರ ಕಚೇರಿಯಲ್ಲಿ ಇರುವವರೆಗೆ ಸಾಕಷ್ಟು ಅಭಿವೃದ್ಧಿ ಇರುತ್ತದೆ. ರತ್ನ ವ್ಯಾಪಾರಿಗಳಿಗೆ ವ್ಯವಹಾರ ವಿಸ್ತರಣೆಯಾಗುವ ಯೋಗವಿದೆ. ಗುಡಿ ಕೈಗಾರಿಕೆಯವರಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ. ಭೂ ವ್ಯವಹಾರಗಳಲ್ಲಿ ಸ್ವಲ್ಪ ಲಾಭ ಬರುತ್ತದೆ. ಯಂತ್ರ ತಯಾರಿಕಾ ವಿಭಾಗದಲ್ಲಿರುವ ತಂತ್ರಜ್ಞರಿಗೆ ಹೆಚ್ಚಿನ ಪ್ರಾಮುಖ್ಯತೆ ಬರುತ್ತದೆ ಹಾಗೂ ಉತ್ತಮ ವೇತನ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚು ಪರಿಶ್ರಮ ವಹಿಸಬೇಕಾದ ಅನಿವಾರ್ಯತೆಯಿದೆ. ಅಜೀರ್ಣದಿಂದ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಆಗುವ ಸಾಧ್ಯತೆ ಇದೆ. ಸಂಗಾತಿಯ ಅಥವಾ ಸ್ನೇಹಿತರ ಸಹಕಾರದಿಂದ ಕೆಲವು ಕೆಲಸಗಳು ಆಗುತ್ತವೆ.

ವೃಶ್ಚಿಕ ರಾಶಿ: ಹೊಸ ಹೊಸ ಹೂಡಿಕೆಯಲ್ಲಿ ಹಣ ಹೂಡುವಂತೆ ಪ್ರೇರೆಪಿಸಲು ಜನರು ಬರುತ್ತಾರೆ. ಆದರೆ ಸರಿಯಾಗಿ ವಿಚಾರ ಮಾಡಿ ಹಣ ಹೂಡಿಕೆ ಮಾಡಿರಿ. ಮನೆಯಲ್ಲಿ ರಂಪಾಟಗಳು ಹೆಚ್ಚಾಗುವ ಸಾಧ್ಯತೆ ಇದೆ, ತಾಳ್ಮೆಯಿಂದ ಇದ್ದಲ್ಲಿ ಎಲ್ಲವೂ ಸರಿಯಾಗುತ್ತದೆ. ಚಿಲ್ಲರೆ ತರಕಾರಿಯನ್ನು ಮಾರುವವರಿಗೆ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಸ್ನೇಹಿತ ರೊಡನೆ ಹಂಚಿಕೊಂಡ ಕೆಲವೊಂದು ವಿಷಯಗಳು ನಿಮಗೆ ಉತ್ತಮ ಫಲ ಕೊಡುತ್ತವೆ. ಉದ್ಯೋಗದ ಸ್ಥಳದಲ್ಲಿ ಇದ್ದ ಗೊಂದಲಗಳು ನಿವಾರಣೆಯಾಗುತ್ತವೆ. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ತಕ್ಷಣದ ಮುನ್ನಡೆ ಯನ್ನು ಕಾಣಬಹುದು. ಅತಿ ಉಷ್ಣ ದೇಹವನ್ನು ಕಾಡಬಹುದು.

