ಸಮಗ್ರ ನ್ಯೂಸ್: ಉತ್ತರ ಕನ್ನಡ ಜಿಲ್ಲೆಯಲ್ಲಿ ಖೋಟಾ ನೋಟಿಗೆ ಸಂಬಂಧಿಸಿದಂತೆ ಈವರೆಗೆ ದಾಖಲಾದ ಎಲ್ಲಾ ಪ್ರಕರಣಗಳಲ್ಲಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಖೋಟಾ ನೋಟುಗಳನ್ನು ತಂದು ಚಲಾವಣೆ ಮಾಡಿದ ಪ್ರಕರಣಗಳೇ ಬೆಳಕಿಗೆ ಬಂದಿದ್ದವು. ಆದರೆ ಇದೀಗ ಜಿಲ್ಲಾ ಕೇಂದ್ರ ಕಾರವಾರದಿಂದಲೇ ಬೇರೆಡೆಗೆ ಖೋಟಾ ನೋಟು ಮುದ್ರಿಸಿ ಸಾಗಿಸಲಾಗುತ್ತಿತ್ತು ಎನ್ನುವ ಸಂಗತಿ ಕರಾವಳಿಗರನ್ನು ಬೆಚ್ಚಿ ಬೀಳಿಸಿದೆ. ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಕಾರವಾರ ಮತ್ತು ಗೋವಾ ಮೂಲದ ಅವರನ್ನು ಪೊಲೀಸರು ಬಂಧಿಸಿದ್ದು ಕಾರವಾರದವರೇ ಕಿಂಗ್ ಪಿನ್ ಎಂಬ ಮಾಹಿತಿ ಬಯಲಾಗಿದೆ.
ಕಾರವಾರ ನಗರದ ಕೋಡಿಭಾಗ ಭದ್ರಾ ಹೋಟೆಲ್ ಬಳಿ ಖೋಟಾ ನೋಟು ಚಲಾವಣೆ ವೇಳೆ ಸಿಕ್ಕಿ ಬಿದ್ದ ಪ್ರಕರಣದ ಮುಖ್ಯ ಕಿಂಗ್‌ಫಿನ್ ಕಾರವಾರದವನೇ ಆಗಿದ್ದು, ಇಲ್ಲಿಯೇ ಖೋಟಾ ನೋಟುಗಳು ಮುದ್ರಿಸಿ ತನ್ನ ಆಪ್ತರ ಮೂಲಕ ವ್ಯವಸ್ಥಿತವಾಗಿ ಚಲಾವಣೆ ಮಾಡಿಸುತ್ತಿದ್ದ ಆತಂಕಕಾರಿ ಸಂಗತಿ ತಿಳಿದು ಬಂದಿದೆ.
ಈಗಾಗಲೇ ಜಿಲ್ಲೆಯ ಕರಾವಳಿ ಭಾಗ ಹಾಗೂ ನೆರೆಯ ಗೋವಾ ರಾಜ್ಯದಲ್ಲಿ ಲಕ್ಷಾಂತರ ರೂ.ಮೌಲ್ಯದ ನಕಲಿ ಕರೆನ್ಸಿಗಳು ಚಲಾವಣೆ ಆಗಿದ್ದು, ತಲೆಮರೆಸಿಕೊಂಡಿರುವ ಈ ಜಾಲದ ಪ್ರಮುಖ ಸೂತ್ರಧಾರ ಮುಸ್ತಾಕ್ ಹಸನ್ ಶೇಖ್ ಜೊತೆ ಇನ್ನೂ ಹಲವರ ಸಾಥ್ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು ಪೊಲೀಸರು ತನಿಖೆ ತೀವೃಗೊಳಿಸಿದ್ದಾರೆ.