ಧನಸ್ಸು ರಾಶಿ: ಆರ್ಥಿಕ ಸಂಕಷ್ಟಗಳು ಸ್ವಲ್ಪಮಟ್ಟಿಗೆ ದೂರಾಗುತ್ತವೆ. ಲೇವಾದೇವಿ ವ್ಯವಹಾರಗಳು ಸದ್ಯಕ್ಕೆ ಬೇಡ. ಪಾಲುದಾರಿಕೆ ವ್ಯವಹಾರವನ್ನು ಮುಂದುವರೆಸ ಬಹುದು. ಬಂಧುಗಳು ನಿಮ್ಮನ್ನು ನೋಡಿ ಅಸೂಯೆ ಪಡುವರು. ನಾಸ್ತಿಕ ಸ್ವಭಾವದವರಿಗೆ ಆಸ್ತಿಕತೆಯತ್ತ ಆಸಕ್ತಿ ಹೆಚ್ಚುತ್ತದೆ. ಹಣದ ಒಳಹರಿವು ಸಾಮಾನ್ಯ ವಾಗಿರುತ್ತದೆ. ಸಂಗಾತಿಯ ಕಡೆಯವರಿಂದ ಆಸ್ತಿ ಅಥವಾ ದವಸಗಳು ದೊರೆಯಬಹುದು. ಪಿತ್ರಾರ್ಜಿತ ಆಸ್ತಿಯಿಂದ ಆದಾಯ ಬರುತ್ತದೆ. ವ್ಯಾಪಾರ ಮತ್ತು ವ್ಯವಹಾರ ಮಾಡುವವರಿಗೆ ಆದಾಯದಲ್ಲಿ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ಹೈನುಗಾರಿಕೆ ಮಾಡುವವರಿಗೆ ಆದಾಯ ಹೆಚ್ಚಾಗದಿದ್ದರೂ ನಷ್ಟವೇನಿಲ್ಲ. ವಿದ್ಯಾರ್ಥಿ ಗಳಿಗೆ ಸಾಕಷ್ಟು ಅಧ್ಯಯನಮಾಡಿ ಮೇಲೆ ಬರುವ ಅವಕಾಶಗಳು ದೊರೆಯುತ್ತವೆ.

ಮಕರ ರಾಶಿ: ಹಿರಿಯ ಅಧಿಕಾರಿಗಳ ಭೇಟಿಯಿಂದ ಮುಂದೂಡಲ್ಪಡುತ್ತದೆ ಕೆಲವು ಕೆಲಸಗಳು ಆಗುತ್ತವೆ. ಕುಶಲಕರ್ಮಿಗಳಿಗೆ ಹೆಚ್ಚಿನ ಮಾರುಕಟ್ಟೆ ಒದಗುತ್ತದೆ. ನವೀನ ರೀತಿಯ ಗೃಹ ನಿರ್ಮಾಣಕ್ಕೆ ಚಾಲನೆಯನ್ನು ನೀಡುವಿರಿ. ತೆರಿಗೆತಜ್ಞರಿಗೆ ಬೇಡಿಕೆ ಹೆಚ್ಚಾಗಿ ಆದಾಯವು ಸಹ ಹೆಚ್ಚುತ್ತದೆ. ಸರ್ಕಾರಿ ನೌಕರರಿಗೆ ಬೆಂಬಲಕರ ವಾತಾವರಣ ದೊರೆಯುತ್ತದೆ. ವಾಪಸ್ಸು ಬರಬೇಕಾಗಿದ್ದ ನಿಮ್ಮ ಹಣದಲ್ಲಿ ಸ್ವಲ್ಪ ಭಾಗ ಬರುತ್ತದೆ. ಹೆಣ್ಣು ಮಕ್ಕಳಿಗೆ ತವರು ಮನೆಯಿಂದ ಯಾವುದಾದರೂ ಒಂದು ರೀತಿಯ ಉಡುಗೊರೆ ದೊರೆಯುವ ಸಾಧ್ಯತೆ ಇದೆ. ತಾಯಿಯಿಂದ ಹೆಚ್ಚಿನ ಸಲಹೆ ಸಹಕಾರಗಳು ದೊರೆಯುತ್ತವೆ. ಕಳೆದುಹೋಗಿದ್ದ ಸಂಬಂಧಗಳು ಪುನಹ ಆರಂಭಗೊಳ್ಳುತ್ತವೆ. ಆರ್ಥಿಕ ರಂಗದಲ್ಲಿಯೂ ಸಾಮಾನ್ಯ ಪ್ರಗತಿ ಇರುತ್ತದೆ.

ಕುಂಭ ರಾಶಿ: ಪ್ರೇಮಿಗಳು ವಂಚನೆಗೆ ಒಳಗಾಗುವ ಸಾಧ್ಯತೆಗಳಿವೆ. ಹಿರಿಯರ ಮಾತನ್ನು ಧಿಕ್ಕರಿಸುವುದರಿಂದ ನಿಮಗೆ ಹಾನಿಯಾಗಬಹುದು. ವಿದ್ಯಾರ್ಥಿಗಳು ಹೆಚ್ಚಿನ ಏಕಾಗ್ರತೆಯನ್ನು ಅಧ್ಯಯನದಲ್ಲಿ ಅಳವಡಿಸಿಕೊಳ್ಳಬೇಕು. ಹೋಟೆಲ್ ಉದ್ಯಮಿಗಳಿಗೆ ಸ್ವಲ್ಪಮಟ್ಟಿನ ಆದಾಯ ಏರಿಕೆ ಆಗಲಿದೆ. ಸಿದ್ಧವಸ್ತ್ರ ವ್ಯಾಪಾರಿಗಳಿಗೆ ಹೆಚ್ಚಿನ ವ್ಯಾಪಾರ ನಡೆದು ಆದಾಯ ಹೆಚ್ಚುತ್ತದೆ. ಕೆಲವು ಯುವಕರು ದುಡುಕಿನ ನಡವಳಿಕೆಯಿಂದ ಅಗೌರವಕ್ಕೆ ಒಳಗಾಗುವ ಸಾಧ್ಯತೆ ಇದೆ. ಆದಾಯದಷ್ಟೇ ಖರ್ಚು ಇರುತ್ತದೆ. ದೇವತಾ ಕಾರ್ಯಗಳನ್ನು ಮಾಡಲು ಹೆಚ್ಚು ಆಸಕ್ತಿ ವಹಿಸುವಿರಿ. ಶೀತಬಾಧೆ ಇರುವವರು ಹೆಚ್ಚಿನ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕಾದ ಸಂದರ್ಭ ಇದೆ. ಪ್ರಕಾಶಕರಿಗೆ ಕೆಲವು ದೊಡ್ಡ ಬರಹಗಾರರ ಕೃತಿಗಳನ್ನು ಪ್ರಕಾಶನ ಮಾಡುವ ಅವಕಾಶವಿರುತ್ತದೆ.

ಮೀನ ರಾಶಿ: ಕೆಲವರಿಗೆ ಉದ್ಯೋಗದಲ್ಲಿ ಪದೋನ್ನತಿ ದೊರೆಯುವ ಸಾಧ್ಯತೆ ಇದೆ. ಬಂಗಾರದ ವಸ್ತುಗಳನ್ನು ಕೊಳ್ಳಲು ಉತ್ಸಾಹ ತೋರುವಿರಿ. ಉದ್ದಿಮೆಯನ್ನು ನಡೆಸುತ್ತಿರುವವರಿಗೆ ಅಗ್ನಿಅವಘಡಗಳು ಕಾಡುವ ಸಾಧ್ಯತೆಗಳಿವೆ. ನಿಮ್ಮ ಕೆಲವು ಕೆಲಸಗಳಿಗೆ ಅನಿರೀಕ್ಷಿತ ಅಡೆತಡೆ ಆಗಬಹುದು. ಮನಸ್ಸಿನ ಸಮಸ್ಯೆಗಳಿಗೆ ಶಾಂತಚಿತ್ತದಿಂದ ಯೋಚಿಸಿದಲ್ಲಿ ಪರಿಹಾರ ಕಾಣುತ್ತದೆ. ವೃತ್ತಿ ಕ್ಷೇತ್ರದಲ್ಲಿ ಹಿತಶತ್ರುಗಳು ಹೆಚ್ಚಾಗುವ ಸಂದರ್ಭವಿದೆ. ಹಳೆಯ ಕೇಸುಗಳಲ್ಲಿ ನಿಮಗೆ ಹೆಚ್ಚಿನ ಅನುಕೂಲ ಆಗುತ್ತದೆ. ಸರ್ಕಾರದಿಂದ ದೊರೆಯಬೇಕಿದ್ದ ಅನುದಾನ ದೊರೆಯುತ್ತದೆ. ನಿಮ್ಮ ಅತಿ ಬುದ್ಧಿವಂತಿಕೆ ನಿಮಗೆ ಮುಳುವಾಗುವ ಲಕ್ಷಣಗಳಿವೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ಹೆಣ್ಣುಮಕ್ಕಳ ಅಭಿವೃದ್ಧಿ ನಿರೀಕ್ಷೆಯಂತೆ ಆಗುತ್ತದೆ.

Leave a Comment

Your email address will not be published. Required fields are marked *